ಯಶ್ ನಟನೆಯ ‘ಟಾಕ್ಸಿಕ್’ ಟೈಟಲ್ ಬಗ್ಗೆ ಶಿವಣ್ಣ ಮೆಚ್ಚುಗೆ

Public TV
1 Min Read

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಗ್ಗೆ ಅನೇಕ ಕಡೆ ಚರ್ಚೆಯಾಗುತ್ತಿದೆ. ಅನೇಕರು ಟೈಟಲ್ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಿರಿಯ ನಟಿ ಶಿವರಾಜ್ ಕುಮಾರ್ (Shivaraj Kumar) ಕೂಡ ಟೈಟಲ್ ಟೀಸರ್ ಬಗ್ಗೆ ಮಾತನಾಡಿದ್ಧಾರೆ. ಯಶ್ ಅವರ ಬೆಳವಣಿಗೆ ನೋಡ್ತಾ ಇದ್ದರೆ ನನ್ನ ತಮ್ಮನೇ ಬೆಳೆಯುತ್ತಿದ್ದಾನೆ ಅನಿಸುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಅಪ್ಪು ಅವರನ್ನೂ ಶಿವರಾಜ್ ಕುಮಾರ್ ನೆನಪಿಸಿಕೊಂಡಿದ್ದಾರೆ.

ಒಂದು ನಿಮಿಷ ಹದಿನೆಂಟು ಸೆಕೆಂಡ್ಟಾಕ್ಸಿಕ್‘ (Toxic Film) ವಿಡಿಯೋ ಸೈಕ್ ಮಾಡ್ತಿದೆ. ಪ್ರತಿ ಬಾರಿ ಟೈಟಲ್ ಟೀಸರ್ ನೋಡಿದಾಗ ಹೊಸದೊಂದು ಅನುಭವ ಕೊಡ್ತಿದೆ. ಅಷ್ಟೋಂದು ವಿಷಗಳನ್ನ ಪುಟ್ಟ ವಿಡಿಯೋದಲ್ಲಿ ಅಡಗಿಸಲಾಗಿದೆ. ಟೀಸರ್ನಲ್ಲಿ ್ಯಾಪ್ ಮಾಡಿರೋದು ಯಾರು? ಮ್ಯೂಸಿಕ್ ಕೊಟ್ಟವರು ಯಾರು? ಡಿಸೈನರ್ ಯಾರು ಅನ್ನೋ ಹಲವಾರು ಪ್ರಶ್ನೆಗಳು ಅಭಿಮಾನಿಗಳು ಕೇಳ್ತಿದ್ದಾರೆ.

ಕಾಯಿಸಿಸತಾಯಿಸಿ ಯಶ್ ಅದ್ಬುತವಾದ ಕಂಟೆಂಟ್ ಜನರ ಮುಂದಿಟ್ಟಿದ್ದಾರೆ. ಡಿಸೆಂಬರ್ 8ರಂದು ರಿಲೀಸ್ ಆದಟಾಕ್ಸಿಕ್ಟೈಟಲ್ ಟೀಸರ್ ಗಂಟೆಗಳಲ್ಲಿ ಲಕ್ಷ ಲಕ್ಷ ವ್ಯೂವ್ಸ್ ಪಡೆದು ಕೊಳ್ತು. ನಿರ್ದೆಶಕಿ ಗೀತೂ ಮೋಹನ್ದಾಸ್ ಪ್ರತಿ ಫ್ರೆಮ್ನೂ ಮುತ್ತು ಪೋಣಿಸಿದ ಹಾಗೇ ಪೋಣಿಸಿದ್ದಾರೆ. ಪ್ರತಿ ಸೆಕೆಂಡ್ನಲ್ಲೂ ಒಂದಿಷ್ಟು ವಿಚಾರಳನ್ನ ಅಡಗಿಸಿ ಜನರ ಮಡಿಲಿಗೆ ಅರ್ಪಿಸಿದ್ದಾರೆ. ಸದ್ಯಟಾಕ್ಸಿಕ್ಮ್ಯೂಸಿಕ್ ವಿಚಾರ ಪಾಸಿಟಿವ್ ನೋಟ್ನಲ್ಲಿ ಸದ್ದು ಮಾಡ್ತಿದೆ.

 

ಚರಣ್ರಾಜ್ ಮ್ಯೂಸಿಕ್ ಸ್ಟುಡಿಯೋದಲ್ಲಿ ಯಶ್ (Yash) ಹೊಸ ಸಿನಿಮಾ ಕೆಲಸ ಮಾಡಿಸ್ತಿದ್ದಾರೆ ಅನ್ನೋ ವಿಚಾರ ಕೇಳಿದ್ವಿ. ಈಗ ಲಂಡನ್ ಮೂಲದ ಜೆರೆಮಿಸ್ಟಾಕ್ ಹೆಸರು ಚಾಲ್ತಿಯಲ್ಲಿದೆ. ದೇಶವಿದೇಶದಲ್ಲಿ ಮೆರವಣಿಗೆ ಹೊರಡಲಿರುವ ಟಾಕ್ಸಿಕ್ಗೆ ಇಬ್ಬರೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ ಅನ್ನೋ ಟಾಕ್ ಕೂಡ ಇದೇ. ಟೀಸರ್ನಲ್ಲಿ ್ಯಾಪ್ಗೆ ಶೃತಿ ಹಾಸನ್ (Shruti Haasan) ಕಂಠ ಕುಣಿಸಿದ್ದಾರೆ ಅನ್ನೋ ಟಾಕ್ ಕೂಡ ಇದೇ. ನಮ್ಮ ಮಣ್ಣಿನ ಬೇರು ಹೊಸ ಚಿಗುರು ಅನ್ನೋ ಕಾನ್ಸೆಪ್ಟ್ಗೆಟಾಕ್ಸಿಕ್ಟೀಮ್ ಕೈ ಹಾಕಿದೆ ಅನಿಸ್ತಿದೆ.

Share This Article