ರಾಜಕಾರಣಕ್ಕೆ ನಟಿ ಮಾಧುರಿ ದೀಕ್ಷಿತ್ ಎಂಟ್ರಿ

Public TV
1 Min Read

ಬಾಲಿವುಡ್ (Bollywood) ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ರಾಜಕಾರಣಕ್ಕೆ (Politics) ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಹಲವಾರು ನಟ ನಟಿಯರು ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಮಾಧುರಿ ರಾಜಕೀಯ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಾಧುರಿ ದೀಕ್ಷಿತ್ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಬಿಜೆಪಿಯಿಂದ ಟಿಕೆಟ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಜೆಪಿಯ ಮುಖಂಡರು ಮಾಧುರಿಯನ್ನು ಸಂಪರ್ಕಿಸಿದ್ದಾರಂತೆ. ಅಲ್ಲದೇ, ಪುಣೆಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ.

ಪುಣೆಯ ಲೋಕಸಭಾ ಕ್ಷೇತ್ರವು ಅತ್ಯಂತ ಪ್ರತಿಷ್ಠಿತ ಕಣವಾಗಿದ್ದು, ಇಲ್ಲಿಂದಲೇ ಮಾಧುರಿ ಅವರನ್ನು ಅಖಾಡಕ್ಕೆ ಇಳಿಸಲು ಚಿಂತನೆ ಮಾಡಲಾಗುತ್ತಿದೆ. ಬಿಜೆಪಿ (BJP) ಮತ್ತು ಮಾಧುರಿ ನಡೆವೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ಮಾಡಲಾಗಿದೆ. ಬಹುತೇಕ ಬಿಜೆಪಿಯನ್ನು ಮಾಧುರಿ ಸೇರುವುದು ಪಕ್ಕಾ ಎನ್ನುವ ಮಾಹಿತಿ ಇದೆ.

Share This Article