ಮದುವೆ ಮಂಟಪದಲ್ಲಿ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ ವಧು-ವರ

Public TV
1 Min Read

ರಾಯಚೂರು: ಮದುವೆ ಮಂಟಪದಲ್ಲೇ ವಿಶ್ವಕಪ್‌ ಟೂರ್ನಿ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ವಧು-ವರ ವೀಕ್ಷಿಸಿ ಗಮನ ಸೆಳೆದಿದ್ದಾರೆ. ರಾಯಚೂರಿನಲ್ಲಿ (Raichuru) ಕಲ್ಯಾಣ ಮಂಟಪದಲ್ಲಿ ದೊಡ್ಡ ಸ್ಕ್ರೀನ್‌ ಅಳವಡಿಸಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದಾರೆ.

ಕ್ರಿಕೆಟ್ ಪ್ರೇಮಿಗಳು ತಮ್ಮ ಕುಟುಂಬದ ಮದುವೆ ಮಂಟಪದಲ್ಲೇ ಬಂಧುಗಳಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ (India-Australia) ಪಂದ್ಯ ನೋಡಲು ಎಲ್‌ಇಡಿ ಸ್ಕ್ರೀನ್ ಹಾಕಿಸಿ ಕ್ರಿಕೆಟ್ ಪ್ರೇಮ ಮೆರೆದಿದ್ದಾರೆ. ಇದನ್ನೂ ಓದಿ: ಸಮುದ್ರದಾಳದಲ್ಲಿ ಟೀಂ ಇಂಡಿಯಾಕ್ಕೆ ಆಲ್‌ ದಿ ಬೆಸ್ಟ್‌ ಹೇಳಿದ ಸಾಹಸಿಗರು

ನಗರದ ಹರ್ಷಿತಾ ಗಾರ್ಡನ್ ಕಲ್ಯಾಣ ಮಂಟಪದಲ್ಲಿ ಸಿರವಾರ ತಾಲೂಕಿನ ನುಗದೋಣಿ ಗ್ರಾಮದ ಹಳೆಮನಿ ಕುಟುಂಬದ ಹರ್ಷವರ್ಧನ್ ಹಾಗೂ ಸಹನಾ ಮದುವೆಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಣೆಯೇ ಹೈಲೈಟ್ ಆಗಿದೆ. ವಧು-ವರರು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಫೈನಲ್ ಪಂದ್ಯ ವೀಕ್ಷಣೆಗೆ ಮದುವೆ ಮಂಟಪದಲ್ಲಿ ವ್ಯವಸ್ಥೆ ಮಾಡಿದ್ದರು. ಮದುವೆಗೆ ಬಂದಿರುವ ಬಂಧುಗಳು ಎಲ್‌ಇಡಿ ದೊಡ್ಡ ಸ್ಕ್ರೀನ್‌ನಲ್ಲಿ ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಮದುವೆಗೆ ಬರುವ ಸಂಬಂಧಿಕರು, ಸ್ನೇಹಿತರಿಗಾಗಿಯೇ ಎಲ್‌ಇಡಿ ಮೂಲಕ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮದುವೆಗೆ ಬಂದವರು ನವ ವಧುವರರಿಗೆ ಶುಭಾಶಯ ತಿಳಿಸುವ ಜೊತೆಗೆ ಟೀಂ ಇಂಡಿಯಾಗೂ ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ: WC Final: ವರ್ಲ್ಡ್‌ ಕಪ್‌ ಇತಿಹಾಸದಲ್ಲಿ ಕಿಂಗ್‌ ಕೊಹ್ಲಿ ವಿಶ್ವದಾಖಲೆ

Share This Article