Bigg Boss: ಮದುವೆ ಪ್ಲ್ಯಾನಿಂಗ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಮ್ರತಾ

By
1 Min Read

ಕಾಶದೀಪ, ಪುಟ್ಟಗೌರಿ ಮದುವೆ, ನಾಗಿಣಿ 2 (Nagini 2) ಸೀರಿಯಲ್ ಮೂಲಕ ಮೋಡಿ ಮಾಡಿದ ನಟಿ ನಮ್ರತಾ ಗೌಡ (Namratha Gowda) ಅವರು ಇದೀಗ ತಮ್ಮ ಮದುವೆ (Wedding) ಪ್ಲ್ಯಾನಿಂಗ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಗೌರಿಶಂಕರ’ ಸೀರಿಯಲ್‌ಗೆ ಗುಡ್‌ ಬೈ ಹೇಳಿದ ಕೌಸ್ತುಭ ಮಣಿ

ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಚೆಲುವೆ ನಮ್ರತಾ ಅವರು ಬಿಗ್ ಬಾಸ್‌ಗೆ (Bigg Boss Kannada 10) ಈ ಬಾರಿ ಕಾಲಿಟ್ಟಿದ್ದರು. ಇನ್ನೇನು ಫಿನಾಲೆಗೆ ಕಾಲಿಡಬೇಕು ನಟಿ ಮುಗ್ಗರಿಸಿದ್ದರು. 15ನೇ ವಾರ ನಮ್ರತಾ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದೀಗ ಹಲವು ಸಂದರ್ಶನ ಕೊಡುವಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಮ್ಮ ಕನಸಿನ ಮನೆ ಮತ್ತು ಮದುವೆ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ಶೋಭಾ ಶೆಟ್ಟಿ ನಿಶ್ಚಿತಾರ್ಥ- ಮದುವೆ ಡೇಟ್‌ ಫಿಕ್ಸ್

ಮನೆ ಗೃಹಪ್ರವೇಶ ಮಾಡಿದಾಗ ಕುಟುಂಬಸ್ಥರು ಎನೆಲ್ಲಾ ಮಾತನಾಡಿದ್ದರು ಎಂದು ನಮ್ರತಾ ಸಂದರ್ಶನವೊಂದರಲ್ಲಿ ಬೇಸರ ಹೊರಹಾಕಿದ್ದಾರೆ. ನಾನು ಮನೆ ತಗೊಂಡಾಗ ನನ್ನ ಸಂಬಂಧಿಕರು ಹೇಳಿದ್ದಾರೆ. ಎಲ್ಲಿಂದ ಹಣ ಬರುತ್ತೆ ಅಂತ ಮಾತಾಡಿದ್ರು. ನಾನು ಮನೆಗೆ ಬರದೆ ಶೂಟಿಂಗ್ ಸೆಟ್‌ನಲ್ಲಿಯೇ ಇದ್ದು, ಅಲ್ಲಿಯೇ ಸ್ನಾನ ಮಾಡಿಕೊಂಡು ಮತ್ತೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೂ ಇದೆ. ನಾನು ಬಸ್‌ನಲ್ಲಿ ಓಡಾಡುತ್ತಿದ್ದೆ. ನನ್ನ ಕೆಲಸ ನನ್ನ ತಂದೆ-ತಾಯಿಗೆ ಮಾತ್ರ ಗೊತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಅಂಥವರ ಜೊತೆ ಇದ್ದ ಮೇಲೆ ಈಗ ಯಾರು ಏನೂ ಹೇಳಿದ್ರೂ ಅದನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ನಟಿ ಮಾತನಾಡಿದ್ದಾರೆ.

ಇನ್ನೂ ಮದುವೆ (Wedding) ಬಗ್ಗೆ ಮೊದಲು ತುಂಬಾ ಆಸೆ ಇತ್ತು. ಸಿಕ್ಕಾಪಟ್ಟೆ ಮದುವೆ ಬಗ್ಗೆ ಆಸೆ ಇಟ್ಟುಕೊಂಡಿದ್ದ ನಾನು ಈಗ ಇದರಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ. ಸಾಧನೆ ಮಾಡಬೇಕು, ದೇಶ ಸುತ್ತಬೇಕು, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮದುವೆ ಬಗ್ಗೆ ನಂಬಿಕೆ ತರಿಸುವವರು ಸಿಕ್ಕರೆ ಯೋಚನೆ ಮಾಡ್ತೀನಿ ಎಂದು ನಮ್ರತಾ ತಮ್ಮ ಮನದಾಳದ ಮಾತನ್ನು ತಿಳಿಸಿದ್ದಾರೆ.

Share This Article