‘ಸಲಾರ್’ ರಿಲೀಸ್‌ಗೂ ಮುನ್ನ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್

Public TV
1 Min Read

ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಪ್ರಶಾಂತ್ ನೀಲ್- ಪ್ರಭಾಸ್ ಕಾಂಬೋ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದೇ ಡಿ.22ಕ್ಕೆ ಸಲಾರ್‌ ಚಿತ್ರ ರಿಲೀಸ್‌ ಆಗ್ತಿದೆ.  ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ (Hombale Films) ತನ್ನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ನೀಡಿದೆ. ಕೀರ್ತಿ ಸುರೇಶ್ ನಟನೆಯ ‘ರಘು ತಾತ’ ಚಿತ್ರವನ್ನು ಘೋಷಿಸಿದ್ದ ಹೊಂಬಾಳೆ ಸಂಸ್ಥೆ ಇದೀಗ ಚಿತ್ರದ ಬಗ್ಗೆ ಹೊಸ ಮಾಹಿತಿ ತಿಳಿಸಿದೆ.

ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಹೊಂಬಾಳೆ ಸಂಸ್ಥೆ ‘ರಘು ತಾತ’ ಚಿತ್ರ ಶೀಘ್ರ ತೆರೆಗೆ ಬರಲಿದೆ ಎಂದು ತಿಳಿಸಿದೆ. ಮಹಾನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರೆ, ಸುಮನ್ ಕುಮಾರ್ ರಚಿಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದನ್ನೂ ಓದಿ:ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದಗಳು- ವಿಜಯ್‌ಗೆ ರಶ್ಮಿಕಾ ಪ್ರೇಮ ಸಂದೇಶ?

 

View this post on Instagram

 

A post shared by Hombale Films (@hombalefilms)

ತರಕಾರಿ ಮಾರುಕಟ್ಟೆಯಲ್ಲಿ ಚಿತ್ರದ ಪೋಸ್ಟರ್ ಅನ್ನು ಸಾಗಿಸುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಪೋಸ್ಟರ್‌ನಲ್ಲಿ ಕೀರ್ತಿ ಸುರೇಶ್ ಅವರ ಚಿತ್ರ ಕಂಡು ಬಂದಿದೆ. ಹಿಂದಿ ಮತ್ತು ತಮಿಳಿನಲ್ಲಿ ಹಿನ್ನಲೆ ಧ್ವನಿ ಮೂಡಿಬಂದಿದೆ. ವಿಡಿಯೋ ಕೊನೆಯಲ್ಲಿ ಕಮಿಂಗ್ ಸೂನ್ ಎನ್ನುವ ಸಂದೇಶ ಮೂಡಿ ಬಂದಿದೆ. ಆದರೆ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಚಿತ್ರದ ಸಣ್ಣ ತುಣುಕು ರಿವೀಲ್ ಮಾಡುವ ಮೂಲಕ ಸಿನಿಮಾ ರಿಲೀಸ್ ಬಗ್ಗೆ ಮುನ್ಸೂಚನೆ ನೀಡಿದೆ.

ನಾನಿ ಜೊತೆ ‘ದಸರಾ’ (Dasara) ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಸಾಧಾರಣ ಯಶಸ್ಸು ಗಳಿಸಿತ್ತು. ದಸರಾ ಚಿತ್ರದ ನಂತರ ‘ರಘು ತಾತ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ. ತೆಲುಗು, ಕನ್ನಡ, ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ಕಾಲಿವುಡ್‌ಗೂ ಹೊಂಬಾಳೆ ಸಂಸ್ಥೆ ಲಗ್ಗೆ ಇಡುತ್ತಿದೆ.

Share This Article