ನಿತ್ರಾಣಗೊಂಡಿದ್ದ ಹುಲಿ ಸಾವು- ಕತ್ತು, ಮೈಮೇಲೆ ಗಾಯ

Public TV
1 Min Read

ಚಾಮರಾಜನಗರ: ವನ್ಯ ಪ್ರಾಣಿಗಳ ಜೊತೆಗೆ ಕಾದಾಟದಲ್ಲಿ ನಿತ್ರಾಣಗೊಂಡಿದ್ದ 3 ವರ್ಷದ ಹುಲಿ (Tiger) ಸಾವನ್ನಪ್ಪಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ (Bandipura) ಮದ್ದೂರು ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅರಣ್ಯದ ಡಿ ಲೈನ್ ದೊಡ್ಡ ಕರಿಯಯ್ಯ ಎಂಬವರ ಜಮೀನಿನಲ್ಲಿ ಹುಲಿ ಪತ್ತೆಯಾಗಿತ್ತು.

ಬಂಡೀಪುರ ಹುಲಿ ಸಂರಕ್ಷಿತಾರಣ್ಯದಿಂದ ಬಂದಿದ್ದ ಹುಲಿ ನಿತ್ರಾಣಗೊಂಡಿದ್ದ ಬಗ್ಗೆ ಬೆಳಗ್ಗೆ ಅಧಿಕಾರಿಗಳಿಗೆ ಸ್ಥಳೀಯರು ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು, ನಡೆಯಲು ಆಗದ ಪರಿಸ್ಥಿತಿಯಲ್ಲಿದ್ದ ಹುಲಿಗೆ ಚಿಕಿತ್ಸೆ ಕೊಡಲೆಂದು ಸೆರೆಗೆ ಮುಂದಾಗಿದ್ದರು. ಆದರೆ ಸಂಜೆ ವೇಳೆ ಹುಲಿ ಸಾವನ್ನಪ್ಪಿದೆ. ಇದನ್ನೂ ಓದಿ: ಮಗುವಿಗೆ ಕುಕ್ಕಿದ ಕೋಳಿ- ಶಾಲೆಗೆ ಬೀಗ ಜಡಿದು ಪ್ರತಿಭಟನೆ

ವನ್ಯ ಪ್ರಾಣಿ ಜೊತೆಗೆ ಕಾದಾಟದಲ್ಲಿ ಕತ್ತು, ಮೈ ಮೇಲೆ ಗಾಯಗಳಾಗಿದೆ. ಅಧಿಕಾರಿಗಳು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಬಳಿಕ ನಿಖರ ಕಾರಣ ತಿಳಿಯಲಿದೆ. NTCA ನಿಯಮಾನುಸಾರ ಹುಲಿಯ ಅಂತ್ಯಕ್ರಿಯೆ ನಡೆಸಲು ಬಂಡೀಪುರದ ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.

Share This Article