ಮದುವೆಗೆಂದು ಕರೆದೊಯ್ದು ಉನ್ನತ ಅಧಿಕಾರಿಯ ಪುತ್ರನ ಕೊಲೆಗೈದ ಸ್ನೇಹಿತರು!

By
2 Min Read

ಹರಿಯಾಣ: ದೆಹಲಿಯ ಖ್ಯಾತ ಎಸಿಪಿ ಪುತ್ರನನ್ನು ಮದುವೆಗೆಂದು (wedding)  ಕೆರದುಕೊಂಡು ಹೋಗಿ ಆತನ ಸ್ನೇಹಿತರೇ (Friends)  ಕೊಲೆ ಮಾಡಿರುವ ಘಟನೆ ಸೋನೆಪತ್‌ನಲ್ಲಿ (Sonepat)  ನಡೆದಿದೆ.

ಲಕ್ಷ್ಯ ಚೌಹಾಣ್ (24) ಮೃತ ವ್ಯಕ್ತಿ. ದೆಹಲಿಯ ಸಹಾಯಕ ಪೊಲೀಸ್ ಆಯುಕ್ತ ಯಶ್‌ಪಾಲ್ ಸಿಂಗ್ (Assistant Commissioner of Police)  ಅವರ ಪುತ್ರನಾದ ಚೌಹಾಣ್ ತೀಸ್ ಹಜಾರಿ ನ್ಯಾಯಾಲಯದ ವಕೀಲರಾಗಿದ್ದರು. ಲಕ್ಷ್ಯ ಸ್ನೇಹಿತರಾದ, ವಿಕಾಸ್ ಭಾರದ್ವಾಜ್ ಮತ್ತು ಸಹಚರ ಅಭಿಷೇಕ್ ಕಾಲುವೆಗೆ ತಳ್ಳಿ ಕೊಲೆ ಮಾಡಿ ಪರಾರಿಯಾಗಿದ್ದರು. ಇದನ್ನೂ ಓದಿ:  ಮದುವೆಯಾಗಿ 12 ವರ್ಷ- ಇಬ್ಬರು ಮಕ್ಕಳನ್ನು ಬಿಟ್ಟು ಗೃಹಿಣಿ ಆತ್ಮಹತ್ಯೆ

ನಡೆದಿದ್ದೇನು..?: ಸೋಮವಾರದಂದು ಲಕ್ಷ್ಯ ಅವರು ತಮ್ಮ ಸ್ನೇಹಿತರೊಂದಿಗೆ ಸೋನೆಪತ್‌ನಲ್ಲಿ ಮದುವೆಗೆಂದು ಅವರ ಸ್ನೇಹಿತರ ಜೊತೆ ಹೋಗಿದ್ದರು. ಆದರೆ ಅವರು ಮನೆಗೆ ಬಾರದ ಕಾರಣ ತಂದೆ ಯಶ್‌ಪಾಲ್ ಸಿಂಗ್ ಅವರು ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ದೂರು ದಾಖಲಿಸಿಕೊಂಡು ಶೋಧ ಕಾರ್ಯ ನಡೆಸಿದಾಗ ಚೌಹನ್ ಅವರ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಪ್ಪನ ಕೊಲೆಗೆ 3 ಲಕ್ಷ ಸುಪಾರಿ ಕೊಟ್ಟ ಮಗ!

ಕೊಲೆಗೆ ಕಾರಣವೇನು..?: ಚೌಹಣ್ ಅವರು ಭಾರದ್ವಾಜ್ ಬಳಿ ಸಾಲ ಪಡೆದಿದ್ದು, ಹಣವನ್ನು ಮರುಪಾವತಿಸಿರಲಿಲ್ಲ. ಇದನ್ನು ಭಾರದ್ವಾಜ್, ಅಭಿಷೇಕ್ ಬಳಿ ಹೇಳಿದ್ದಾನೆ. ಹೀಗಾಗಿ ಇಬ್ಬರು ಸೇರಿ ಚೌಹಣ್ ಕೊಲೆಗೆ ಸಂಚು ರೂಪಿಸಿ ಮದುವೆಗೆ ಆಹ್ವಾನಿಸಿ ಕೆರದುಕೊಂಡು ಹೋಗಿದ್ದಾರೆ. ಮದುವೆ ಮುಗಿದ ನಂತರ ಮೂವರು ವಾಪಸ್ ಆಗುವಾಗ ಮೂತ್ರವಿಸರ್ಜನೆಗೆಂದು ಕಾಲುವೆಯತ್ತ ಕರೆದೊಯ್ದಿದ್ದಾರೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಇಬ್ಬರು ಚೌಹಾಣ್‌ನನ್ನು ಕಾಲುವೆಗೆ ತಳ್ಳಿದ್ದಾರೆ. ಇತ್ತ ಕೃತ್ಯ ಎಸಗಿ ಭಾರದ್ವಾಜ್ ಮತ್ತು ಅಭಿಷೇಕ್ ಘಟನಾ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ದುರಂತ – 30 ಲಕ್ಷಕ್ಕೂ ಅಧಿಕ ಮೌಲ್ಯ ವಸ್ತುಗಳು ಬೆಂಕಿಗಾಹುತಿ

ಘಟನೆಗೆ ಸಂಬಂಧಿಸಿದಂತೆ ಅಭೀಷೆಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಪ್ರಕರಣದ ಕುರಿತು ಬಾಯಿಬಿಟ್ಟಿದ್ದಾನೆ. ಇನ್ನು ಪರಾರಿಯಾಗಿರುವ ಭಾರದ್ವಾಜ್‌ಗಾಗಿ ಪೊಲೀಸರು ತೀವ್ರ ಹುಟುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!

Share This Article