ಶಬರಿಮಲೆ ಭಕ್ತರಿಗೆ ಮಸೀದಿಯಲ್ಲಿ ಆಶ್ರಯ – ಸೌಹಾರ್ದತೆ ಮೆರೆದ ಮುಸ್ಲಿಮರು

Public TV
1 Min Read

ಮಡಿಕೇರಿ: ಪ್ರಸ್ತುತ ನಡೆಯುತ್ತಿರುವ ರಾಜಕೀಯ ಮತ್ತು ಕೋಮು ಸಂಘರ್ಷ ಪರಿಸ್ಥಿತಿಯ ನಡುವೆಯೂ ಕೊಡಗಿನ (Kodagu) ಮುಸ್ಲಿಂ ಬಾಂಧವರು ಸೌಹಾರ್ದತೆಗೆ ಸಾಕ್ಷಿಯಾದರು.

ಕೊಡಗಿನ ವಿರಾಜಪೇಟೆ ತಾಲ್ಲೂಕಿನ ತಿತಿಮತಿಯಲ್ಲಿರುವ ಲಿವಾಉಲ್ ಹುದಾ ಜಮ್ಮಾ ಮಸೀದಿಯು (Mosque) ಸಂಕಷ್ಟಕ್ಕೆ ಸಿಲುಕಿದ್ದ ಶಬರಿಮಲೆಯ ಭಕ್ತರಿಗೆ ಆಶ್ರಯ ಹಾಗೂ ಸೌಲಭ್ಯ ಕಲ್ಪಿಸುವ ಮೂಲಕ ಸಹೋದರತ್ವ ಮತ್ತು ಸಾಮರಸ್ಯದ ಸಂದೇಶ ನೀಡಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಘೋಷವಾಕ್ಯ, ಲೋಗೋ ಅನಾವರಣ

ಬೆಳಗಾವಿ ಮೂಲದ ಐವರು ಭಕ್ತರು (Sabarimala Devotees) ಕೊಡಗು ಮಾರ್ಗವಾಗಿ ಬೈಕ್‌ನಲ್ಲಿ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಹೊರಟಿದ್ದರು. ಆದ್ರೆ ಗುರುವಾರ ರಾತ್ರಿ ವೇಳೆ ಆಗಿದ್ದರಿಂದ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಯಾತ್ರೆಯನ್ನು ತಿತಿಮತಿಯಲ್ಲಿ ಸ್ಥಗಿತಗೊಳಿಸಿದರು. ಇದನ್ನೂ ಓದಿ: ಶ್ರೀರಾಮ ನಮ್ಮ ದೇವರು, ಸೀತಾಮಾತೆ ನಮ್ಮ ತಾಯಿ – ಕಾಂಗ್ರೆಸ್‌ ಸಚಿವ ಸಂತೋಷ್‌ ಲಾಡ್

ಈ ವೇಳೆ ಕಮಲೇಶ್ ಗೌರಿ, ಭೀಮಪ್ಪ ಸನದಿ, ಎನ್. ಶಿವಾನಂದ್, ಬಿ. ಗಂಗಾಧರ್ ಮತ್ತು ಎಸ್. ಸಿದ್ದ ಐವರು ಭಕ್ತರು, ಜಮ್ಮಾ ಮಸೀದಿ ಬಳಿ ಹೋಗಿ ನೆರವು ಕೇಳಿದರು. ನಂತರ ಮಸೀದಿ ಆಡಳಿತ ಮಂಡಳಿಯವರು ಶಬರಿಮಲೆ ಭಕ್ತರ ನೆರವಿಗೆ ಧಾವಿಸಿ, ರಾತ್ರಿ ಮಸೀದಿಯಲ್ಲೇ ತಂಗಲು ಅನುಮತಿ ನೀಡಿದರು. ಅಲ್ಲದೇ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮಸೀದಿ ಅಧ್ಯಕ್ಷ ಉಸ್ಮಾನ್ ಹಾಗೂ ಕೆ. ಕತೀಬ್ ಒದಗಿಸಿಕೊಟ್ಟರು.

ಶುಕ್ರವಾರ ಬೆಳಗ್ಗೆ 6 ಗಂಟೆಗೆ ಐವರು ಭಕ್ತರು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿ ಶಬರಿಮಲೆಗೆ ತೆರಳಿದರು. ಇದಕ್ಕೂ ಮುನ್ನ ಬೆಳಗ್ಗೆ ಮಸೀದಿ ಸಮೀಪದಲ್ಲೇ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಲು ಮಸೀದಿಯವರೇ ಅವಕಾಶ ಮಾಡಿಕೊಟ್ಟಿದ್ದರು. ಸದ್ಯ ಕೊಡಗಿನಲ್ಲಿ ಈ ಸೌಹಾರ್ದತೆಯನ್ನು ಕಂಡು ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯನವ್ರೆ ನಿಮ್ದೇನು ಸರ್ಕಾರನಾ? ಸರ್ವಾಧಿಕಾರನಾ: ಪ್ರಹ್ಲಾದ್ ಜೋಶಿ ಪ್ರಶ್ನೆ

Share This Article