ಡೀಪ್‌ಫೇಕ್ ವಿರುದ್ಧ ಗುಡುಗಿದ ರಶ್ಮಿಕಾ: ದೇಶ ನೆನಪಿಸಿಕೊಳ್ಳಿ ಅಂತಾರೆ ನಟಿ

Public TV
1 Min Read

ಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಡೀಪ್‌ಫೇಕ್ ವಿರುದ್ಧ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಡೀಪ್‌ಫೇಕ್  ವಿರುದ್ಧ ಧ್ವನಿ ಎತ್ತುವಂತೆ ಕರೆ ನೀಡಿದ್ದಾರೆ. ನಾವು ಒಳ್ಳೆಯ ದೇಶದಲ್ಲಿ ಇದ್ದೇವೆ. ಯಾರೂ ಇದನ್ನು ಮಾಡಬಾರದು. ಅಲ್ಲದೇ ಯಾರೂ ಸುಮ್ಮನೆ ಇರಬಾರದು. ದುರುಳರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿ ಎಂದಿದ್ದಾರೆ.

ತಂತ್ರಜ್ಞಾನ ದುರ್ಬಳಕೆಯಿಂದ ರಶ್ಮಿಕಾ ಮಂದಣ್ಣ (Rashmika Mandanna) ಡೀಪ್‌ಫೇಕ್ (Deepafake) ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಆಲಿಯಾ ಭಟ್‌ಗೂ ಅದೇ ಕಂಟಕ ಎದುರಾಗಿದೆ. ಬೇರೆ ಯಾರದ್ದೋ ಮಹಿಳೆಯ ದೇಹಕ್ಕೆ ಆಲಿಯಾ ಮುಖವನ್ನ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ.

ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬೆನ್ನಲೇ ಸೈಬರ್ ಕ್ರೈಂ ತಂಡ ಕಠಿಣ ಕ್ರಮ ಕೈಗೊಂಡರೂ ಕೂಡ ಮತ್ತೆ ಕಿಡಿಗೇಡಿಗಳಿಂದ ಕಾಟ ಶುರುವಾಗಿದೆ. ಈ ಸೋಷಿಯಲ್ ಮೀಡಿಯಾದಲ್ಲಿ ಅರೆ ಬರೆ ಬಟ್ಟೆಯಲ್ಲಿ ಸಖತ್ ಹಾಟ್ ಕಾಣಿಸಿಕೊಂಡಿರುವ ಯುವತಿಯ ದೇಹಕ್ಕೆ ಆಲಿಯಾ (Aliaa Bhatt) ಮುಖ ಅಂಟಿಸಿ ವೈರಲ್ ಮಾಡಿದ್ದಾರೆ.

 

ಈ ಹಿಂದೆಯೂ ಕೂಡ ರಶ್ಮಿಕಾ ಡೀಪ್‌ಫೇಕ್ ವಿಡಿಯೋ ವೈರಲ್ ಆದಾಗ ಅಮಿತಾಭ್ ಬಚ್ಚನ್ ಸೇರಿದಂತೆ ಹಲವರು ಕಲಾವಿದರು ರಶ್ಮಿಕಾ ಪರ ಧ್ವನಿಯೆತ್ತಿದ್ದರು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ಅನೇಕರು ಮನವಿ ಮಾಡಿದ್ದರು.

Share This Article