IPL 2024 Auction: ಮತ್ತೆ ಮುಂಬೈ ಸೇರಲಿದ್ದಾರೆ ಪಾಂಡ್ಯ?

Public TV
3 Min Read

– ಕ್ಯಾಪ್ಟನ್‌ ರೇಸ್‌ನಲ್ಲಿ ಗಿಲ್‌, ರಶೀದ್‌ ಖಾನ್‌, ಕಮ್ಮಿನ್ಸ್‌, ವಿಲಿಯಮ್ಸನ್‌, ಮಿಲ್ಲರ್‌

ಮುಂಬೈ: ವಿಶ್ವಕಪ್‌ ಟೂರ್ನಿ ಮುಗಿಯುತ್ತಿದ್ದಂತೆ ಇದೀಗ ಐಪಿಎಲ್‌ ಕ್ರೇಜ್‌ ಹೆಚ್ಚಾಗುತ್ತಿದೆ. ಅದರಲ್ಲೂ 2024ರ ಐಪಿಎಲ್‌ (IPL 2024) ಟೂರ್ನಿಗಳ ಬಗ್ಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿವೆ. ಫ್ರಾಂಚೈಸಿಗಳಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಹಾಲಿ – ಮಾಜಿ ಜಾಂಪಿಯನ್ಸ್‌ಗಳು ಸ್ಟಾರ್‌ ಪ್ಲೇಯರ್‌ಗಳಿಗೆ ಗಾಳಹಾಕಿವೆ. ಪ್ರಮುಖ ಫ್ರಾಂಚೈಸಿಗಳು ಮತ್ತೆ ಹಳೆಯ ಆಟಗಾರರನ್ನು ಮರಳಿ ತಂದು ಟ್ರೋಫಿ ಗೆಲಲ್ಲು ಕಸರತ್ತು ನಡೆಸುತ್ತಿವೆ.

ಈ ನಡುವೆ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಹರಾಜಿಗೆ ಮುಂಚಿತವಾಗಿ ಭಾರತದ ಟಿ20I ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸುದ್ದಿಯಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ನಾಯಕನಾಗಿರುವ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್​ಗೆ ಮರಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಗುಜರಾತ್ ತಂಡ ಅವರನ್ನು ಬಿಡುಗಡೆ ಮಾಡಲಿದ್ದು, ಮಿನಿ ಹರಾಜಿನಲ್ಲಿ ಮುಂಬೈ ತಂಡ ಪಾಂಡ್ಯ ಅವರನ್ನು ಖರೀದಿಸಲಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಮುಂಬೈ ಇಂಡಿಯನ್ಸ್‌ ತಂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಹಾರ್ದಿಕ್‌ ಪಾಂಡ್ಯ ಗುಜರಾತ್‌ ಟೈಟಾನ್ಸ್‌ ಸೇರುವುದಕ್ಕೂ ಮುನ್ನ 7 ಆವೃತ್ತಿಗಳಲ್ಲಿ ಮುಂಬೈ ಪರ ಆಡಿದ್ದರು. 2022ರಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Taitans) ಮೊದಲ ಬಾರಿಗೆ ಪ್ರತಿನಿಧಿಸಿತು. ಟೈಟಾನ್ಸ್‌ ಪರ ನಾಯಕನಾಗಿ ಪ್ರತಿನಿಧಿಸಿದ ಪಾಂಡ್ಯ ತನ್ನ ಚೊಚ್ಚಲ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್‌ ಆಗುವಂತೆ ಮಾಡಿದರು. ಅಲ್ಲದೇ 2023ರ ಆವೃತ್ತಿಯಲ್ಲಿ ರನ್ನರ್‌ ಪ್ರಶಸ್ತಿ ದಕ್ಕುವಂತೆ ಮಾಡಿದರು. ಇದನ್ನೂ ಓದಿ: ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ಗೆ ತೆರಳಿ ಸಂತೈಸಿದ ಮೋದಿ ನಡೆಗೆ ರವಿಶಾಸ್ತ್ರಿ ಮೆಚ್ಚುಗೆ

ಸದ್ಯ ಹಾರ್ದಿಕ್ ಮತ್ತೆ ಮುಂಬೈ ಇಂಡಿಯನ್ಸ್​ (Mumbai Indians) ತಂಡಕ್ಕೆ ಹೋಗುವ ಬಗ್ಗೆ ಮಾತುಕತೆಗಳು ನಡೆದಿವೆ. ಆದರೆ ಈ ಸಮಯದಲ್ಲಿ, ಒಪ್ಪಂದಕ್ಕೆ ಇನ್ನೂ ಸಹಿ ಹಾಕದ ಕಾರಣ ಹೆಚ್ಚಿನ ಮಾಹಿತಿ ಖಚಿತಪಡಿಸಲಾಗುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಂಬೈನಲ್ಲಿ ಎಷ್ಟಿದೆ ದುಡ್ಡು?
ಕಳೆದ 2 ಋತುಗಳಲ್ಲಿ ಗಾಯಗೊಂಡಿರುವ ಜೋಫ್ರಾ ಆರ್ಚರ್ ಅವರನ್ನು 8 ಕೋಟಿ ರೂ.ಗೆ ಖರೀದಿಸಲು ಮುಂಬೈ ಇಂಡಿಯನ್ಸ್ ನಿರ್ಧರಿಸಿದೆಯೇ ಎಂಬ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ. ಐಪಿಎಲ್ ಆಡಳಿತ ಮಂಡಳಿಯು ಹೆಚ್ಚುವರಿಯಾಗಿ 5 ಕೋಟಿ ರೂ.ಗಳನ್ನು ಹೆಚ್ಚಿಸಿದೆ. ಹೀಗಾಗಿ ಹಣದ ಮೀಸಲು ಹೆಚ್ಚಿಸಲು ತಮ್ಮ ಕೆಲವು ದೊಡ್ಡ ಖರೀದಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಹೊರತುಪಡಿಸಿದರೆ ಮುಂಬೈ ತಂಡ ಒಟ್ಟು 5.50 ಕೋಟಿ ರೂ.ಗಳೊಂದಿಗೆ (ಉಳಿಕೆ ಇರುವ 50 ಲಕ್ಷ ರೂ.ಸೇರಿ) ಮಿನಿ ಹರಾಜಿಗೆ ಹೋಗಬೇಕಾಗುತ್ತದೆ. ಹಾರ್ದಿಕ್‌ ಪಾಂಡ್ಯ ಅವರ ಮೂಲ ಬೆಲೆ ಮುಂಬೈ ಇಂಡಿಯನ್ಸ್‌ನಲ್ಲಿದ್ದಾಗ 11 ಕೋಟಿ ರೂ. ಇತ್ತು. ಗುಜರಾತ್‌ ಅವರನ್ನು 15 ಕೋಟಿ ರೂ.ಗೆ ಖರೀದಿಸಿತ್ತು. ಮುಂಬೈ ಇಂಡಿಯನ್ಸ್‌ ಅಷ್ಟೇ ಹಣವನ್ನು ನೀಡಿ ಖರೀದಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪಾಂಡ್ಯ ಅಂತಿಮವಾಗಿ ಮುಂಬೈ ಇಂಡಿಯನ್ಸ್ ಪರ ಆಡಿದರೆ, ತಂಡವನ್ನು 5 ಟ್ರೋಫಿಗಳಿಗೆ ಮುನ್ನಡೆಸಿದ ಮತ್ತು ಉತ್ತಮ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಲಿದ್ದಾರೆ. ಇದನ್ನೂ ಓದಿ: ಲೆಕ್ಕಕ್ಕಿಲ್ಲ ರಿಂಕು ಸಿಕ್ಸರ್‌ – ಕೊನೇ ಎಸೆತದಲ್ಲಿ 7 ರನ್‌ ಗಳಿಸಿದ್ರೂ ಭಾರತಕ್ಕೆ ಸಿಕ್ಕಿದ್ದು 1 ರನ್‌, ಏಕೆ ಗೊತ್ತೇ?

ಇನ್ನೂ ಟ್ರೇಡಿಂಗ್​ ಆಟಗಾರರನ್ನು ಬದಲಾಯಿಸುವುದಕ್ಕೆ ಸೀಮಿತವಾಗಿರುವ ಕಾರಣ ಪಾಂಡ್ಯ ಎಂಐ ತಂಡಕ್ಕೆ ಮರಳಿದರೆ, ಯಾರು ಟೈಟಾನ್ಸ್​​ ನಾಯಕರಾಗಬಹುದು ಎಂಬ ಕೌತುಕ ಹೆಚ್ಚಾಗಿದೆ. ಸದ್ಯ ನಾಯಕನ ರೇಸ್‌ ಪಟ್ಟಿಯಲ್ಲಿ ಯುವ ಆರಂಭಿಕ ಶುಭಮನ್‌ ಗಿಲ್‌, ಅಫ್ಘಾನ್‌ ಸ್ಪಿನ್ನರ್‌ ರಶೀದ್‌ ಖಾನ್‌, ಡೇವಿಡ್‌ ಮಿಲ್ಲರ್‌, ಕೇನ್‌ ವಿಲಿಯಮ್ಸನ್‌ ಹಾಗೂ ಆಸೀಸ್‌ನ ಪ್ಯಾಟ್‌ ಕಮ್ಮಿನ್ಸ್‌ ಇದ್ದಾರೆ ಎಂದು ತಿಳಿದುಬಂದಿದೆ.

Share This Article