ತೆಲಂಗಾಣ ಸಿಎಂ ಜೊತೆ ಅದಾನಿ ಸಮೂಹ ಮಾತುಕತೆ – ರಾಹುಲ್‌ಗೆ ಪಕ್ಷದಲ್ಲೇ ಹಿನ್ನಡೆ ಎಂದ ನೆಟ್ಟಿಗರು

Public TV
1 Min Read

ಹೈದರಾಬಾದ್‌: ಅದಾನಿ ಸಮೂಹ (Adani Group) ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಯನ್ನು (Telangana CM Revanth Reddy) ಬುಧವಾರ ಭೇಟಿ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ (Congress) ವಿರುದ್ಧ ಟ್ರೋಲ್‌ (Troll) ಆರಂಭವಾಗಿದೆ.

ಚುನಾವಣಾ ಭಾಷಣದಲ್ಲಿ, ಸಂಸತ್‌ ಕಲಾಪದಲ್ಲಿ ಅದಾನಿ ಕಂಪನಿ ವಿರುದ್ಧ ಕಾಂಗ್ರೆಸ್‌ ನಾಯಕರು ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ ಈಗ ಗೌತಮ್‌ ಅದಾನಿ (Gautam Adani) ಅವರ ಪುತ್ರ ಕರಣ್‌ ಅದಾನಿ (Karan Adani) ಅವರು ರೇವಂತ್‌ ರೆಡ್ಡಿ ಅವರ ಜೊತೆ ಡೇಟಾ ಸೆಂಟರ್‌ ಮತ್ತು ಏರೋಸ್ಪೇಸ್‌ ಪಾರ್ಕ್‌ ನಿರ್ಮಾಣ ಹೂಡಿಕೆ ಸಂಬಂಧ ಮಾತುಕತೆ ನಡೆಸಿದ್ದಾರೆ.

ಅದಾನಿ ಪೋರ್ಟ್‌ ಮತ್ತು ಎಸ್‌ಇಝಡ್‌ ಕಂಪನಿಯ ಸಿಇಒ ಆಗಿರುವ ಕರಣ್‌ ಅದಾನಿ ಅವರು ರೇವಂತ್‌ ರೆಡ್ಡಿ ಜೊತೆಗಿನ ಮಾತುಕತೆ ವಿಚಾರ ಹೊರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಾಂಗ್ರೆಸ್‌ ನಾಯಕರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಂಧನ ಊಹಾಪೋಹ ಮಧ್ಯೆ 3 ದಿನ ಗುಜರಾತ್‌ ಪ್ರವಾಸ ಕೈಗೊಳ್ಳಲಿದ್ದಾರೆ ಕೇಜ್ರಿವಾಲ್‌

ರಾಹುಲ್‌ ಗಾಂಧಿ ಅವರು ಗೌತಮ್‌ ಅದಾನಿ ಅವರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದರೆ ಇತ್ತ ತೆಲಂಗಾಣ ಸಿಎಂ ಅವರು ಗೌತಮ್‌ ಅದಾನಿ ಅವರ ಪುತ್ರ ಕರಣ್‌ ಅದಾನಿ ಜೊತೆ ಮಾತನಾಡುತ್ತಾರೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ.

ಕಾಂಗ್ರೆಸ್‌ ಬೂಟಾಟಿಕೆ ಇದೊಂದು ಉತ್ತಮ ಉದಾಹರಣೆ. ರಾಹುಲ್‌ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರವಲ್ಲ. ಪಕ್ಷದಲ್ಲೇ ಅವರಿಗೆ ಹಿನ್ನಡೆಯಾಗುತ್ತಿದ್ದು, ಅವರ ಮಾತಿಗೆ ಕಾಂಗ್ರೆಸ್‌ನಲ್ಲೇ ಯಾರು ಗೌರವ ನೀಡುತ್ತಿಲ್ಲ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

 

Share This Article