ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್‌ – ಗುಡ್‌ಬೈ ಹೇಳಿದ ಬೌಲಿಂಗ್‌ ಕೋಚ್‌

Public TV
2 Min Read

ಇಸ್ಲಾಮಾಬಾದ್‌: 2023ರ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಹೀನಾಯ ಸೋಲಿನೊಂದಿಗೆ ತವರಿಗೆ ಮರಳಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿ ಹಾಗೂ ಪಾಕ್‌ ತಂಡಕ್ಕೆ ಬೌಲಿಂಗ್‌ ಕೋಚ್‌ ಆಗಿದ್ದ ಮೊರ್ನೆ ಮೊರ್ಕೆಲ್ (Morne Morkel) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಪ್ರಕಟಿಸಿದೆ.

ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿಯೂ ಆಗಿದ್ದ ಮೊರ್ಕೆಲ್‌ ಪ್ರಸಕ್ತ ವರ್ಷದ ಜೂನ್‌ ತಿಂಗಳಲ್ಲಿ 6 ತಿಂಗಳ ಒಪ್ಪಂದದ ಮೇರೆಗೆ ಪಾಕಿಸ್ತಾನ ತಂಡಕ್ಕೆ ಬೌಲಿಂಗ್‌ ಕೋಚ್‌ (Pakistans Bowling Coach) ಆಗಿ ನೇಮಕಗೊಂಡಿದ್ದರು. ಶೀಘ್ರದಲ್ಲೇ ಮೊರ್ಕೆಲ್‌ ಸ್ಥಾನಕ್ಕೆ ಬದಲಿ ಕೋಚ್‌ ನೇಮಿಸುವುದಾಗಿ ಮಂಡಳಿ ತಿಳಿಸಿದೆ. ಇದನ್ನೂ ಓದಿ: Six In Six – ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್‌ ಕ್ರಿಕೆಟಿಗ

ಪಾಕಿಸ್ತಾನ ತಂಡವು ಇದೇ ವರ್ಷದ ಡಿಸೆಂಬರ್‌ 14 ರಿಂದ 2024ರ ಜನವರಿ 7ರ ವರೆಗೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಅಷ್ಟರಲ್ಲಿ ಬದಲಿ ಕೋಚ್‌ ನೇಮಕ ಮಾಡುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್‌ ರೋಹಿತ್‌ ಶರ್ಮಾ

ಮೊರ್ಕೆಲ್‌ ಬೌಲಿಂಗ್‌ ಕೋಚ್‌ ಆಗಿ ನಿಯೋಜನೆಗೊಂಡ ಬಳಿಕ ಶ್ರೀಲಂಕಾ ವಿರುದ್ಧ ನಡೆದ 2 ಟೆಸ್ಟ್‌ ಸರಣಿಗೆ ಕೋಚ್‌ ಆಗಿದ್ದರು. ಆಗ ಪಾಕಿಸ್ತಾನ 2-0 ಅಂತರದಲ್ಲಿ ಲಂಕಾ ವಿರುದ್ಧ ಸರಣಿ ಗೆದ್ದುಕೊಂಡಿತ್ತು. ಆ ನಂತರ ಅಫ್ಘಾನಿಸ್ತಾನ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ತವರಿನಲ್ಲೇ ವೈಟ್‌ವಾಶ್‌ ಮಾಡಿತ್ತು. ಆ ಬಳಿಕ ಮೊರ್ಕೆಲ್‌ ಏಕದಿನ ಏಷ್ಯಾಕಪ್‌ ಸಂದರ್ಭದಲ್ಲೂ ಕೋಚ್‌ ಆಗಿದ್ದರು. ಆದ್ರೆ ಪಾಕ್‌ ಏಷ್ಯಾಕಪ್‌ನಲ್ಲಿ ಸೂಪರ್‌ ಫೋರ್‌ ಹಂತದಲ್ಲಿ ಶ್ರೀಲಂಕಾ ವಿರುದ್ಧ ಸೋತು ಫೈನಲ್‌ ಪ್ರವೇಶಿಸದೇ ಹಿಂದಿರುಗಿತ್ತು. ಇದೀಗ ವಿಶ್ವಕಪ್‌ ಟೂರ್ನಿಯಲ್ಲಿ ಲೀಗ್‌ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ.

ವಿಶ್ವಕಪ್‌ ಟೂರ್ನಿಯಲ್ಲಿ 9 ಲೀಗ್‌ ಪಂದ್ಯಗಳನ್ನಾಡಿದ ಪಾಕ್‌ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ 5ರಲ್ಲಿ ಸೋಲನುಭವಿಸಿತು. ಕೊನೆಯ ಪಂದ್ಯದಲ್ಲೂ ಗ್ಲೆಂಡ್‌ ವಿರುದ್ಧ ಹೀನಾಯ ಸೋಲಿನೊಂದಿಗೆ ವಿಶ್ವಕಪ್‌ ಟೂರ್ನಿಗೆ ವಿದಾಯ ಹೇಳಿತ್ತು. ಇದನ್ನೂ ಓದಿ: World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌ 

Share This Article