ಗಂಗೊಳ್ಳಿಯಲ್ಲಿ ಅಗ್ನಿ ಅವಘಡ – ಹೊತ್ತಿ ಉರಿದ 7 ಬೋಟ್‍ಗಳು

Public TV
1 Min Read

ಉಡುಪಿ: ಅಗ್ನಿ ಅವಘಡದಿಂದಾಗಿ (Fire Accident) 7 ಮೀನುಗಾರಿಕಾ ಬೋಟ್‍ಗಳು (Boats) ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಗಂಗೊಳ್ಳಿಯಲ್ಲಿ (Gangolli) ನಡೆದಿದೆ.

ದೀಪಾವಳಿ (Deepavali) ಪೂಜೆಯ ವೇಳೆ ಹಚ್ಚಿದ ಪಟಾಕಿಯಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ. ಬೈಂದೂರು ಹಾಗೂ ಗಂಗೊಳ್ಳಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ರವಾನೆ ಮಾಡಲಾಗಿದೆ. ದುರಂತದಲ್ಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಇದನ್ನೂ ಓದಿ: ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್: ತಪ್ಪಿದ ಅನಾಹುತ

ಬೋಟ್‍ಗಳನ್ನು ದುರಸ್ತಿ ಮತ್ತು ಪೇಂಟಿಂಗ್ ಕಾರ್ಯಕ್ಕೆ ದಡದಲ್ಲಿ ಇರಿಸಲಾಗಿತ್ತು. ಬೋಟ್‍ಗಳ ಮೇಲೆ ತೆಂಗಿನ ಗರಿಗಳನ್ನು ಹಾಸಲಾಗಿತ್ತು. ಆರಂಭದಲ್ಲಿ ಬೋಟ್ ಮೇಲೆ ಹಾಸಿದ್ದ ತೆಂಗಿನ ಗರಿಗಳಿಗೆ ಬೆಂಕಿ ತಗುಲಿದೆ. ಬಳಿಕ ಬೋಟ್‍ಗಳಿಗೆ ವ್ಯಾಪಿಸಿದ್ದು ಭಾರೀ ಪ್ರಮಾಣದ ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪಟಾಕಿಗೆ ಹೊಗೆಮಯವಾದ ಬೆಂಗ್ಳೂರು – ಎಲ್ಲೆಲ್ಲಿ ಎಷ್ಟು ವಾಯುಮಾಲಿನ್ಯ?

Share This Article