ಕಲಬುರಗಿಯಲ್ಲಿ ಪರೀಕ್ಷಾ ಅಕ್ರಮ ಕೇಸ್ – ಸಿಐಡಿ ಫುಲ್ ಅಲರ್ಟ್

Public TV
1 Min Read

ಯಾದಗಿರಿ/ಕಲಬುರಗಿ: ಎಫ್‍ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಈಗಾಗಲೇ ಕಲಬುರಗಿ ಹಾಗೂ ಯಾದಗಿರಿ (Yadagiri) ಜಿಲ್ಲೆಯಲ್ಲಿ 23 ಆರೋಪಿಗಳು ಬಂಧಿತರಾಗಿದ್ದಾರೆ. ಆರ್ ಡಿ ಪಾಟೀಲ್‍ನನ್ನೂ (RD Patil) ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಈಗ ಆರ್ ಡಿ ಪಾಟೀಲ್ ಸೇರಿ ಮೂವರನ್ನು 4 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಇಡೀ ಪ್ರಕರಣದಲ್ಲಿ ಸಿದ್ರಾಮ ಆರ್ ಡಿ ಪಾಟೀಲನಿಗೆ ದಾಳವಾಗಿ ಬಳಕೆಯಾಗಿದ್ದ. ಈತನೇ 24 ಅಭ್ಯರ್ಥಿಗಳನ್ನ ಹುಡುಕಿ ಅವರೆಲ್ಲರಿಗೂ ಬ್ಲೂಟೂತ್ ಡಿವೈಸ್ ಹಾಗೂ ಮೊಬೈಲ್ ಕೊಟ್ಟಿದ್ದ. ಇನ್ನೂ ಈ ಸಿದ್ರಾಮನ ರೀತಿಯಲ್ಲೇ ಬಹುದೊಡ್ಡ ಸಂಚು ಮಾಡಿದ್ದ ಆರ್ ಡಿ ಪಾಟೀಲನ ಮತ್ತೊಬ್ಬ ಸಹಚರ ಸಾಗರ್ ಹಂಚಿನಾಳ. ಈತನೂ 20ಕ್ಕೂ ಹೆಚ್ಚು ಅಭ್ಯರ್ಥಿಗಳನ್ನ ಹುಡುಕಿ ಆರ್ ಪಾಟೀಲನ ಬಳಿ ಕರೆದೊಯ್ದಿದ್ದ. ಅದಕ್ಕಾಗಿ ವಾಟ್ಸಪ್ ಗ್ರೂಪ್ ಕ್ರಿಯೆಟ್ ಮಾಡಿ ಕಮ್ಯೂನಿಕೇಷನ್ ಮಾಡುತ್ತಿದ್ದ. ಇದೆಲ್ಲಾ ಸಿದ್ರಾಮನ ಮೊಬೈಲ್ ತಪಾಸಣೆ ಮಾಡಿದಾಗ ಪೊಲೀಸರಿಗೆ ಅಸಲಿ ಸತ್ಯ ಗೊತ್ತಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ಸಾಗರ್ ತಲೆಮರೆಸಿಕೊಂಡಿದ್ದು, ಈತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಸದ್ಯ ಕೇಸ್ ಅನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಬಂಧಿತ ಆರೋಪಿಗಳ ಬಳಿ ಸಿಕ್ಕ ಸಾಕ್ಷ್ಯಗಳ ಪ್ರಕಾರ ಅಕ್ರಮ ನಡೆದಿರೋದು ಕೇವಲ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಅಲ್ಲ. ಇದರ ವ್ಯಾಪ್ತಿ ಉತ್ತರ ಕರ್ನಾಟಕದ ಎಂಟತ್ತು ಜಿಲ್ಲೆಗಳಿಗೆ ವ್ಯಾಪಿಸಿದೆ. ಇದನ್ನೂ ಓದಿ: ವಿಜಯದ ನಾಗಾಲೋಟದತ್ತ ಟೀಂ ಇಂಡಿಯಾ- ಕೊನೆಯ ಲೀಗ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ ಚಿನ್ನಸ್ವಾಮಿ ಸ್ಟೇಡಿಯಂ

ಕಲಬುರಗಿ, ಯಾದಗಿರಿ, ಬಿಜಾಪುರ, ಬಾಗಲಕೋಟ, ರಾಯಚೂರು, ಸುತ್ತಮುತ್ತಲ ಜಿಲ್ಲೆಗಳಿಗೆ ಈ ಜಾಲ ವ್ಯಾಪಿಸಿರೋ ಸತ್ಯ ಬಯಲಾಗಿದೆ. ಹೀಗಾಗಿ ಅಕ್ರಮಕ್ಕೆ ಬುಕ್ ಆದವ್ರೆಲ್ಲಾ ಯಾವ ಯಾವ ಕೇಂದ್ರದಲ್ಲಿ ಪರೀಕ್ಷೆ ಬರೆದ್ರು, ಯಾರೆಲ್ಲಾ ಆರ್ ಡಿ ಪಾಟೀಲ್ ಜೊತೆ ಬುಕ್ ಆಗಿದ್ರು ಅನ್ನೋದರ ಬಗ್ಗೆ, ವಾಟ್ಸಪ್ ಗ್ರೂಪ್ ಜಾಡು ಹಿಡಿದು ತನಿಖೆ ಆರಂಭಿಸಿದ್ದ ಯಾದಗಿರಿ ಪೊಲೀಸರು ಭಾಗಶಃ ಮಾಹಿತಿ ಕಲೆ ಹಾಕಿದ್ದಾರೆ. ಅದನ್ನ ಸಿಐಡಿ ತಂಡಕ್ಕೂ ಹಸ್ತಾಂತರ ಮಾಡಲಿದ್ದಾರೆ.

Share This Article