ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಮಳೆ’ ಹುಡುಗಿ ಪೂಜಾ ಗಾಂಧಿ

Public TV
1 Min Read

‘ಮುಂಗಾರುಮಳೆ’ ನಟಿ ಪೂಜಾ ಗಾಂಧಿ (Pooja Gandhi) ಅವರು ಇಂದು ಮಂತ್ರ ಮಾಂಗಲ್ಯ ಪದ್ಧತಿಯಂತೆ ಬಹುಕಾಲದ ಗೆಳೆಯ ವಿಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ 10 ವರ್ಷಗಳಿಂದ ವಿಜಯ್ ಮತ್ತು ಪೂಜಾ ಗಾಂಧಿ ಸ್ನೇಹಿತರಾಗಿದ್ದರು. ವಿಜಯ್ ಅವರಿಂದಲೇ ಪೂಜಾ ಗಾಂಧಿ ಕನ್ನಡ ಕಲಿತಿದ್ದರು. ಈ ಪರಿಚಯವೇ ಪ್ರೇಮಕ್ಕೆ ಮುನ್ನುಡಿ ಬರೆದಿದೆ. ಯಲಹಂಕದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಪೂಜಾ ಗಾಂಧಿ ಇಂದು (ನ.29) ಮದುವೆಯಾಗಿದ್ದಾರೆ.

ಪೂಜಾ ಗಾಂಧಿ ಬಿಳಿ ಸೀರೆಯಲ್ಲಿ ಮಿಂಚಿದ್ರೆ, ವಿಜಯ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. 10 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಇದನ್ನೂ ಓದಿ:ಪೂಜಾ ಗಾಂಧಿ ಮದುವೆಗೆ ಕೌಂಟ್‌ಡೌನ್-‌ ಮಳೆ ಹುಡುಗಿ ಫುಲ್‌ ಮಿಂಚಿಂಗ್

ಯೋಗರಾಜ್ ಭಟ್, ಸುಧಾರಾಣಿ, ಶುಭ ಪೂಂಜಾ, ಸುಮನಾ ಕಿತ್ತೂರು, ಸಾಹಿತಿ ಜಯಂತ್ ಕಾಯ್ಕಿಣಿ ಸೇರಿದಂತೆ ಅನೇಕರು ಭಾಗಿಯಾಗಿ ನವಜೋಡಿಗೆ ಶುಭ ಕೋರಿದ್ದಾರೆ. ಮಳೆ ಹುಡುಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಅವರು ಶುಭಕೋರಿದ್ದಾರೆ.

Share This Article