ನಿಗಮ ಮಂಡಳಿ ನೇಮಕಕ್ಕೆ ನಮ್ಮ ಅಭಿಪ್ರಾಯ ಪಡೆದಿಲ್ಲ – ಹೈಕಮಾಂಡ್ ವಿರುದ್ಧವೇ ಪರಮೇಶ್ವರ್ ಅಸಮಾಧಾನ

Public TV
1 Min Read

ಬೆಂಗಳೂರು: ನಮ್ಮ ಅಭಿಪ್ರಾಯ ತೆಗೆದುಕೊಂಡು ಮಾಡದಿರುವುದಕ್ಕೆ ನಿಗಮ ಮಂಡಳಿ (Corporation Board) ನೇಮಕ ಇಷ್ಟು ಗೊಂದಲ ಆಗ್ತಿದೆ ಅಂತ ಗೃಹ ಸಚಿವ ಪರಮೇಶ್ವರ್ (G Parameshwara), ಹೈಕಮಾಂಡ್ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ.

ನಿಗಮ ಮಂಡಳಿ ನೇಮಕ ತಡ ಆಗ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿಗಮ ಮಂಡಳಿ ನೇಮಕಾತಿಗೆ ನಮ್ಮ ಅಭಿಪ್ರಾಯವನ್ನೂ ಪಡೆಯಬೇಕು. ಆದ್ರೆ ನಮ್ಮನ್ನ ಯಾರೂ ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿರಬಹುದು. ಆದರೆ ನಮ್ಮ ಜತೆ ಮಾತನಾಡಿ ಪಟ್ಟಿ ಮಾಡಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮಗೆ ದಶರಥ ರಾಮ ಬೇಕು, ಮೋದಿ ರಾಮ  ಬೇಡ- ಜಿ. ಪರಮೇಶ್ವರ್ ಹೊಸ ವಿವಾದ

ಜಿಲ್ಲಾವಾರು ಕೆಲಸ ಮಾಡಿರೋದು ನಮಗೆ ಗೊತ್ತಿರುತ್ತೆ. ಸಿಎಂ, ಪಕ್ಷದ ‌ಅಧ್ಯಕ್ಷರು ಇದ್ದಾರೆ ಅವರಿಗೆ ಜವಾಬ್ದಾರಿ ಕೊಡಬೇಕು. ಸಿಎಂ, ಅಧ್ಯಕ್ಷರು ಜಿಲ್ಲಾ ನಾಯಕರ ಜೊತೆ ಮಾತನಾಡಿ ಪಟ್ಟಿ ಮಾಡಬೇಕು. ಆದರೆ ಈಗ ಜನರಲ್ ಸೆಕ್ರೆಟರಿ ಅವರೇ ಮಾಡ್ತಿದ್ದಾರೆ. ಪಟ್ಟಿ ನಿಧಾನವಾಗಿದೆ. ನೋಡೋಣ ಏನ್ ಮಾಡ್ತಾರೆ ಅಂತ ಎಂದು ಹೇಳಿದ್ದಾರೆ.

ಕಾರ್ಯಕರ್ತರು ಯಾರ‍್ಯಾರು ಕೆಲಸ ಮಾಡಿದ್ದಾರೆ ಅಂತ ನನಗೆ ಗೊತ್ತಿದೆ. ಹತ್ತಾರು ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರೋದಕ್ಕೆ ಹೀಗೆ ಆಗಿದೆ. ಕೆಲಸ ಮಾಡೋರಿಗೆ ಕೊಡದೇ ಹೋದ್ರೆ, ಕೆಲಸ ಮಾಡಿರೋರಿಗೆ ನೋವಾಗುತ್ತದೆ. ಅಸಮಾಧಾನ ಆಗುತ್ತದೆ, ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರನ್ನ ಕೇಳಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದೇವಾಲಯದ ಆದಾಯ ಕಡಿಮೆ- ಅರ್ಚಕರ ಸಂಬಳ ವಾಪಸ್ ಕೇಳಿ‌ ರಾಜ್ಯ ಸರ್ಕಾರ ನೋಟಿಸ್ 

Share This Article