ರಾಮಲಲ್ಲಾರ ಕಣ್ಣನ್ನು ಚಿನ್ನದ ಉಳಿ, ಬೆಳ್ಳಿ ಸುತ್ತಿಗೆಯಲ್ಲಿ ಮಾಡಿದ್ದೇನೆ: ‌ಶಿಲ್ಪಿ ಅರುಣ್‌ ಯೋಗಿರಾಜ್

Public TV
2 Min Read

ಬೆಂಗಳೂರು: ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಬಾಲಕರಾಮ ನೆಲೆಯಾಗಿದ್ದಾರೆ. ಈ ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್‌ ರಾಮನೇ ಬಂದು ನಿಂತಿರುವಂತೆ ಭಾಸವಾಗುತ್ತದೆ. ಇನ್ನು ಕಣ್ಣುಗಳನ್ನು ನೋಡಿದರೆ ನೀವು ಕೂಡ ಒಂದು ಬಾರಿ ಕಳೆದುಹೋಗುವುದತೂ ಪಕ್ಕಾ. ಈ ಕಣ್ಣುಗಳ ಕೆತ್ತನೆಯ ವೇಳೆ ತನಗಾದ ಅನುಭವವನ್ನು ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರು ಪಬ್ಲಿಕ್‌ ಟಿವಿ ಜೊತೆ ಹಂಚಿಕೊಂಡಿದ್ದಾರೆ.

ಅಯೋಧ್ಯೆಯಿಂದ ಬೆಂಗಳೂರಿಗೆ ವಾಪಸ್‌ ಆಗ್ತಿದ್ದಂತೆಯೇ ಹೆಚ್‌.ಆರ್‌ ರಂಗನಾಥ್‌ (HR Ranganath) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕಣ್ಣಗಳನ್ನು ಗರ್ಭಗುಡಿ ಹೊರಗಡೆ ಕೆತ್ತಲಾಗಿದೆ. ಅದಕ್ಕಂತಲೇ ನೇತ್ರಮಿಲನ ಎಂಬ ಕಾರ್ಯಕ್ರಮದ ಮೂಲಕ ಮುಹೂರ್ತ ಫಿಕ್ಸ್‌ ಮಾಡಿದ್ದರು. ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಮುಖ ಕ್ಲೋಸ್‌ ಮಾಡಿದೆವು. ನಂತರ ಅವರು ಜೇನುತಪ್ಪ, ಹಳದಿ ಎಲ್ಲಾ ಹಾಕಿ ಕಣ್ಮುಚ್ಚಿ ಬಿಡುತ್ತಿದ್ದರು. ಈ ಕಣ್ಣುಗಳನ್ನು ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಯಲ್ಲಿ ಮಾಡಿರುತ್ತೇನೆ ಎಂದು ಹೇಳಿದರು.

ಈ ಕಣ್ಣುಗಳನ್ನು ಕೆತ್ತನೆ ಮಾಡುವಾಗ ತುಂಬಾ ಭಯ ಆಗಿತ್ತು. ಈ ಸಮಯದಲ್ಲಿ ನಾನು ನನ್ನ ತಂದೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಅವರ ಬಳಿ ನಾನು ಹೆಂಗೆ ಮಾಡಿದ್ದೇನೆ ಅಪ್ಪ ಅಂತಾ ಕೇಳಬೇಕಿತ್ತು. ಆದರೆ ಅಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ಇದ್ದೆ. ಭಯ ತಡೆದುಕೊಳ್ಳಲು ಆಗದೆ ಕೊನೆಗೆ ನನ್ನ ಸಹಪಾಠಿಗಳ ಜೊತೆ ಕಣ್ಣಿನ ಬಗ್ಗೆ ಹೇಳಿಕೊಂಡೆ ಎಂದರು.

ಪ್ರಭಾವಳಿಯ ತೀರ್ಮಾನ ಮಾಡಿದ್ದು ಯಾರು..?: ಪ್ರಭಾವಳಿಯ ತೀರ್ಮಾನವನ್ನು ನಾನೇ ಮಾಡಿದ್ದಾಗಿದೆ. ವಿಷ್ಣುವಿನ ಒಂದು ರೂಪ ಆಗಿರುವುದರಿಂದ ಪ್ರಭಾವಳಿಯಲ್ಲಿ ದಶಾವತಾರ ತಗೊಂಡೆ ಎಂದು ಹೇಳಿದರು. ಇದನ್ನೂ ಓದಿ: ರಾಮಲಲ್ಲಾ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದು ಹೇಗೆ?- ಶಿಲ್ಪಿ ಅರುಣ್‌ ಯೋಗಿರಾಜ್‌ ವಿವರಿಸಿದ್ದು ಹೀಗೆ

ಮುಂದೆ ಏನು?: ಕೊಡುವ ಜವಾಬ್ದಾರಿಗಳನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗಬೇಕಲು ಎಂಬುದು ನನ್ನ ಮುಂದಿರುವ ಚಾಲೆಂಜ್‌ ಆಗಿದೆ. ಉನ್ನತ ಮಟ್ಟದಲ್ಲಿ ಹೇಗೆ ಕೆಲಸ ಮಾಡಿ ವಾಪಸ್ ಕೊಡಬಹುದು ಎಂಬುದಷ್ಟೇ ನನ್ನ ಯೋಚನೆಗಳಾಗಿವೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಪ್ರಪಂಚದ ಅತೀ ಅದೃಷ್ಟವಂತ ನಾನು ಅಂತಾ ಅರುಣ್‌ ಯೋಗಿರಾಜ್‌ ಹೇಳಿದರು. ನಮ್ಮ ಕುಟುಂಬ ಸಾಕಷ್ಟು ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬರುತ್ತಿದೆ. ಇಂದು ಅಷ್ಟು ದೊಡ್ಡ ದೇವಸ್ಥಾನಕ್ಕೆ ನಾನೇ ವಿಗ್ರಹ ಮಾಡಿಕೊಟ್ಟೆ ಎಂಬುದನ್ನು ನನಗೆ ನಂಬೋಕೆ ಆಗ್ತಿಲ್ಲ. ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ನನಗೆ ಮಗುವನ್ನು ಅರಮನೆಗೆ ತಂದಂತೆ ಭಾಸವಾಗ್ತಿತ್ತು ಎಂದರು.

ಫೋಟೋಗಳಲ್ಲಿ ನೋಡುವುದಕ್ಕಿಂತಲೂ ರಾಮಲಲ್ಲಾರನ್ನು ಎದುರುಗಡೆ ನೋಡುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ನಾನೇ ಮಾಸ್ಕ್‌ ಹಾಕಿಕೊಂಡು ಹೋಗಿ ಎಲ್ಲರನ್ನೂ ಹೇಗಿದೆ ವಿಗ್ರಹ ಎಂದು ಕೇಳುತ್ತಿದ್ದೆ. ಎಲ್ಲರೂ ತುಂಬಾ ಚೆನ್ನಾಗಿದೆ ಅಂತ ಹೇಳಿದರು. ಅವತ್ತು ಹೋಗಿ ಒಳ್ಳೆ ನಿದ್ದೆ ಮಾಡಿದೆ ಎಂದರು.

Share This Article