ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್: ತಪ್ಪಿದ ಅನಾಹುತ

Public TV
1 Min Read

ಲ್ಮಾನ್ ಖಾನ್ (Salman Khan) ನಟನೆಯ ಟೈಗರ್ 3 ಸಿನಿಮಾ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಟಿಸಿ ಘಟನೆ ನಡೆದಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ (Shah Rukh Khan) ಅತಿಥಿ ಪಾತ್ರವೊಂದನ್ನು ಮಾಡಿದ್ದಾರೆ. ಅವರ ಎಂಟ್ರಿಗೆ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದಾರೆ. ಹಾಗಾಗಿ ಥಿಯೇಟರ್ ತುಂಬಾ ಪಟಾಕಿಯ ಕಿಡಿಗಳು ಹಾರಾಡಿವೆ. ಹೊಗೆ ತುಂಬಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಮಹಾರಾಷ್ಟ್ರದ ಮಲೇಗಾಂವ್ (Malegaon) ನಲ್ಲಿ ಮೊನ್ನೆಯಿಂದ ಟೈಗರ್ 3 (Tiger 3) ಸಿನಿಮಾ ಪ್ರದರ್ಶನ ನಡೆಯುತ್ತಿದೆ. ನಿನ್ನೆ ದೀಪಾವಳಿ ಆಗಿದ್ದರಿಂದ ಸಾಕಷ್ಟು ಅಭಿಮಾನಿಗಳು ಥಿಯೇಟರ್ ಗೆ ಆಗಮಿಸಿ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ಕೆಲ ಕಿಡಿಗೇಡಿ ಅಭಿಮಾನಿಗಳು ಶಾರುಖ್ ಖಾನ್ ಎಂಟ್ರಿಗೆ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದಾರೆ. ಹೀಗಾಗಿ ಥಿಯೇಟರ್ ತುಂಬೆಲ್ಲ ಪಟಾಕಿಯ ಕಿಡಿಗಳು ತುಂಬಿಕೊಂಡಿದ್ದವು.

ಈ ಕುರಿತು ಥಿಯೇಟರ್ ಮಾಲೀಕರು ಮಾಧ್ಯಮಗಳ ಜೊತೆ ಮಾತನಾಡಿ, ಅಭಿಮಾನಿಗಳಿಂದಾಗಿ ಥಿಯೇಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಾಕಷ್ಟು ಹಾನಿ ಕೂಡ ಆಗಿದೆ. ಈ ರೀತಿಯಲ್ಲಿ ಮಾಡುವುದು ಸರಿಯಲ್ಲ. ಅಭಿಮಾನಿಗಳು ಅಭಿಮಾನವನ್ನು ಥಿಯೇಟರ್ ಹೊರಗೆ ತೋರಿಸಬೇಕು. ಕೆಲವರಿಂದಾಗಿ ಹೆಚ್ಚಿನ ಜನರಿಗೆ ತೊಂದರೆ ಆಗಿದೆ ಎಂದಿದ್ದಾರೆ.

Share This Article