ಆಸ್ಪತ್ರೆಗೆ ದಾಖಲಾಗಲು ಅಸಲಿ ಕಾರಣವೇನು?- ಆರೋಗ್ಯದ ಬಗ್ಗೆ ಡ್ರೋನ್‌ ಪ್ರತಾಪ್‌ ಸ್ಪಷ್ಟನೆ

Public TV
2 Min Read

ದೊಡ್ಮನೆಯ ಆಟ 90 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹೀಗಿರುವಾಗ ಇತ್ತೀಚಿಗಷ್ಟೇ ಪ್ರತಾಪ್ (Prathap) ಆಸ್ಪತ್ರೆಗೆ ದಾಖಲಾಗಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹಬ್ಬಿತ್ತು. ಪೊಲೀಸರು ಕೂಡ ಡ್ರೋನ್ ಪ್ರತಾಪ್ ದಾಖಲಾಗಿದ್ದ ಆಸ್ಪತ್ರೆಗೆ ಮತ್ತು ಬಿಗ್ ಬಾಸ್ (Bigg Boss Kannada 10) ಸೆಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಪ್ರತಾಪ್ (Drone Prathap) ಆತ್ಮಹತ್ಯೆಗೆ ಯತ್ನಿಸಿಲ್ಲ. ಇದೊಂದು ಸುಳ್ಳು ಸುದ್ದಿ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಸ್ಪಷ್ಟನೆ ನೀಡಿದ್ದರು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಡ್ರೋನ್ ಪ್ರತಾಪ್ ಇದೀಗ ಬಿಗ್ ಬಾಸ್ ಮನೆಗೆ (Bigg Boss) ವಾಪಸ್ ಆಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಿಗೆ, ವೀಕ್ಷಕರಿಗೆ ಪ್ರತಾಪ್ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ತಮಗೆ ಏನಾಗಿತ್ತು ಎಂಬುದನ್ನ ಪ್ರತಾಪ್ ಅವರೇ ವಿವರಿಸಿದ್ದಾರೆ. ನ್ಯೂ ಇಯರ್ ಕಳೆದ ಬಳಿಕ ನಾನು ಒಂದು ಹೊತ್ತೂ ಊಟ ಮಾಡಿರಲಿಲ್ಲ. ಹೀಗಾಗಿ, ಫುಡ್ ಪಾಯ್ಸನ್ ಆಗಿತ್ತು. ಬೇರೇನೂ ತಪ್ಪು ತಿಳುವಳಿಕೆ ಮಾಡಿಕೊಳ್ಳಬೇಡಿ ಎಂದು ಸ್ಪರ್ಧಿಗಳ ಮುಂದೆ ಡ್ರೋನ್ ಪ್ರತಾಪ್ ಹೇಳಿದ್ದಾರೆ. ಆ ಮೂಲಕ ವೀಕ್ಷಕರಿಗೂ ಡ್ರೋನ್ ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ.‌ ಇದನ್ನೂ ಓದಿ:‘ಕೆಂಡ’ಕ್ಕೆ ಆಸ್ಕರ್, ಬಾಫ್ಟಾ ಖ್ಯಾತಿಯ ಕಿಲ್ಜಾಯ್ ಫಿಲಂಸ್ ಸಹ ನಿರ್ಮಾಣದ ಸಾಥ್

ಅದೇ ರಾತ್ರಿ ಮನಸ್ಸಿಗೆ ಸ್ವಲ್ಪ ಬೇಸರ ಆಗಿತ್ತು. ಮನೆಯೊಳಗೆ ನಡೆದ ಕೆಲವು ಘಟನೆಗಳಿಂದಾಗಿರಬಹುದು ಅಥವಾ ಕೆಲವು ನೆನಪುಗಳಿಂದಾಗಿರಬಹುದು ನ್ಯೂ ಇಯರ್ ರಾತ್ರಿ ಕಳೆದ ಮೇಲಿಂದ ನಾನು ಒಂದು ಹೊತ್ತು ಕೂಡ ಏನೂ ಆಹಾರ ಸೇವಿರಿಸಲಿಲ್ಲ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ ತಿಂದಿರಲಿಲ್ಲ. ಯಾರ್ಯಾರೋ ಊಟ ತಿನ್ನಿಸಲು ಬಂದ್ರಿ. ಊಟ (Food) ಮಾಡು ಅಂತ ಹೇಳಿದ್ರಿ. ಆಗಿದೆ ಅಂತ ನಾನು ಹೇಳ್ತಾ ಇದ್ದೆ.

ಚಪಾತಿ ಮಾಡಬೇಕಾದರೆ, ಮೂರನ್ನ ಪ್ರೆಸ್ ಮಾಡಿ ನಾನೇ ಒಳಗಡೆ ಎತ್ತಿಡುತ್ತಿದ್ದೆ. ಯಾರಿಗೂ ಗೊತ್ತಾಗದ ರೀತಿ ನಾನೇ ಎತ್ತಿಡುತ್ತಿದ್ದೆ. ನಾನು ಊಟ ಮಾಡಿ ಎರಡು ದಿನ ಆಗಿತ್ತು. ಎರಡು ದಿನಗಳಿಂದ ಊಟ ಮಾಡದ ಕಾರಣ.. ಹೊಟ್ಟೆಯಲ್ಲಿ ಗ್ಯಾಸ್ಟಿçಕ್ ಆಗಿತ್ತು. ಫುಡ್ ಪಾಯ್ಸನ್ ತರಹ ಕನ್ವರ್ಟ್ ಆಗಿತ್ತು ಎಂದು ಪ್ರತಾಪ್ ತಮ್ಮ ಆರೋಗ್ಯಕ್ಕಾದ ಸಮಸ್ಯೆ ಬಗ್ಗೆ ಇತರೆ ಸ್ಪರ್ಧಿಗಳ ಮುಂದೆ ವಿವರಣೆ ನೀಡಿದರು.

ನಾನೀಗ ಆರೋಗ್ಯವಾಗಿದ್ದೇನೆ. ಬೇರೇನೂ ತಪ್ಪು ತಿಳುವಳಿಕೆ ಬೇಡ ಎಂದು ಡ್ರೋನ್ ಪ್ರತಾಪ್ (Drone Prathap)  ಸ್ಪಷ್ಟಪಡಿಸಿದರು. ಬಳಿಕ ಬಿಗ್ ಬಾಸ್ ವೇದಿಕೆಗೆ ಡ್ರೋನ್ ಪ್ರತಾಪ್ ನಮಸ್ಕರಿಸಿದರು.

Share This Article