ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿಯ ಬೆಳಕು (PBLiC TV Belaku) ಕಾರ್ಯಕ್ರಮದ ಮತ್ತೊಂದು ಇಂಪ್ಯಾಕ್ಟ್ ಆಗಿದೆ. ಬಡ ಇಂಜಿನಿಯರಿಂಗ್ ವಿದ್ಯಾರ್ಥಿನಿ ಭವ್ಯ ಅವರಿಗೆ ಶಿಡ್ಲಘಟ್ಟ ಶಾಸಕ ರವಿಕುಮಾರ್ ನೆರವು ನೀಡಿದ್ದಾರೆ.

ನವೆಂಬರ್ 17ರಂದು ಪ್ರಸಾರಗೊಂಡ ಬೆಳಕು ಕಾರ್ಯಕ್ರಮವನ್ನು ವೀಕ್ಷಿಸಿದ ಶಿಡ್ಲಘಟ್ಟ ಶಾಸಕ ಮೇಲೂರು ರವಿಕುಮಾರ್ ಅವರು ವಿದ್ಯಾರ್ಥಿನಿಯ ಎಂಜಿನಿಯರಿಂಗ್ ಓದುವ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅಲ್ಲದೆ 2ನೇ ವರ್ಷದ ಕಾಲೇಜು ಶುಲ್ಕ 1 ಲಕ್ಷದ 27 ಸಾವಿರ ರೂಪಾಯಿಯ ಚೆಕ್ ನೀಡಿದ್ದಾರೆ. ಶಾಸಕರ ನೆರವು ಸಿಕ್ಕಿದ್ದರಿಂದ ಪಬ್ಲಿಕ್ ಟಿವಿಗೆ ವಿದ್ಯಾರ್ಥಿನಿ ಭವ್ಯಾ ಹಾಗೂ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

