ಕೊರೊನಾಗೆ ಇಬ್ಬರು ಬಲಿ – 74 ಪಾಸಿಟಿವ್‌, ಬೆಂಗಳೂರಿನಲ್ಲೇ 57 ಮಂದಿಗೆ ಸೋಂಕು

Public TV
1 Min Read

ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ (Karnataka) 74 ಮಂದಿಗೆ ಕೊರೊನಾ (Corona) ಪಾಸಿಟಿವ್‌ ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡದ 51 ವರ್ಷ ಮತ್ತು ಮೈಸೂರಿನ 51 ವರ್ಷದ ವ್ಯಕ್ತಿಗಳು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕೋವಿಡ್ ಬಂದವರಿಗೆ 7 ದಿನ ಕಡ್ಡಾಯ ರಜೆ, ಹೋಮ್ ಐಸೊಲೇಷನ್

ಒಟ್ಟು 6,403 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು 74 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ ಬೆಂಗಳೂರಿನಲ್ಲೇ (Bengaluru) 57 ಮಂದಿಗೆ ಸೋಂಕು ಬಂದಿದೆ.

 

ರಾಜ್ಯದಲ್ಲಿ ಒಟ್ಟು 464 ಸಕ್ರೀಯ ಕೇಸ್‌ಗಳಿದ್ದು, 423 ಮಂದಿ ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದಾರೆ. 41 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 16 ಮಂದಿ ಐಸಿಯುನಲ್ಲಿದ್ದರೆ 25 ಮಂದಿ ಜನರಲ್‌ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೋವಿಡ್‌ ವೇಳೆ 40 ಸಾವಿರ ಕೋಟಿ ಅವ್ಯವಹಾರ, 45 ರೂ. ಮಾಸ್ಕ್‌ಗೆ 485 ರೂ. ಬಿಲ್‌: ಯತ್ನಾಳ್‌ ಬಾಂಬ್‌

ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಅತಿ ಹೆಚ್ಚು 32 ಸಕ್ರೀಯ ಪ್ರಕರಣ ದಾಖಲಾಗಿವೆ. ಶಿವಮೊಗ್ಗ 9, ದಕ್ಷಿಣ ಕನ್ನಡ 8, ಹಾಸನ 8, ಮಂಡ್ಯದಲ್ಲಿ 5 ಸಕ್ರೀಯ ಪ್ರಕರಣಗಳಿವೆ.

 

Share This Article