ಲಂಡನ್‌ ರೈಲಿನಲ್ಲಿ ಒಂಟಿ ಮಹಿಳೆಯ ಮುಂದೆ ಹಸ್ತಮೈಥುನ – ಭಾರತೀಯ ಮೂಲದ ವ್ಯಕ್ತಿಗೆ 9 ತಿಂಗಳು ಜೈಲು

Public TV
1 Min Read

ಲಂಡನ್‌: ಇಲ್ಲಿನ ಅಂಡರ್‌ಗ್ರೌಂಡ್ ರೈಲಿನಲ್ಲಿ (Underground Train) ಒಂಟಿ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ 43 ವರ್ಷದ ಭಾರತೀಯ ಮೂಲದ ವ್ಯಕ್ತಿಗೆ ಯುಕೆಯಲ್ಲಿ 9 ತಿಂಗಳು ಜೈಲು ಶಿಕ್ಷೆ ವಿಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರ ಲಂಡನ್‌ನ ವೆಂಬ್ಲಿಯಲ್ಲಿ ನೆಲೆಸಿದ್ದ ಮುಖೇಶ್ ಷಾ (43) ಅವರು ಕಳೆದ ತಿಂಗಳು ಲಂಡನ್ ಇನ್ನರ್ ಕ್ರೌನ್ ಕೋರ್ಟ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಜೊತೆಗೆ 10 ವರ್ಷಗಳ ಕಾಲ ಲೈಂಗಿಕ ಅಪರಾಧಿಗಳ ನೋಂದಣಿಗೆ ಸಹಿ ಹಾಕುವಂತೆ ಕೋರ್ಟ್‌ (London Crown Court) ಆದೇಶಿಸಿದೆ ಎಂದು ಬ್ರಿಟಿಷ್ ಸಾರಿಗೆ ಪೊಲೀಸ್ (BTP) ಹೇಳಿದೆ.

ಇದು ಶಿಕ್ಷೆಗೆ ಗುರಿಯಾದ ಬಲಿಪಶುವಿಗೆ ಅತೀವ ನೋವಾಗಿದೆ. ಆರೋಪಿಗೆ ಶಿಕ್ಷೆ ವಿಧಿಸುವುದು ಮಾತ್ರವಲ್ಲದೇ ಭವಿಷ್ಯದಲ್ಲಿ ಆತನ ಕ್ರಿಯೆಗಳನ್ನು ಮುಂದಿವರಿಸದಂತೆ ತಡೆಯಲು ಬಿಡುಗಡೆಯ ನಂತರವೂ ನಿರ್ಬಂಧಗಳನ್ನ ವಿಧಿಸಿದೆ. ಅಲ್ಲದೇ ಅಂತಹ ವಿಕೃತ ಸಂದರ್ಭದಲ್ಲಿ ಅಪರಾಧಿಯನ್ನು ಎದುರಿಸುವಲ್ಲಿ ಮಹಿಳೆ ತೋರಿದ ಧೈರ್ಯವನ್ನು ಶ್ಲಾಘಿಸಿರುವುದಾಗಿ ಬಿಟಿಪಿ ತನಿಖಾ ಅಧಿಕಾರಿ ಮಾರ್ಕ್ ಲುಕರ್ ತಿಳಿಸಿದ್ದಾರೆ.

ಅಂದು ರಾತ್ರಿ 11:40ರ ಸುಮಾರಿಗೆ ಅಂಡರ್‌ಗ್ರೌಂಡ್‌ ರೈಲು ಸಡ್ಬರಿ ಟೌನ್ ಮತ್ತು ಆಕ್ಟನ್ ಟೌನ್ ಪ್ರಯಾಣಿಸುತ್ತಿತ್ತು. ಪಿಕ್ಯಾಡಿಲಿ ಲೈನ್ ಕ್ಯಾರೇಜ್‌ನಲ್ಲಿ (ಕೋಚ್‌) ಮಹಿಳೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಳು. ಈ ಸಂದರ್ಭದಲ್ಲಿ ಮುಖೇಶ್ ಷಾ ರೈಲು ಹತ್ತಿದ್ದಾನೆ. ಅವಳ ಮುಂದೆ ಬೇಕಾಬಿಟ್ಟಿಯಾಗಿ ಕುಳಿತು ಮಹಿಳೆಯನ್ನೇ ದಿಟ್ಟಿಸಿ ಸನ್ನೆ ಮಾಡತೊಡಗಿದ್ದಾನೆ. ಇದೆಲ್ಲವನ್ನು ಮಹಿಳೆ ಗಮನಿಸಿದ್ದಾಳೆ. ಸ್ವಲ್ಪಹೊತ್ತು ಕಳೆದ ಬಳಿಕ ಆಕೆಯ ಮುಂದೆ ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ್ದಾನೆ. ಆದ್ರೆ ಮಹಿಳೆ ಧೈರ್ಯದಿಂದ ಆತನ ಅಶ್ಲೀಲ ವರ್ತನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾಳೆ. ನಂತರ ಬ್ರಿಟಿಷ್ ಸಾರಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ.

Share This Article