ಹಾಸನಾಂಬೆ ದರ್ಶನದ ವೇಳೆ ಕರೆಂಟ್‌ ಶಾಕ್‌ – ನೂಕುನುಗ್ಗಲು, ಎದ್ನೋ ಬಿದ್ನೋ ಓಡಿದ ಮಹಿಳೆಯರು

Public TV
1 Min Read

ಬೆಂಗಳೂರು: ಕರೆಂಟ್ ಶಾಕ್‌ನಿಂದ (Electrocuted) ದಿಢೀರ್ ನೂಕು ನುಗ್ಗಲು ಸೃಷ್ಟಿಯಾದ ಘಟನೆ ಹಾಸನಾಂಬೆ ದೇವಸ್ಥಾನದಲ್ಲಿ(Hasanamba Temple) ಬಳಿ ನಡೆದಿದೆ.

ವರ್ಷಕ್ಕೆ ಒಂದು ಬಾರಿ ತೆರೆಯಲ್ಪಡುವ ಹಾಸನಾಂಬೆ ದೇವಾಲಯದ ಬಾಗಿಲು ನವೆಂಬರ್‌ 2 ರಿಂದ ತೆರೆದಿದ್ದು ಇಂದು ಬೆಳಗ್ಗೆಯಿಂದಲೂ ಸಾವಿರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು.

ಮಧ್ಯಾಹ್ನ 12.30ರ ವೇಳೆ ಉಚಿತ ದರ್ಶನದ ಸಾಲಿ ಹಾಕಿದ್ದ ಬ್ಯಾರಿಕೇಡ್‌ನಲ್ಲಿ ವಿದ್ಯುತ್‌ ಪ್ರವಹಿಸಿದೆ. ಬ್ಯಾರಿಕೇಡ್‌ ವಿದ್ಯುತ್‌ ಪ್ರವಹಿಸಿದ್ದನ್ನು ಕಂಡು ಸಾಲಿನಲ್ಲಿದ್ದ ಭಕ್ತರು ಜೀವ ಉಳಿಸಿಕೊಳ್ಳಲು ಎದ್ನೋ ಬಿದ್ನೋ ಎಂದು ಸ್ಥಳದಿಂದ ಓಡಿದ್ದಾರೆ. ಈ ವೇಳೆ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ. ಇದನ್ನೂ ಓದಿ: PSI Scam: ಪಿಎಸ್‌ಐ ಮರುಪರೀಕ್ಷೆಗೆ ಹೈಕೋರ್ಟ್‌ ಆದೇಶ – ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಜಾ

ಕೂಡಲೇ ಅಲ್ಲಿದ್ದ ಸ್ವಯಂಸ್ವೇವಕರು ಮತ್ತು ಸ್ಥಳೀಯರು ಕೆಲವರನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. 20 ಮಂದಿಗೆ ಕರೆಂಟ್‌ ಶಾಕ್‌ ಹೊಡೆದಿದ್ದು, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

 

Share This Article