ಲೋಕಸಭೆ ಚುನಾವಣೆ 2024 – ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಯಲ್ಲಿ ಸಿದ್ದರಾಮಯ್ಯಗೆ ಸ್ಥಾನ

Public TV
1 Min Read

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ (Lok Sabha Elections) ತಯಾರಿ ಶುರು ಮಾಡಿರುವ ಕಾಂಗ್ರೆಸ್‌ (Congress) ಪಕ್ಷವು ಹಿರಿಯ ನಾಯಕ ಪಿ.ಚಿದಂಬರಂ ನೇತೃತ್ವದಲ್ಲಿ 16 ಜನರ ಪ್ರಣಾಳಿಕೆ ಸಮಿತಿಯನ್ನ ಪ್ರಕಟ ಮಾಡಿದೆ. ಪ್ರಣಾಳಿಕೆಯಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲಾಗಿದೆ.

ಛತ್ತೀಸ್‌ಗಢದ ಮಾಜಿ ಉಪಮುಖ್ಯಮಂತ್ರಿ ಟಿ.ಎಸ್ ಸಿಂಗ್‌ದೇವ್ ಅವರನ್ನು ಚುನಾವಣಾ ಪ್ರಣಾಳಿಕೆ ಸಮಿತಿಯ ಸಂಚಾಲಕರನ್ನಾಗಿ ಮಾಡಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಶಶಿ ತರೂರ್, ಜೈರಾಮ್ ರಮೇಶ್, ಆನಂದ್ ಶರ್ಮಾ, ರಂಜಿತ್ ರಂಜನ್, ಜಿಗ್ನೇಶ್ ಮೇವಾನಿ ಸೇರಿದಂತೆ ಹಲವು ನಾಯಕರನ್ನು ಸಮಿತಿಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ದಾಳಿಯ ಮಾಸ್ಟರ್‌ ಮೈಂಡ್‌ ಮೈಸೂರಿಗ ಮನೋರಂಜನ್‌: ದೆಹಲಿ ಪೊಲೀಸರು

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆಯ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal) ಅವರು, ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಲು ಪಕ್ಷವು ಶೀಘ್ರದಲ್ಲೇ ಸಮಿತಿಗಳನ್ನು ರಚಿಸಲಿದೆ ಎಂದು ಹೇಳಿದ್ದರು. ಲೋಕಸಭೆ ಸ್ಥಾನಕ್ಕೆ ವೀಕ್ಷಕರನ್ನು ನೇಮಿಸುವುದರ ಜೊತೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷವು ಸ್ಕ್ರೀನಿಂಗ್ ಸಮಿತಿ ಸಹ ರಚಿಸುವುದಾಗಿ ಅವರು ತಿಳಿಸಿದ್ದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಸೇರ್ತಾರಾ ಜನಾರ್ದನ ರೆಡ್ಡಿ?

Share This Article