ವಿನಯ್ ಟೀಮ್‌ನಿಂದ ಮತ್ತೊಂದು ವಿಕೆಟ್ ಪತನ – ದೊಡ್ಮನೆಯಿಂದ ಮೈಕಲ್ ಎಲಿಮಿನೇಟ್

Public TV
1 Min Read

ಬಿಗ್ ಬಾಸ್ (Bigg Boss) ಮನೆಯಲ್ಲಿ ಕಳೆದ ವಾರ ಸಿರಿ ಎಲಿಮಿನೇಟ್ ಆಗಿದ್ದರು. ಈ ವಾರ ವಿನಯ್ ಟೀಮ್‌ನ ಮತ್ತೊಂದು ವಿಕೆಟ್ ಪತನವಾಗಿದೆ. ಬಿಗ್ ಬಾಸ್ ಮನೆಯಿಂದ ಮೈಕಲ್ ಅಜಯ್ (Michael) ಔಟ್ ಆಗಿದ್ದಾರೆ.

ಮಾಡೆಲ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೈಕಲ್, ಇಲ್ಲಿಗೆ ಬಂದ ಮೇಲೆ ಕನ್ನಡ ಕಲಿತು ಜನಮನ ಗೆದ್ದರು. ಕನ್ನಡ ಮಣ್ಣಿನ ಮಗನಾಗಿ ಗುರುತಿಸಿಕೊಂಡರು. ಸಾಕಷ್ಟು ಬಾರಿ ಬಿಗ್ ಬಾಸ್ ಶೋ ಬಂದಿದ್ದಕ್ಕೆ ಕನ್ನಡ ಕಲಿತೆ ಎಂದು ಅಭಿಮಾನದಿಂದ ಮೈಕಲ್ ಮಾತನಾಡಿದ್ದರು. ಇಶಾನಿ ಜೊತೆಗಿನ ಲವ್ವಿ-ಡವ್ವಿ ವಿಚಾರವಾಗಿ ಮೈಕಲ್ ಸಖತ್ ಹೈಲೆಟ್ ಆಗಿದ್ದರು. ಇದನ್ನೂ ಓದಿ: ಈ ವಾರ ‘ಬಿಗ್ ಬಾಸ್’ ಮನೆಯಿಂದ ಹೊರ ಬರೋದು ಯಾರು?

ಬಿಗ್ ಬಾಸ್‌ಗೆ ಕಾಲಿಟ್ಟ 6 ವಾರಗಳ ಕಾಲ ಸಖತ್ ಆಗಿ ಮೈಕಲ್ ಆಟವಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮೈಕಲ್ ಮನೆಯಲ್ಲಿ ರಾಂಗ್ ಆಗಿ ವರ್ತಿಸುತ್ತಿದ್ದರು. ಬಿಗ್ ಬಾಸ್ ಆದೇಶಕ್ಕೆ ಮತ್ತು ಕ್ಯಾಪ್ಟನ್ ಸ್ಥಾನಕ್ಕೆ ಗೌರವ ಕೊಡದೇ ವರ್ತಿಸಿದ್ದರು. ಇದಕ್ಕೆ ಶನಿವಾರ ಎಪಿಸೋಡ್‌ನಲ್ಲಿ ಸುದೀಪ್ ಬೆಂಡೆತ್ತಿದ್ದರು.

ನನಗೆ ರೂಲ್ಸ್ ಫಾಲೋ ಮಾಡೋಕೆ ಆಗಲ್ಲ ಎಂದು ಅಹಂನಿಂದ ಹೇಳಿದ್ದ ಮೈಕಲ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿ ಇಂದು ಮನೆಗೆ ಕಳುಹಿಸಿದ್ದಾರೆ. ಮೈಕಲ್ ಎಲಿಮಿನೇಷನ್ ಸಹಜವಾಗಿ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ಡ್ರೋನ್: ನಿಟ್ಟುಸಿರಿಟ್ಟ ಫ್ಯಾನ್

Share This Article