ಮಂತ್ರಾಲಯದಲ್ಲಿ ಹುಂಡಿ ಎಣಿಕೆ- 2 ಕೋಟಿ 86 ಲಕ್ಷ ಕಾಣಿಕೆ ಸಂಗ್ರಹ

Public TV
1 Min Read

ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ (Mantralaya) ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಲ್ಲಿ ಭಕ್ತರಿಂದ ಭಾರೀ ಮಟ್ಟದ ಕಾಣಿಕೆ ಸಂಗ್ರಹವಾಗಿದೆ.

ನವೆಂಬರ್ ತಿಂಗಳ ಕಾಣಿಕೆ ಹುಂಡಿ ಎಣಿಕೆಕಾರ್ಯ ಮುಕ್ತಾಯಗೊಂಡಿದ್ದು, ಒಟ್ಟು 2 ಕೋಟಿ 86 ಲಕ್ಷ 43,454 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 2 ಕೋಟಿ 79 ಲಕ್ಷ 66,554 ರೂಪಾಯಿ ಕರೆನ್ಸಿ ನೋಟುಗಳು ಹಾಗೂ 6 ಲಕ್ಷ 76,900 ರೂಪಾಯಿ ನಾಣ್ಯಗಳ ಸಂಗ್ರಹವಾಗಿದೆ.

62 ಗ್ರಾಂ ಚಿನ್ನ ಹಾಗೂ 1934 ಗ್ರಾಂ. ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.ಕಾಣಿಕೆ ಹುಂಡಿ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು, ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡಿದ್ದರು. ಇದನ್ನೂ ಓದಿ: Madhya Pradesh: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಸಿಎಂ ಅಭಿನಂದನೆ ಪೋಸ್ಟರ್‌ ಹಾಕಿದ ಕಾಂಗ್ರೆಸ್‌

Share This Article