ಸಹೋದರನಿಗೆ ಜಾಮೀನು- ನ್ಯಾಯಾಧೀಶರಿಗೆ ಪ್ರತಾಪ್ ಸಿಂಹ ಧನ್ಯವಾದ

Public TV
1 Min Read

ಮೈಸೂರು: ಸಹೋದರ ವಿಕ್ರಂ ಸಿಂಹಗೆ (Vikram Simha) ಜಾಮೀನು ನೀಡಿದ ಸಿಕ್ಕ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ (Pratap Simha) ಅವರು ನ್ಯಾಯಾಧೀಶರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತಮ್ಮ ಬೆನ್ನಿಗೆ ನಿಂತ ಎಲ್ಲರಿಗೂ ಹಗೂ ನ್ಯಾಯಾಧೀಶರಿಗೂ ಧನ್ಯವಾದಗಳು ಎಂದಿದ್ದಾರೆ.

ಎಕ್ಸ್ ನಲ್ಲೇನಿದೆ..?: ನನ್ನ ತಮ್ಮ ತಲೆಮರೆಸಿಕೊಳ್ಳುವ ಯಾವ ಕೆಲಸವನ್ನೂ ಮಾಡಿಲ್ಲ. ತಲೆಮರೆಸಿಕೊಳ್ಳುವವರು ತಮ್ಮದೇ ಕಾರಿನಲ್ಲಿ ಫೋನ್ ಆನ್ ಮಾಡಿಕೊಂಡು ಬೆಂಗಳೂರಿಗೆ ಹೋಗುವುದಿಲ್ಲ. ಗೌರವಾನ್ವಿತ ನ್ಯಾಯಾಧೀಶರಿಗೆ ಧನ್ಯವಾದಗಳು. ಕರೆಗಳ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ ಮೂಲಕ ಬೆನ್ನಿಗೆ ನಿಂತ ನಿಮ್ಮೆಲ್ಲರಿಗೂ, ಮಾಧ್ಯಮ ಮಿತ್ರರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ನ್ಯಾಯದ ದಾರಿಯಲ್ಲಿದ್ದೇನೆ, ಸತ್ಯಕ್ಕೆ ಜಯ ಸಿಕ್ಕಿದೆ: ವಿಕ್ರಂ ಸಿಂಹ

ಏನಿದು ಪ್ರಕರಣ?: ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಕಡಿಯಲಾಗಿದ್ದು, ಈ ಸಂಬಂಧ ಬೇಲೂರು ಆರ್‍ಎಫ್‍ಒ ಜಮೀನಿನ ಮಾಲೀಕರಾದ ಜಯಮ್ಮ, ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಿದಿರುವ ಮರಗಳನ್ನು ಅರಣ್ಯ ಇಲಾಖೆ ಡಿಪೊದಲ್ಲಿ ಸಂಗ್ರಹಿಸಲಾಗಿದೆ.

ಜಾಮೀನು ಸಿಕ್ಕಿದ್ದು ಹೇಗೆ?: ವಿಕ್ರಂಸಿಂಹ ವಿರುದ್ದ ಫಾರೆಸ್ಟ್ ಕಾಯ್ದೆ ಕಲಂ 33(5), ಕಲಂ (80), ಕಲಂ (77 ಂ), ಕಲಂ (77 ಉ) ಕಲಂ 62 ಅಡಿಯಲ್ಲಿ ರೂಲ್ಸ್ 144 ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು. ಇವು ಜಾಮೀನಿಗೆ ಅರ್ಹವಾಗಿರುವುದರಿಂದ ನ್ಯಾಯಾಧೀಶರು ಯಾವುದೇ ಷರತ್ತುಗಳನ್ನು ವಿಧಿಸದೇ ಜಾಮೀನು ಮಂಜೂರು ಮಾಡಿದ್ದಾರೆ.

Share This Article