ಹಮಾಸ್ ಉಗ್ರರು ಅವಿತುಕೊಳ್ಳುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರು ಹರಿಸಿದ ಇಸ್ರೇಲ್

Public TV
1 Min Read

ಟೆಲ್ ಅವಿವ್: ಇಸ್ರೇಲ್ (Israel) ಸೇನೆ ಗಾಜಾದಲ್ಲಿನ (Gaza) ಹಮಾಸ್ (Hamas) ಉಗ್ರರು ಅವಿತುಕೊಳ್ಳಲು ಬಳಸುತ್ತಿದ್ದ ಸುರಂಗಗಳಿಗೆ (Tunnel) ಸಮುದ್ರದ ನೀರನ್ನು ಬಿಡಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ಹಮಾಸ್ ಉಗ್ರರು ಒತ್ತೆಯಾಳುಗಳನ್ನು, ಯುದ್ಧ ಸಾಮಾಗ್ರಿಗಳನ್ನು ಅಡಗಿಸಲು ಮಾತ್ರವಲ್ಲದೇ ತಾವೂ ಕೂಡಾ ಅವಿತುಕೊಳ್ಳಲು ಬಳಸಲಾಗುತ್ತಿದೆ ಎಂದು ನಂಬಲಾಗಿರುವ ಈ ಸುರಂಗಗಳನ್ನು ನಾಶಪಡಿಸಲು ಸಮುದ್ರದ ನೀರನ್ನು ಹರಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಕೆಲ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಅಯ್ಯಪ್ಪ ದರ್ಶನ ಸಿಗದೇ ವಾಪಸ್‌ – ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲ

ಸಮುದ್ರ ನೀರು ಹರಿಸುವುದರಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಪಾಯವಾಗಲಿದೆ ಎಂದು ಇತರ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವರದಿಗೆ ಇಸ್ರೇಲ್‌ನ ಸೇನೆ ಸದ್ಯ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಗುಂಡು ತಗುಲಿದ ಸ್ಥಿತಿಯಲ್ಲಿ ಅಗ್ನಿವೀರನ ಮೃತದೇಹ ಪತ್ತೆ

Share This Article