ಕಾವೇರಿ ತವರು ಕೊಡಗಿನಲ್ಲೇ ಕುಸಿಯುತ್ತಿದೆ‌ ಅಂತರ್ಜಲ ಮಟ್ಟ

Public TV
2 Min Read

ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದರಿಂದ ಕೇವಲ ಜಲಾಶಯಗಳು ಹಾಗೂ ನದಿಗಳ ಮೇಲೆ ಮಾತ್ರವೇ ಪರಿಣಾಮ ಬೀರಿಲ್ಲ. ಇದರೊಂದಿಗೆ ಜಿಲ್ಲೆಯಲ್ಲಿ ಅಂತರ್ಜಲದ ಮೇಲೂ ಪರಿಣಾಮ ಬೀರಿದೆ. ಜಿಲ್ಲೆಯ ಜನರು ನವೆಂಬರ್, ಡಿಸೆಂಬರ್ ತಿಂಗಳಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಅಂತಕ ಕಾಡುತ್ತಿದೆ.

ಹೌದು, ಈಗಾಗಲೇ ಮಳೆಯಾಶ್ರಿತ ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಅಗುತ್ತಿವೆ. ಕಾವೇರಿ (Cauvery River) ತವರು ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮದಲ್ಲೇ ಕಳೆದ ತಿಂಗಳಿಂದಲೇ ನೀರು ಬತ್ತುತ್ತಿದ್ದು, ಹರಿವ ನೀರಿಗೆ ತಡೆಯೊಡ್ಡಿ ಭಕ್ತರಿಗೆ ಸ್ನಾನಕ್ಕೆ ಸೌಕರ್ಯ ಕಲ್ಪಿಸಲಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿ ಹೇಳೋದೆಲ್ಲ 99.99999% ಸುಳ್ಳು, ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗುತ್ತೆ: ಸಿಎಂ ಭವಿಷ್ಯ

ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ಜಲ ಮೂಲಗಳು ಉದ್ಭವವಾಗಿದ್ದು ಅವೂ ಬತ್ತುತ್ತಿವೆ. ಕೆಲವೆಡೆ ಗದ್ದೆಗಳು ಒಣಗಿ ಗದ್ದೆ ಬಿರುಕು ಬಿಟ್ಟಿದೆ. ಇದರಿಂದಾಗಿ ಕಾವೇರಿ ನದಿತೀರದ ಪ್ರದೇಶಗಳಲ್ಲಿ ಈ ವರ್ಷ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಕಾವೇರಿ ನದಿ ಹರಿವಿನ ತಾಣಗಳಾದ ಭಾಗಮಂಡಲ, ಪುಲಿಕೋಟು, ಪಾಲೂರು, ನಾಪೋಕ್ಲು, ಬಲಮುರಿ, ಬೇತ್ರಿ ಸೇರಿದಂತೆ ಎಲ್ಲೆಡೆ ನೀರಿನ ಹರಿವು ತಗ್ಗಿದೆ.

ನದಿ ಪಾತ್ರಗಳಲ್ಲಿನ ಗದ್ದೆಗಳು ಮಳೆಗಾಲದಲ್ಲೇ ಬತ್ತಿವೆ. ನದಿ ಹರಿವಿನ ತಾಣಗಳಲ್ಲಿ ಕಣ್ಣಾಡಿಸಿದರೆ ನದಿಗೆ ಪಂಪ್ ಅಳವಡಿಸಿ ನೀರು ಹರಿಸುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದು, ಹೆಚ್ಚಾಗಿ ಅಂತರ್ಜಲದ ಮಟ್ಟ ಕುಸಿತವಾಗುತ್ತಿದೆ. ಇದನ್ನೂ ಓದಿ: ಶಾಸಕರು ಡಿಕೆಶಿಯನ್ನು ಸಿಎಂ ಮಾಡಿ ಎಂದಾಗ ಕುಮಾರಸ್ವಾಮಿ ಮಾತನಾಡಲಿಲ್ಲ: ಡಿ.ಕೆ.ಶಿವಕುಮಾರ್‌ ಆರೋಪ

ಕೊಡಗಿನಲ್ಲಿ ಹತ್ತು ವರ್ಷಗಳ ಸರಾಸರಿ ಪ್ರಮಾಣಕ್ಕೆ ಹೋಲಿಸಿದರೆ ಅಂತರ್ಜಲದ ಪ್ರಮಾಣ ಪ್ರಸಕ್ತ ಸಾಲಿನಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದೆ. ಒಂದು ವೇಳೆ ಸದ್ಯದಲ್ಲೇ ಹದವಾದ ಮಳೆ ಸುರಿಯದೇ ಹೋದರೆ ಬೇಸಿಗೆಗೂ ಮುನ್ನವೇ ಕೊಡಗು ಜಿಲ್ಲೆಯ ತೋಡುಬಾವಿಗಳು ಮಾತ್ರವಲ್ಲ ಕೊಳವೆಬಾವಿಗಳೂ ಬತ್ತುವ ಆತಂಕ ಮೂಡಿದೆ.

ಅಲ್ಲದೇ ಜಿಲ್ಲೆಯಲ್ಲಿ ಇರುವ ತೋಡುಬಾವಿಗಳ ಅಂತರ್ಜಲ ಮಟ್ಟ ಅಂತರ್ಜಲ ಸ್ಥಿರ ಜಲಮಟ್ಟದಿಂದ 0.70 ಮೀಟರ್‌ನಷ್ಟು ಕುಸಿದಿದೆ. ಕೊಳವೆಬಾವಿಗಳ ಮಟ್ಟವೂ ಇದೇ ಬಗೆಯಲ್ಲಿ ಕಡಿಮೆಯಾಗಿದೆ. ಆದರೆ ಈಗ ಮಳೆ ಇಲ್ಲದೇ ಇರುವುದರಿಂದ ಕೊಳವೆಬಾವಿಗಳ ನೀರೇ ಆಧಾರವಾಗಿದೆ. ಮಳೆ ಬಾರದೇ ಹೋದರೆ ಬೇಸಿಗೆಯ ದಿನಗಳು ನಿಜಕ್ಕೂ ಘನಘೋರವಾಗಿರಲಿದೆ.

Share This Article