ಸಂಗೀತಾ ಜೊತೆ ನಮ್ರತಾ ಫ್ರೆಂಡ್‌ಶಿಪ್-‌ ಸ್ನೇಹಿತ್‌ ಕಿಡಿ

Public TV
2 Min Read

ಬಿಗ್ ಬಾಸ್ ಮನೆ (Bigg Boss) ಈಗ ಇಬ್ಭಾಗವಾಗಿದೆ. ಒಂದ್ ಕಡೆ ಸಂಗೀತಾ ಮೇಲೆ ಕಾರ್ತಿಕ್ ಮುನಿಸಿಕೊಂಡಿದ್ರೆ ಇತ್ತ ಸಂಗೀತಾ ಜೊತೆ ನಮ್ರತಾ (Namratha Gowda) ಕ್ಲೋಸ್ ಆಗಿದ್ದಕ್ಕೆ ಸ್ನೇಹಿತ್ ಉರಿದುಕೊಂಡಿದ್ದಾರೆ. ನಮ್ರತಾ ಸಂಗೀತಾ ಜೊತೆ ಫ್ರೆಂಡ್ ಶಿಪ್ ಮಾಡಿದ್ದಕ್ಕೆ ಸ್ನೇಹಿತ್ (Snehith Gowda) ಕಿಡಿಕಾರಿದ್ದಾರೆ. ಇದನ್ನೂ ಓದಿ:ಡಿಸೆಂಬರ್ ನಲ್ಲಿ ಕನ್ನಡ ಚಲನಚಿತ್ರ ಕಪ್

ಕಳೆದ ವಾರದ ತನಿಷಾ- ಕಾರ್ತಿಕ್ ಜೊತೆಗಿನ ಜಗಳದ ನಂತರ ಸಂಗೀತಾ, ನಮ್ರತಾ-ವಿನಯ್ ಟೀಮ್ ಸೇರ್ಪಡೆಯಾಗಿದ್ದಾರೆ. ಒಂದು ವಾರದಿಂದ ಸಂಗೀತಾ ಜೊತೆ ನಮ್ರತಾ ಸಲುಗೆಯಿಂದ ಇರೋದು ಸ್ನೇಹಿತ್‌ಗೆ ಸಹಿಸಿಕೊಳ್ಳೋದು ಕಷ್ಟವಾಗಿದೆ. ಈ ವಿಚಾರವಾಗಿ ನಮ್ರತಾ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಸಂಗೀತಾ (Sangeetha Sringeri) ಬಂದ ಮೇಲೆ ಬದಲಾಗಿದ್ದೀರಾ ಎಂದು ಸ್ನೇಹಿತ್, ನಮ್ರತಾ ಟಾಂಗ್ ಕೊಟ್ಟಿದ್ದಾರೆ.

ನಿಮ್ಮ ಮೇಲಿದ್ದ ಫಿಲಿಂಗ್ಸ್ ಇದೆಯಲ್ಲ. ಅದನ್ನ ಕೊಲ್ಲೋಕೆ ರೆಡಿಯಾಗಿದ್ದೇನೆ. ಸಂಗೀತಾ ಜೊತೆ ನೀವು ಒಂದು ವಾರದಿಂದ ಸಲುಗೆಯಿಂದ ಇದ್ದೀರಾ. ಅವಳಿಗೆ ಏನೋ ಆದರೆ ಎಷ್ಟು ಕಂಫರ್ಟ್ ಮಾಡಿದ್ರಿ. ಅದನ್ನ ನೋಡಿ ನನಗೆ ತುಂಬಾ ಅಪ್‌ಸೆಟ್ ಆಯ್ತು. ಸುದೀಪ್ ಸರ್ ಎಪಿಸೋಡ್ ನಂತರ ಎಷ್ಟು ಅಪ್‌ಸೆಟ್ ಆಗಿದ್ದೆ, ನೀವು ಸಮಾಧಾನ ಮಾಡೋಕೆ ಬರಲಿಲ್ಲ ಎಂದು ಸ್ನೇಹಿತ್ ಮುಂದೆ ಕ್ಯಾತೆ ತೆಗೆದರು.

ನಾನು ತುಂಬಾ ಅಪ್‌ಸೆಟ್ ಆಗಿದ್ದೆ. ನಿಮಗಿಂತ ಜಾಸ್ತಿ ನಾನು ಅಪ್‌ಸೆಟ್ ಆಗಿದ್ದೆ ಎಂದು ನಮ್ರತಾ ಮಾತನಾಡಿದ್ದರು. ಅವರ ಮಾತಿಗೆ ಅಟ್‌ಲಿಸ್ಟ್ ನೀವೂ ಕೇಳಬಹುದಿತ್ತು ಎಂದು ಸ್ನೇಹಿತ್ ಹೇಳಲು ಶುರು ಮಾಡಿದ್ದರು. ಏನು ಸ್ನೇಹಿತ್ ಹುಚ್ಚಾ ನಿಮಗೆ, ಶಾರ್ಟ್ ಟೈಮ್ ಮೆಮೋರಿ ಲಾಸ್ ಆಗಿದ್ಯಾ ಅಂತ ನಮ್ರತಾ ಸ್ನೇಹಿತ್ ಮೇಲೆ ಫುಲ್ ರಾಂಗ್ ಆದರು.

ಏನು ಆಯ್ತು ಅಂತ ನಿಮಗೆ ಕೇಳಿದ್ರೆ ಗೇಮ್ ಅಂತೀರಾ. ಕೇಳಿದ್ರೆ ಮುಖಕ್ಕೆ ಹೊಡಯಬೇಕು ಅನಿಸುತ್ತೆ ಎಂದು ನಮ್ರತಾ ಸಿಡಿ ಸಿಡಿ ಎಂದಿದ್ದಾರೆ. ಅವತ್ತು ನೀವೂ ಫುಲ್ ತರಹ ನಡೆದುಕೊಂಡಿದ್ರಿ. ನೀವೂ ಹರ್ಟ್ ಆಗಿದ್ದೀರಾ. ನಿಮಗಿಂತ ಜಾಸ್ತಿ ನಾನು ಹರ್ಟ್ ಆಗಿದ್ದೀನಿ. ಒಂದೊಂದು ದಿನ ಒಂದೊಂದು ರೀತಿ ನನಗೆ ಅರ್ಥ ಆಗ್ತಿದೆ. ನನ್ನ ಮನಸ್ಸಿನಲ್ಲಿ ಇಲ್ಲದೇ ಇರೋದನ್ನೆಲ್ಲಾ ಮಾತಾನಾಡಿದ್ದರೆ ನಾನು ಒಪ್ಪಿಕೊಳ್ಳಲ್ಲ. ನಾನು ಅದಕೋಸ್ಕರ ಫೈಟ್ ಮಾಡ್ತೀನಿ ಎಂದು ಖಡಕ್ ಆಗಿ ನಮ್ರತಾ ರಿಯಾಕ್ಟ್ ಮಾಡಿದ್ದಾರೆ.

ಒಂದ್ ಕಡೆ ಸಂಗೀತಾ-ಕಾರ್ತಿಕ್, ಮತ್ತೊಂದು ಕಡೆ ನಮ್ರತಾ-ಸ್ನೇಹಿತ್ ಜಗಳ ನೋಡಿಯೇ ಮನೆಮಂದಿ ಸುಸ್ತು ಆಗಿದ್ದಾರೆ. ಇದೆಲ್ಲಾ ಯಾವಾಗ ಮುಗಿಯುತ್ತೋ.. ಜಗಳಕ್ಕೆ ಪೂರ್ಣ ವಿರಾಮ ಯಾವಾಗ ಬೀಳತ್ತೋ ಅಂತ ಕಾಯ್ತಿದ್ದಾರೆ.

Share This Article