ಕಳಪೆ ಎಂದು ಜೈಲಿಗಟ್ಟಿದ ವಿನಯ್‌ ಮುಂದೆಯೇ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಕಾರ್ತಿಕ್‌

Public TV
2 Min Read

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಮೋಸ ಮಾಡಿ ಕ್ಯಾಪ್ಟನ್ ಪಟ್ಟ ಏರೋದ್ದಕ್ಕೂ ಒಗ್ಗಟ್ಟಿದೆ. ಕಳಪೆ ಹಣೆಪಟ್ಟಿ ಕೊಟ್ಟು ಸ್ಪರ್ಧಿಯನ್ನ ಜೈಲಿಗೆ ಕಳುಹಿಸೋದ್ದಕ್ಕೂ ಒಗ್ಗಟ್ಟಿದೆ. ಇದೀಗ ವಿನಯ್ ತಾಳಕ್ಕೆ ಕುಣಿದು ಕಳಪೆ ಎಂದು ಜೈಲಿಗಟ್ಟಿದ ಕಾರ್ತಿಕ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ವಾರದ ಆಟ, ಅವಮಾನ, ಹಠ ಇವೆಲ್ಲವೂ ಗಮನಿಸಿ ಈ ಬಾರಿ ಸುದೀಪ್, ಕಾರ್ತಿಕ್‌ಗೆ (Karthik Mahesh) ಭೇಷ್ ಎಂದಿದ್ದಾರೆ. ಕಾರ್ತಿಕ್‌ಗೆ ಕಿಚ್ಚನ ಚಪ್ಪಾಳೆ (Kichchana Chappale) ಸಿಕ್ಕಿದೆ. ಇದನ್ನೂ ಓದಿ:ಮಾನವೀಯತೆ ಮರೆತ ಸ್ಪರ್ಧಿಗಳು- ಸಂಗೀತಾ ಸಹೋದರ ಬೇಸರ

ಈ ವಾರವಿಡೀ ಮನೆಯಲ್ಲಿ ಸ್ಪರ್ಧಿಗಳ ಜಗಳ, ರಂಪಾಟ ಇತ್ತು. ಇದರ ನಡುವೆ ಟಾಸ್ಕ್‌ನಲ್ಲಿ ಚಪ್ಪಲಿ ಎಸೆದರು ಎಂಬ ಕಾರಣಕ್ಕೆ, ಟಾಯ್ಲೆಟ್ ವಿಚಾರ & ಮೈಮ್‌ನಿಂದಾಗಿ ಕಾರ್ತಿಕ್ ಕಳಪೆ ಕೊಟ್ಟು ಜೈಲಿಗಟ್ಟಿದ್ದರು ವಿನಯ್ & ಟೀಮ್. ಇದೀಗ ಅದೇ ಕಾರ್ತಿಕ್‌ಗೆ ಸುದೀಪ್ (Sudeep) ತಮ್ಮ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದಾರೆ. ಕಿಚ್ಚನ ಚಪ್ಪಾಳೆ ಪಡೆದ ಕಾರ್ತಿಕ್ ಭಾವುಕರಾಗಿ ಗಳಗಳನೇ ಅತ್ತಿದ್ದಾರೆ.

ಕಾರ್ತಿಕ್ ಟಾಯ್ಲೆಟ್ ವಿಚಾರವಾಗಿ ಪವಿ ಪೂವಪ್ಪ, ವಿನಯ್ (Vinay), ಸ್ನೇಹಿತ್ ಹಾಗೂ ನಮ್ರತಾ (Namratha Gowda) ಬೇಡದ ವಿಚಾರವನ್ನ ಒತ್ತಿ ಹೇಳಿದ್ದರು. ಈ ಬಗ್ಗೆ ಕಿಚ್ಚ ಸುದೀಪ್ ಪಂಚಾಯತಿ ನಡೆಸಿದರು. ಏನೂ ನಡೆಯದ ಸನ್ನಿವೇಶವನ್ನ ಇಟ್ಟುಕೊಂಡು ಮತ್ತೆ ಮತ್ತೆ ಪವಿ ಬಳಿ ಮಾತನಾಡಿ, ಏನೋ ಒಂದು ಅವರ ತಲೆಯಲ್ಲಿ ಕೂತುಕೊಳ್ಳುವ ಹಾಗೆ ಮಾಡಿ ಒಬ್ಬ ವ್ಯಕ್ತಿ ಕಳಪೆಗೆ ಹೋದಾಗ ಅದು ಚೆನ್ನಾಗಿ ಕಾಣಿಸಲ್ಲ ಎಂದು ಕಾರ್ತಿಕ್ ಟಾಯ್ಲೆಟ್ ಮ್ಯಾಟರ್‌ಗೆ ವಿನಯ್-ನಮ್ರತಾ ತಂಡಕ್ಕೆ ಕ್ಲಾಸ್ ತೆಗೆದುಕೊಂಡರು.

ಅವಮಾನದ ನಡುವೆ ಆಡಿ ಸ್ವಾಭಿಮಾನ ಬಿಟ್ಟುಕೊಡದೆ, ಹಠದಿಂದ ಆಟ ಆಡಿ, ಬಹಳಷ್ಟು ನೋಡಿದ ನಂತರ ನನಗೆ ಅನಿಸಿದ್ದು ಈ ವಾರದ ಕಿಚ್ಚನ ಚಪ್ಪಾಳೆ ಕಾರ್ತಿಕ್‌ಗೆ ಎಂದು ಹೇಳುತ್ತಾರೆ ಮೆಚ್ಚುಗೆ ಚಪ್ಪಾಳೆ ನೀಡಿದ್ದರು ಕಿಚ್ಚ. ಈ ವೇಳೆ, ಕಣ್ಣಿಗೆ ಪೆಟ್ಟಾಗಿದ್ದರೂ, ಸಂಗೀತಾ ಹಾಗೂ ಪ್ರತಾಪ್ ಕೂಡ ಎದ್ದು ನಿಂತು ಸಂತಸದಿಂದ ಕಾರ್ತಿಕ್‌ಗೆ ಚಪ್ಪಾಳೆ ತಟ್ಟಿದ್ದಾರೆ.

8 ವಾರದಿಂದ ಅನಿಸುತ್ತಿತ್ತು ಇದಕ್ಕಾಗಿ ಕೊರಗುತ್ತಿದ್ದೆ. ಯಾಕೆ ಬರುತ್ತಿಲ್ಲ? ಎಲ್ಲಾದರೂ ಮಿಸ್ ಆಗ್ತಿದ್ಯಾ ಅಂತ. ಇದು ನನಗೆ ತುಂಬಾ ಮುಖ್ಯ ಸರ್. ಥ್ಯಾಂಕ್ಯು ಸರ್ ಎಂದು ಕಾರ್ತಿಕ್ ಭಾವುಕರಾದರು. ವಾಲ್ ಆಫ್ ಮೊಮೆಂಟ್‌ನಲ್ಲಿ ಹಾಕಲು ಕಾರ್ತಿಕ್‌ಗೆ ತಾವು ಜೈಲಿನಲ್ಲಿದ್ದ ಫೋಟೋವನ್ನೇ ಬಿಗ್ ಬಾಸ್ ಕಳುಹಿಸಿದ್ದರು.

Share This Article