ಲೋಕಸಮರ ಗೆಲ್ಲಲು ನಿತೀಶ್ ತಂತ್ರ : ಬಿಹಾರದಲ್ಲಿ ಮೀಸಲಾತಿ ಪ್ರಮಾಣ 65% ಏರಿಕೆ – ಜಾತಿ ಸಮೀಕ್ಷೆಯಲ್ಲಿ ಏನಿದೆ?

Public TV
2 Min Read

ಪಾಟ್ನಾ: ಲೋಕಸಭೆ ಚುನಾವಣೆ (Lok Sabha Election) ದೃಷ್ಟಿಯಿಂದ ದೇಶದಲ್ಲಿ ಹಿಂದುಳಿದ ವರ್ಗಗಳ (OBC) ಮೀಸಲಾತಿ ರಾಜಕೀಯ (Reservation Politics) ಜೋರಾಗಿದ್ದು, ಬಿಹಾರ (Bihar) ಈಗ ಸರ್ಕಾರಿ ನೇಮಕಾತಿಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿ ಪ್ರಮಾಣವನ್ನು 50% ರಿಂದ 65% ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಸಿಎಂ ನಿತೀಶ್ ಕುಮಾರ್ (CM Nitish Kumar) ಮಾಡಿದ್ದಾರೆ.

ಇದರಿಂದ ಆರ್ಥಿಕವಾಗಿ ಹಿಂದುಳಿದವರಿಗಾಗಿ 10%ರಷ್ಟು ಮೀಸಲಾತಿಯನ್ನು ಹೊರಗಿಡಲಾಗಿದೆ. ಈ ಮೀಸಲಾತಿಯೂ ಸೇರಿದರೆ ಒಟ್ಟಾರೆ ಮೀಸಲಾತಿ ಪ್ರಮಾಣ 75% ಹೆಚ್ಚಲಿದೆ. ಈ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕಾರ್ಯವನ್ನು ಪ್ರಸಕ್ತ ಅಧಿವೇಶನದಲ್ಲಿಯೇ ಮಾಡಲು ಪ್ರಯತ್ನಿಸಲಾಗುವುದು ಎಂದು ಬಿಹಾರ ಸಿಎಂ ಘೋಷಿಸಿದ್ದಾರೆ. ಒಬಿಸಿ ಮಹಿಳೆಯರಿಗೆ ಇರುವ 3%ರಷ್ಟು ಮೀಸಲಾತಿಯನ್ನು ರದ್ದು ಮಾಡುವುದಾಗಿ ನಿತೀಶ್‌ ಕುಮಾರ್‌ ಹೇಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಬರಲಿದ್ದಾರೆ ಅನುಷ್ಕಾ ಶೆಟ್ಟಿ, ಐಶ್ವರ್ಯಾ ರೈ

ಬಿಹಾರ ಸರ್ಕಾರವು ಈಗ ಎರಡನೇ ಹಂತದ ಜಾತಿ ಗಣತಿಯ ವರದಿಯನ್ನು ಬಿಹಾರ ವಿಧಾನಸಭೆಯಲ್ಲಿ ಮಂಡಿಸಿದೆ. ಕಳೆದ ತಿಂಗಳು ಬಿಹಾರ ಸರ್ಕಾರವು ಜಾತಿ ಗಣತಿಯ ಮೊದಲ ವರದಿಯನ್ನು ಮಂಡಿಸಿತ್ತು.
ಇದನ್ನೂ ಓದಿ: 90 ಸಾವಿರ ಪ್ಯಾಲೆಸ್ತೇನಿಯನ್ನರ ಬದಲು ಭಾರತೀಯರ ನೇಮಕಕ್ಕೆ ಮುಂದಾದ ಇಸ್ರೇಲ್‌

ಎಷ್ಟು ಇತ್ತು? ಎಷ್ಟು ಏರಿಕೆ?
ಎಸ್‌ಸಿ 6% ಇದ್ದರೆ ಇನ್ನು ಮುಂದೆ 20% ಏರಿಕೆ ಆಗಲಿದೆ. ಒಬಿಸಿ, ಇಬಿಸಿ ಮೀಸಲಾತಿ 30% ನಿಂದ 43%ಕ್ಕೆ ಏರಲಿದೆ. ಎಸ್‌ಟಿ 01% ನಿಂದ 02% ರಷ್ಟು ಏರಿಕೆಯಾದರೆ ಇಡಬ್ಲ್ಯೂಎಸ್‌ಗೆ ಹಾಲಿ ಇರುವ 10% ಮೀಸಲಾತಿ ಮುಂದುವರಿಯಲಿದೆ.

ಜಾತಿ ಗಣತಿಯಲ್ಲಿ ಏನಿದೆ?
ಬಿಹಾರ ಜಾತಿ ಗಣತಿ (Caste Survey) ಪ್ರಕಾರ ಹಿಂದೂಳಿದ ವರ್ಗ 27%, ಅತಿ ಹಿಂದುಳಿದ ವರ್ಗ 36%, ಪರಿಶಿಷ್ಟ ಜಾತಿ 19%, ಪರಿಶಿಷ್ಟ ಪಂಗಡ 1.68%, ಸಾಮಾನ್ಯ ವರ್ಗ 15% ಇದ್ದಾರೆ.  ಮೊಬೈಲಿನಲ್ಲೇ ಲೇಟೆಸ್ಟ್‌ ಸುದ್ದಿ ಓದಲು ಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲಿಗೆ ಸೇರ್ಪಡೆಯಾಗಿಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲ್‌

ಒಟ್ಟು ಕುಟುಂಬಗಳ ಪೈಕಿ 34.13% ಕುಟುಂಬಗಳು ತಿಂಗಳಿಗೆ 6,000 ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಸಂಪಾದಿಸುತ್ತಿವೆ. 29.61% ಕುಟುಂಬ 10,000 ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯ ಗಳಿಸುತ್ತಿದೆ. ಒಟ್ಟು 28% ಕುಟುಂಬಗಳು 10,000 ರೂ. ಮತ್ತು 50,000 ರೂ. ಆದಾಯದ ಒಳಗಡೆ ಜೀವಿಸುತ್ತಿವೆ. ಕೇವಲ 4% ಕುಟುಂಬ 50,000 ರೂ. ಗಿಂತ ಹೆಚ್ಚಿನ ಆದಾಯವನ್ನು ಸಂಪಾದಿಸುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 42% ಕುಟುಂಬಗಳು ಬಡತನ ರೇಖೆಗಿಂತ ಕೆಳಮಟ್ಟದಲ್ಲಿವೆ. ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ 33%ರಷ್ಟು ಕುಟುಂಬಗಳನ್ನು ಬಡ ಕುಟುಂಬಗಳೆಂದು ವರ್ಗೀಕರಿಸಲಾಗಿದೆ.

 

Share This Article