20 ಕೋಟಿ ಮೌಲ್ಯದ 50ಕ್ಕೂ ಹೆಚ್ಚು ಕೊಕೇನ್ ಕ್ಯಾಪ್ಸೂಲ್ ನುಂಗಿಕೊಂಡು ಸಾಗಾಟ – ಆರೋಪಿ ವಶಕ್ಕೆ

Public TV
1 Min Read

ಬೆಂಗಳೂರು: ಸಿನಿಮಾ ಮಾದರಿಯಲ್ಲಿ 20 ಕೋಟಿ ರೂ. ಮೌಲ್ಯದ 2 ಕೆಜಿ ಕೊಕೇನ್ ಕ್ಯಾಪ್ಸೂಲ್‍ಗಳನ್ನು ನುಂಗಿಕೊಂಡು ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯಾ ಏರ್ಲೈನ್ಸ್‌ನಲ್ಲಿ ಬಂದಿದ್ದ. ಆತನ ಹೊಟ್ಟೆಯಲ್ಲಿ ಸುಮಾರು 50ಕ್ಕೂ ಹೆಚ್ಚಿನ ಕೊಕೇನ್ ಕ್ಯಾಪ್ಸೂಲ್ಸ್ ಪತ್ತೆಯಾಗಿವೆ. ಕ್ಯಾಪ್ಸೂಲ್‍ಗಳಲ್ಲಿ ಕೊಕೇನ್ ತುಂಬಿ ಅದನ್ನು ಆರೋಪಿ ನುಂಗಿಕೊಂಡು ಸಾಗಿಸುತ್ತಿದ್ದ. ಬಳಿಕ ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿ, ಹೊಟ್ಟೆಯಲ್ಲಿದ್ದ ಕ್ಯಾಪ್ಸೂಲ್‍ಗಳನ್ನು ವೈದ್ಯರು ಹೊರಗೆ ತೆಗೆದಿದ್ದಾರೆ. ಇದನ್ನೂ ಓದಿ: ಬೈಕ್ ಅಡ್ಡ ಹಾಕಿ ಪೊಲೀಸ್ ಪೇದೆಗೆ ಹಿಗ್ಗಾಮುಗ್ಗ ಥಳಿತ- ಆರೋಪ

ಆರೋಪಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 22 ಮಂದಿಯಲ್ಲಿ ಕೊರೊನಾ ದೃಢ- ಇದುವರೆಗೆ ಮೂವರು ಸಾವು

Share This Article