ಚೀಟಿ ತೋರಿಸಿ ಮಹಿಳೆಯ ಮಾಂಗಲ್ಯ ಕದ್ದೊಯ್ದ ಕಳ್ಳ – ಸಿಸಿಟಿವಿಯಲ್ಲಿ ಕೃತ್ಯ ಸೆರೆ

Public TV
1 Min Read

ಚಿಕ್ಕೋಡಿ: ಮಹಿಳೆಯೊಬ್ಬಳಿಗೆ (Woman) ಚೀಟಿ ತೋರಿಸಿ ಚಿನ್ನದ ಸರ (Gold Chain) ಕಳ್ಳತನ ಮಾಡಿದ ಪ್ರಕರಣ ರುಪಿನಾಳ ಗ್ರಾಮದಲ್ಲಿ ನಡೆದಿದೆ. ಕಿರಾಣಿ ಅಂಗಡಿಗೆ ಆಗಮಿಸಿದ ವ್ಯಕ್ತಿ ಒಂದು ಬಿಳಿ ಬಣ್ಣದ ಚೀಟಿ ತೋರಿಸುತ್ತಿದ್ದಂತೆ ಅಂಗಡಿ ಮಾಲಕಿ ಸುವರ್ಣ ತನ್ನ 15 ಗ್ರಾಂ. ಚಿನ್ನದ ಮಾಂಗಲ್ಯದ ಸರ ತೆಗೆದು ಆ ಚೀಟಿಯಲ್ಲಿ ಇಟ್ಟಿದ್ದಾಳೆ. ಚಿನ್ನದ ಸರ ಇಡುತ್ತಿದ್ದಂತೆ ಕಳ್ಳ ಪರಾರಿಯಾಗಿದ್ದಾನೆ.

ಯುವಕನೊಬ್ಬ ಗುಟ್ಕಾ ಖರೀದಿಸುವ ನೆಪದಲ್ಲಿ ಮಿರಜ್ ರಸ್ತೆಯ ಪಕ್ಕದ ಕಿರಾಣಿ ಅಂಗಡಿಗೆ ಬಂದಿದ್ದಾನೆ. ಬಳಿಕ ತೆಂಗಿನಕಾಯಿ, ಊದುಬತ್ತಿ ಖರೀದಿಸಿದ್ದಾನೆ. ಅಂಗಡಿಗೆ ಬಂದ ಬೇರೆ ಜನಗಳು ತೆರಳುತ್ತಿದ್ದಂತೆ ಒಂದು ಬಿಳಿ ಬಣ್ಣದ ಚೀಟಿ ತೋರಿಸಿದ್ದಾನೆ. ಚೀಟಿ ತೋರಿಸುತ್ತಿದ್ದಂತೆ ಮಹಿಳೆಗೆ ತಲೆ ಸುತ್ತುವ ಅನುಭವ ಆಗಿದೆ. ಬಳಿಕ ಆತ ಮಾಂಗಲ್ಯ ಸರ ತೆಗೆದು ಚೀಟಿಯ ಮೇಲೆ ಇರಿಸಲು ಹೇಳಿದ್ದಾನೆ ಮಹಿಳೆ ಹಾಗೆ ಮಾಡಿದ್ದಾಳೆ. ಬಳಿಕ ಆ ಚೀಟಿಯನ್ನು ಅಂಗಡಿಯ ಪೆಟ್ಟಿಗೆಯಲ್ಲಿ ಇರಿಸಲು ಹೇಳಿದ್ದಾನೆ. ಇದಾದ ನಂತರ ಚೀಟಿಯನ್ನು ತೆಗೆದುಕೊಂಡು ತನ್ನ ಬಳಿ ಇದ್ದ ಮರಳು ತುಂಬಿದ್ದ ಚೀಟಿ ಇಟ್ಟು ಬೈಕ್ ಹತ್ತಿ ಪಾರಾರಿಯಾಗಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ತಾಯಿ-ಮಗುವಿನ ಶವ ಸ್ಮಶಾನದಿಂದಲೇ ಕಳ್ಳತನ!

ಇದಾದ ಕೆಲ ಸಮಯದ ಬಳಿಕ ಮಹಿಳೆ ಎಚ್ಚೆತ್ತು ತನ್ನ ಕೊರಳಲ್ಲಿ ಮಾಂಗಲ್ಯ ಸರ ಇಲ್ಲದಿದ್ದಾಗ ಪತಿಗೆ ವಿಷಯ ಮುಟ್ಟಿಸಿದ್ದಾಳೆ. ಘಟನೆಯ ಸಂಪೂರ್ಣ ದೃಶ್ಯ ಕಿರಾಣಿ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಅಂಕಲಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 4ನೇ ತರಗತಿ ವಿದ್ಯಾರ್ಥಿಗೆ ಕೈವಾರದಿಂದ 108 ಬಾರಿ ಚುಚ್ಚಿದ ಸಹಪಾಠಿಗಳು

Share This Article