Bigg Boss: ಎಲಿಮಿನೇಷನ್‌ ನಂತರ ಸಿರಿ ಫಸ್ಟ್‌ ರಿಯಾಕ್ಷನ್‌- ನಟಿ ಹೇಳಿದ್ದೇನು?

Public TV
1 Min Read

ದುಕು, ರಂಗೋಲಿ ಸೀರಿಯಲ್ ಸೇರಿದಂತೆ ದರ್ಶನ್, ಸುದೀಪ್ (Sudeep) ನಟನೆಯ ಸಿನಿಮಾಗಳಲ್ಲಿ ನಟಿಸಿದ್ದ ಸಿರಿ ಬಿಗ್ ಬಾಸ್ ಮನೆಯಿಂದ 12ನೇ ವಾರ ಎಲಿಮಿನೇಟ್ ಆದ ಬೆನ್ನಲ್ಲೇ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಕಳೆದ ಭಾನುವಾರ (ಡಿ.31) ಔಟ್ ಆಗಿದ್ದ ಸಿರಿ (Siri) ಈಗ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ಶೇರ್ ಮಾಡಿ ಬಿಗ್ ಬಾಸ್ ಶೋನ (Bigg Boss Kannada 10) ಅನುಭವ ಶೇರ್ ಮಾಡಿದ್ದಾರೆ. ಬಿಗ್ ಬಾಸ್‌ಗೆ (Bigg Boss) ಹೋಗುವುದಕ್ಕೂ ಮುನ್ನ ಸಾಕಷ್ಟು ಯೋಚನೆ ಮಾಡಿದೆ. ಅಲ್ಲಿ ಹೋಗಿ ಹೇಗೆ ಇರುವುದು, ಏನು ಮಾಡುವುದು, ನಾನು ಇರುವುದಕ್ಕೆ ಸಾಧ್ಯನಾ ಎಂಬೆಲ್ಲಾ ವಿಚಾರವಾಗಿ ಯೋಚನೆ ಮಾಡಿದೆ. ಆದರೂ ಧೈರ್ಯ ಮಾಡಿ ಬಿಗ್ ಬಾಸ್ ಮನೆಗೆ ಹೋದೆ. ಅಲ್ಲಿ ಸಾಕಷ್ಟು ಕಲಿತೆ. ಅಲ್ಲಿಂದ ಹೊರಗೆ ಬಂದ ಮೇಲೆ ಯೋಚನೆ ಮಾಡಿದೆ. ಬಿಗ್ ಬಾಸ್ ಗೆ ಹೋಗಿ ಗಳಿಸಿದ್ದು ಏನು ಅಂತ. ಆಮೇಲೆ ಅರ್ಥ ಆಯ್ತು ನಿಮ್ಮೆಲ್ಲರ ಪ್ರೀತಿ ಗಳಿಸಿದೆ ಎಂದಿದ್ದಾರೆ ಸಿರಿ. ಇದನ್ನೂ ಓದಿ:ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

ನಾನು ಬಿಗ್ ಬಾಸ್ ಮನೆಗೆ (Bigg Boss) ಹೋದ ಮೇಲೆ ಇಷ್ಟೊಂದು ಪ್ರೀತಿ ಕೊಡುತ್ತೀರ, ಇಷ್ಟೊಂದು ಸಪೋರ್ಟ್ ಮಾಡುತ್ತೀರಾ ಅಂತ ನಿಜಕ್ಕೂ ಗೊತ್ತಿರಲಿಲ್ಲ. ಆದರೆ ನನಗೆ ಇಷ್ಟೊಂದು ಬೆಂಬಲ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಜೊತೆಗೆ ಮಾತನಾಡಬೇಕು ಎನಿಸಿದೆ. ನಿಮಗೂ ಗೊತ್ತು, ನಾನು ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆ್ಯಕ್ಟೀವ್ ಆಗಿಲ್ಲ ಅಂತ. ಆದರೆ ಆದಷ್ಟು ಬೇಗ ಲೈವ್‌ಗೆ ಬಂದು ನಿಮ್ಮಗಳ ಜೊತೆಗೆ ಮಾತನಾಡುತ್ತೇನೆ ಎಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೊರಗಿನ ಪ್ರಪಂಚವೇ ಗೊತ್ತಿರಲ್ಲ. ಊಟ, ಸರಿಯಾದ ನಿದ್ದೆಯಿರುವುದಿಲ್ಲ. ಆಟ, ಜಗಳ, ಮನಸ್ತಾಪಗಳ ನಡುವೆಯೇ ಇದ್ದ ಸಿರಿ ಈಗ ಹೊರಗೆ ಬಂದಿದ್ದಾರೆ. 83 ದಿನ ಅದೇ ಜೀವನ ನೋಡಿದ್ದ ಸಿರಿಗೆ ಈಗ ಹೊಸ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿದೆಯಂತೆ. ಹಾಗಾಗಿ ಕೊಂಚ ಸಮಯ ನೀಡಿ, ಸದ್ಯದಲ್ಲೇ ಲೈವ್‌ನಲ್ಲಿ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ಸಿರಿ ಮನವಿ ಮಾಡಿದ್ದಾರೆ.

Share This Article