Bigg Boss: ದೊಡ್ಮನೆಯಿಂದ ಡ್ರೋನ್ ಪ್ರತಾಪ್ ಔಟ್?

Public TV
1 Min Read

ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada 10) ಕಿರುತೆರೆ ಲೋಕದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿರೋವಂತಹ ಸೀಸನ್ ಆಗಿದ್ದು, ಇದೀಗ ನಮ್ರತಾ (Namratha) ಎಲಿಮಿನೇಷನ್ ನಂತರ ಡ್ರೋನ್ ಪ್ರತಾಪ್ (Drone Prathap) ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಅಂಜನಾದ್ರಿ ಬೆಟ್ಟದಲ್ಲಿ ‘ಅಯೋಧ್ಯೆ ರಾಮ’ ಚಿತ್ರಕ್ಕೆ ಚಾಲನೆ

ದೊಡ್ಮನೆಯಲ್ಲಿ ಇದೀಗ ಒಬ್ಬೊಬ್ಬರೇ ಎಲಿಮಿನೇಟ್ ಆಗಿ 7 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದರು. ಆದರೆ ಈ ವಾರಾಂತ್ಯ ನಮ್ರತಾ ಬಿಗ್ ಬಾಸ್‌ನಿಂದ ಔಟ್ ಆಗುವ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದರು. ಈ ಬೆನ್ನಲ್ಲೇ ಡ್ರೋನ್ ಪ್ರತಾಪ್ ಕೂಡ ಎಲಿಮಿನೇಟ್ (Elimination) ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಡ್ರೋನ್ ಪ್ರತಾಪ್ ಸಾಕಷ್ಟು ವಿಚಾರವಾಗಿ ಟ್ರೋಲ್ (Troll) ಆಗಿದ್ದರು. ಆದರೆ ಬಿಗ್ ಬಾಸ್‌ಗೆ ಬಂದ್ಮೇಲೆ ಪ್ರತಾಪ್ ಮೇಲಿನ ನೆಗೆಟಿವ್ ಅಂಶಗಳು ಪಾಸಿಟಿವ್ ಆಗಿದ್ದವು. ಇದೀಗ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರತಾಪ್ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಕಾಯಬೇಕಿದೆ.

ಫಿನಾಲೆಗೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ಸಂಗೀತಾ ಮತ್ತು ವಿನಯ್ ಸೇರಿದಂತೆ ಉಳಿದುಕೊಂಡಿರೋ ಸ್ಪರ್ಧಿಗಳ ನಡುವೆ ಟಪ್ ಫೈಟ್ ಇದೆ. ಯಾರಿಗೆ ಗೆಲುವಿನ ವಿಜಯಲಕ್ಷ್ಮಿ ಸಿಗಲಿದ್ದಾಳೆ ಕಾಯಬೇಕಿದೆ.

Share This Article