ಬೆಂಗಳೂರಲ್ಲಿ ಕೆಳಗೆ ಬಿದ್ದ ಮೊಬೈಲ್‌ ಎತ್ತಿಕೊಳ್ಳಲು ಮೆಟ್ರೋ ಟ್ರ್ಯಾಕ್‌ಗೆ ಜಿಗಿದ ಮಹಿಳೆ

Public TV
1 Min Read

ಬೆಂಗಳೂರು: ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮೆಟ್ರೋ ಟ್ರ್ಯಾಕ್‌ಗೆ ಮಹಿಳೆಯೊಬ್ಬರು ಜಿಗಿದ ಆಘಾತಕಾರಿ ಘಟನೆ ಹೊಸ ವರ್ಷದಂದೇ ಬೆಂಗಳೂರಿನ (Bengaluru) ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ (Namma Metro) ನಡೆದಿದೆ.

ನಿನ್ನೆ ಸಂಜೆ 6:40 ರ ಸುಮಾರಿಗೆ ಇಂದಿರಾನಗರ ಮೆಟ್ರೋ ಸ್ಟೇಷನ್‌ನಲ್ಲಿ ಮಹಿಳೆ ಮೆಟ್ರೋಗಾಗಿ ಕಾದು ನಿಂತಿದ್ದರು. ಈ ವೇಳೆ ಅವರ ಕೈಯಿಂದ ಮೊಬೈಲ್‌ ಮೆಟ್ರೋ ಟ್ರ್ಯಾಕ್‌ ಕೆಳಗೆ ಬಿದ್ದಿದೆ. ಅದನ್ನು ಎತ್ತಿಕೊಳ್ಳಲು ಮಹಿಳೆ ಟ್ರ್ಯಾಕ್‌ಗೆ ಜಿಗಿದಿದ್ದಾರೆ. ತಕ್ಷಣ ಎಚ್ಚೆತ್ತ ಮೆಟ್ರೋ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭ – ಯಾವ ಜಿಲ್ಲೆಗೆ ಎಷ್ಟು ಡೋಸ್ ಹಂಚಿಕೆಯಾಗಿದೆ?

BMRCL ಸಿಬ್ಬಂದಿಯ ಮುಂಜಾಗ್ರತೆಯಿಂದ ಭಾರಿ ಅನಾಹುತ ತಪ್ಪಿದೆ. ಮಹಿಳೆಯ ಬೇಜವಾಬ್ದಾರಿತನದ ವರ್ತನೆಯಿಂದಾಗಿ 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ನೇರಳೆ ಮಾರ್ಗದ ಲೈನ್‌ನಲ್ಲಿ ಜಸ್ಟ್‌ ಮಿಸ್‌ ಆಗಿ ಮಹಿಳೆ ಬಚಾವ್‌ ಆಗಿದ್ದಾಳೆ ಎಂದು ಬಿಎಂಆರ್‌ಸಿಎಲ್‌ ಸ್ಪಷ್ಟನೆ ನೀಡಿದೆ.

ವಿದ್ಯುತ್ ತೆಗೆದ ನಂತರ ಎಲ್ಲವನ್ನೂ ರೀಸೆಟ್ ಮಾಡಲು 15 ನಿಮಿಷ ಬೇಕಾಯಿತು. ಸೋಮವಾರ ಹೊಸ ವರ್ಷದಂದು ಪೀಕ್‌ಹವರ್‌ನಲ್ಲೇ ಈ ರೀತಿ ಸಮಸ್ಯೆ ಆಗಿದೆ. ಇದಕ್ಕೆ ವಿಷಾದಿಸುತ್ತೇವೆ ಎಂದು ಮೆಟ್ರೋ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ವರ್ಷದ ಮೊದಲ ದಿನವೇ ಬಿಎಂಟಿಸಿಗೆ 4.37 ಕೋಟಿ ಆದಾಯ

Share This Article