ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ

By
2 Min Read

ಹೈದರಾಬಾದ್‌: ಜನವರಿ 22ರಂದು ರಾಮಲಲ್ಲಾ (Ayodhya Ram Lalla) ಪ್ರಾಣಪ್ರತಿಷ್ಠೆಗಾಗಿ ದೇಶ ವಿದೇಶಗಳಿಂದ ಉಡುಗೊರೆಗಳ ಮಹಾಪೂರವೇ ಹರಿದುಬರುತ್ತಿದೆ. ಹಾಗೆಯೇ ಹೈದರಾಬಾದ್‌ ಮೂಲದ ವ್ಯಕ್ತಿಯೊಬ್ಬರು ಪ್ರತಿದಿನ ಒಂದೊಂದು ಕೆಜಿ ಲಡ್ಡುವನ್ನು ಮೀಸಲಿಟ್ಟು, ಶ್ರೀರಾಮನ ನೈವೇದ್ಯಕ್ಕಾಗಿ 1,265 ಕೆ.ಜಿ ತೂಕದ ವಿಶೇಷ ಲಡ್ಡು (Speical Laddu) ತಯಾರಿಸಿದ್ದಾರೆ.

ಹೈದರಾಬಾದ್‌ ಮೂಲದ ವ್ಯಕ್ತಿ ನಾಗಭೂಷಣ ರೆಡ್ಡಿ ಎಂಬವರು ಜ.22ರಂದು ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ನೈವೇದ್ಯಕ್ಕಾಗಿ 1,265 ಕೆಜಿ ತೂಕದ ಲಡ್ಡು ತಯಾರಿಸಿದ್ದು, ಬುಧವಾರ (ಇಂದು) ರಾಮಮಂದಿರಕ್ಕೆ ಅರ್ಪಿಸಲಿದ್ದಾರೆ. ಇದರೊಂದಿಗೆ ಸಹೋದರ ಲಕ್ಷ್ಮಣ, ಪತ್ನಿ ಸೀತಾ, ಭಂಟ ಹನುಮಾನ್‌ ಹೆಸರಿನ ಲಡ್ಡುಗಳನ್ನೂ ತಯಾರಿಸಲಾಗಿದೆ  ಈ ಮೂಲಕ ಶ್ರೀರಾಮ ಕೃಪೆಗೆ ಪಾತ್ರರಾಗಲು ಬಯಸಿದ್ದಾರೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

ದುಶಾಸನ್‌ ಎಂಬ ಸ್ವೀಟ್‌ ಮಾಸ್ಟರ್‌ ಈ ಲಡ್ಡುವನ್ನು ತಯಾರಿಸಿದ್ದಾರೆ. ಜೊತೆಗೆ ಸುಮಾರು 30 ಜನರ 24 ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿ ಈ ವಿಶೇಷ ಲಡ್ಡು ತಯಾರಿಸಿದ್ದಾರೆ, ಇದನ್ನ ಜೋಡಿಸಲು 4 ಗಂಟೆ ತೆಗೆದುಕೊಂಡಿದ್ದಾರೆ ಎಂದು ನಾಗಭೂಷಣರೆಡ್ಡಿ ತಿಳಿಸಿದರು.

ಈ ಕುರಿತು ಮಾತನಾಡಿರುವ ನಾಗಭೂಷಣ್‌ ರೆಡ್ಡಿ, 2000ನೇ ಇಸವಿಯಿಂದ ನಾನು ಶ್ರೀ ರಾಮ ಕ್ಯಾಟರಿಂಗ್ ಎಂಬ ಕೆಲಸ ಪ್ರಾರಂಭಿಸಿದೆ. ರಾಮಜನ್ಮಭೂಮಿಯಲ್ಲಿ ದೇವಸ್ಥಾನದ ಭೂಮಿಪೂಜೆ ನಡೆಯುತ್ತಿದ್ದಾ ನಾವು ಶ್ರೀರಾಮನಿಗೆ ಏನು ನೈವೇದ್ಯ ನೀಡಬಹುದು ಎಂದು ಯೋಚಿಸಿದ್ದೆವು.‌ ಕೊನೆಗೆ ದೇವಸ್ಥಾನ ಭೂಮಿಪೂಜೆ ಆರಂಭವಾದ ದಿನದಿಂದ ದೇವಸ್ಥಾನ ತೆರೆಯುವ ದಿನದ ವರೆಗೆ ಪ್ರತಿದಿನ 1 ಕೆಜಿ ಲಡ್ಡು ಮೀಸಲಿಡಲು ನಿರ್ಧರಿಸಿದೆವು. ಅದರಂತೆ ಮಂದಿರಕ್ಕಾಗಿ 1,265 ಕೆಜಿ ಲಡ್ಡು ಸಿದ್ಧಪಡಿಸಿದ್ದು, ಇದನ್ನು ರೆಫ್ರಿಜರೇಟೆಡ್ ಬಾಕ್ಸ್‌ನಲ್ಲಿ ಇಟ್ಟಿದ್ದೇವೆ. ಇಂದೇ ಅಯೋಧ್ಯೆಗೆ ಕೊಂಡೊಯ್ದು ರಾಮನ ನೈವೇದ್ಯಕ್ಕೆ ಅರ್ಪಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ; ಇಂದಿನಿಂದ ಪೂಜಾಕಾರ್ಯ ಆರಂಭ – ಯಾವ ದಿನ ಏನು ಕಾರ್ಯಕ್ರಮ?

ಒಟ್ಟಿನಲ್ಲಿ ನನಗೆ ತುಂಬಾ ಸಂತೋಷವಾಗಿದೆ. ನಾನು ಇದೇ ಮೊದಲಬಾರಿಗೆ ಶ್ರೀರಾಮನಿಗಾಗಿ ಇಂತಹ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

Share This Article