ಹೊಸ ವರ್ಷದ ಆರಂಭದಲ್ಲೇ ಶ್ರೀಲೀಲಾ ಹೊಸ ಶಪಥ

Public TV
1 Min Read

ನ್ನಡದ ನಟಿ ಶ್ರೀಲೀಲಾ (Sreeleela) ಹೊಸ ವರ್ಷದಲ್ಲಿ ಹೊಸ ಶಫಥ ಮಾಡಿದ್ದಾರೆ. ಇನ್ನೇನು ನನ್ನನ್ನು ಹಿಡಿಯೋರು ಯಾರೂ ಇಲ್ಲ ಎಂದು ಶ್ರೀಲೀಲಾ ಮೆರೆಯುತ್ತಿದ್ದರು. ಆದರೆ ಕಳೆದ ವರ್ಷ ಮೂರು ಸಿನಿಮಾ ಮಕಾಡೆ ಮಲಗಿತ್ತು. ಇದೇ ಕಂಟಿನ್ಯೂ ಆದರೆ ಬಣ್ಣದ ಲೋಕವೂ ದೂರ ಸರಿಸುವುದು ನಿಶ್ಚಿತ. ಅದು ಶ್ರೀಲೀಲಾ ಅರಿವಿಗೂ ಬಂದಿದೆ. ಹಾಗಾಗಿ ಹೊಸ ವರ್ಷದ ಆರಂಭದಲ್ಲೇ ಹೊಸ ಶಪಥ ಮಾಡಿದ್ದಾರೆ.

ಶ್ರೀಲೀಲಾ ಟಾಲಿವುಡ್‌ನ (Tollywood) ಹಾಟ್ ಬ್ಯೂಟಿ. ಒಂದೇ ಒಂದು ಸಿನಿಮಾದಿಂದ ಹತ್ತತ್ತು ಸಿನಿಮಾ ಹೊಸಿಲಿಗೆ ಬಂದು ಬಿದ್ದವು. ಬಂದಾಗಲೇ ಬಾಚಿಕೊಳ್ಳಬೇಕೆನ್ನುವ ಹಪಹಪಿಗೆ ಬಿದ್ದ ಶ್ರೀಲೀಲಾ ಈಗ 3 ಚಿತ್ರದ ಸೋಲಿನ ನಂತರ ಹೊಸ ಸಿನಿಮಾ ಒಪ್ಪಿಕೊಳ್ಳೋಕೆ ಯೋಚನೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

ಅದಕ್ಕಾಗಿ ಹೊಸ ವರ್ಷದಲ್ಲಿ ಈ ಹಿಂದೆ ಒಪ್ಪಿಕೊಂಡ ಸಿನಿಮಾ ಬಿಟ್ಟು ಹೊಸ ಸಿನಿಮಾ ಒಪ್ಪಿಲ್ಲ. ಪ್ರಿನ್ಸ್ ಜೊತೆ ‘ಗುಂಟೂರು ಖಾರಂ’ ಚಿತ್ರ, ಪವನ್‌ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’ ಹಾಗೂ ವಿಜಯ್ ದೇವರಕೊಂಡ ಸಿನಿಮಾ. ಇಷ್ಟನ್ನೇ ನೆಚ್ಚಿಕೊಂಡಿದ್ದಾರೆ. ಮಹೇಶ್ ಬಾಬು (Mahesh Babu) ಜೊತೆಗಿನ ಚಿತ್ರ ಸಂಕ್ರಾಂತಿಗೆ ಬರಲಿದೆ. ಇನ್ನು ಎರಡು ಚಿತ್ರ ಅಲ್ಲಲ್ಲೇ ಮರಗಟ್ಟಿವೆ. ಮುಂದೇನು ಶ್ರೀಲೀಲಾ ಮಾಸ್ಟರ್ ಪ್ಲಾನ್ ಎಂದು ಕಾದುನೋಡಬೇಕಿದೆ.

‘ಗುಂಟೂರು ಖಾರಂ’ ಇದರ ಮೇಲೆ ಶ್ರೀಲೀಲಾ (Sreeleela) ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಉಳಿದಿಬ್ಬರ ಹೀರೋ ಸಿನಿಮಾ ಯಾವಾಗಲಾದರೂ ಶುರುವಾಗಲಿ, ಮುಗಿಯಲಿ ಆಮೇಲೆ ಹೊಸ ಸಿನಿಮಾ ಸಹಿ ಮಾಡೋಣ ಎನ್ನುವುದು ನಟಿಯ ನಿರ್ಧಾರ. ಶ್ರೀಲೀಲಾ ಮೆದುಳು ಈಗಲಾದರೂ ಕೆಲಸ ಮಾಡುತ್ತಿದೆ. ಕನ್ನಡದ ಹುಡುಗಿ ಬೇಗ ಮನೆ ಮೂಲೆ ಸೇರಬಾರದು. ಯಾವುದೇ ಭಾಷೆಯಾದರೂ ಸರಿ ಗೆದ್ದು ಬೀಗಬೇಕು ಎಂಬುದು ಅಭಿಮಾನಿಗಳ ಆಶಯ.

Share This Article