ಸಿದ್ದು-ಡಿಕೆ ಇಬ್ಬರೇ ನಿರ್ಧಾರ ಮಾಡೋದು ಬೇಡ, ಸಮಿತಿ ರಚಿಸಿ; ಹಿರಿಯ ಪ್ರಭಾವಿ ನಾಯಕರು ಬಿಗಿ ಪಟ್ಟು

Public TV
1 Min Read

ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ (Congress) 2 ಪವರ್ ಸೆಂಟರ್ ಗಳ ನಡುವೆ 3ನೇ ಪವರ್ ಸೆಂಟರ್ ಸೃಷ್ಟಿಗೆ ಪ್ರಯತ್ನ ನಡೆಯುತ್ತಿದೆ ಎಂಬ ಪಕ್ಷದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ರಾಜ್ಯ ಕಾಂಗ್ರೆಸ್ ನಲ್ಲಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಎಐಸಿಸಿ ನಾಯಕರ ಮುಂದೆ ರಾಜ್ಯ ಕಾಂಗ್ರೆಸ್ ನ ಕೆಲವು ಹಿರಿಯ ಪ್ರಭಾವಿ ನಾಯಕರು ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನಲಾಗಿದೆ. ಇಬ್ಬರೇ ನಿರ್ಧಾರ ತೆಗೆದುಕೊಳ್ಳುವ ಅದರ ಬದಲು ಸಾಮೂಹಿಕ ಅಭಿಪ್ರಾಯಕ್ಕೆ ಅನುಕೂಲವಾಗುವಂತೆ ಕೋರ್ ಕಮಿಟಿ ರಚಿಸಿ. ಎಐಸಿಸಿ ನಾಯಕರ ಮುಂದೆ ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿ ಹೋಳಿಯಂತ ಹಿರಿಯ ನಾಯಕರು ಡಿಮ್ಯಾಂಡ್ ಮಾಡಿದ್ದಾರೆ.

ರಾಜ್ಯದ ಎಲ್ಲಾ ನಿರ್ಧಾರವನ್ನು ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ (DK Shivakumar) ಇಬ್ಬರೇ ಕೈಗೊಳ್ಳುವುದು ಸರಿಯಲ್ಲ. ಇಬ್ಬರೇ ನಿರ್ಧಾರ ಕೈಗೊಳ್ಳುವಾಗ ಇಬ್ಬರ ನಡುವೆ ಪ್ರತಿಷ್ಠೆಯ ಕದನ ಏರ್ಪಟ್ಟು ಗೊಂದಲ ಆಗಬಹುದು. ಎಲ್ಲಾ ಜಾತಿ ಸಮುದಾಯಕ್ಕೆ ಆದ್ಯತೆ ನೀಡಿ 10 ಜನ ಪ್ರಮುಖರ ಕೋರ್ ಕಮಿಟಿ ರಚಿಸಿ. ಕೋರ್ ಕಮಿಟಿ ಮೂಲಕ ಎಲ್ಲವೂ ತೀರ್ಮಾನವಾದರೆ ಅದು ಸಾಮೂಹಿಕ ಅಭಿಪ್ರಾಯ ಆಗಲಿದೆ.

ಸಿದ್ದರಾಮಯ್ಯ ಹಾಗೂ ಡಿಕೆಶಿ ಪ್ರತಿಷ್ಠೆಯ ಕದನಕ್ಕೂ ಬ್ರೇಕ್ ಬೀಳಲಿದೆ. ಬಣ ರಾಜಕಾರಣಕ್ಕೆ ಬ್ರೇಕ್ ಹಾಕಿ ಸಾಮೂಹಿಕ ಅಭಿಪ್ರಾಯಕ್ಕೆ ಮಣೆ ಹಾಕಿದಂತಾಗುತ್ತದೆ. ಈ ಎಲ್ಲಾ ಕಾರಣ ಮುಂದಿಟ್ಟು ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಕಾಂಗ್ರೆಸ್ (Congress) ಗೆ ಕೋರ್ ಕಮಿಟಿ ರಚಿಸುವಂತೆ ಒತ್ತಡ ಹೇರತೊಡಗಿದ್ದಾರೆ ಎನ್ನಲಾಗಿದೆ.

ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಯಾವುದೆ ಪ್ರಮುಖ ತೀರ್ಮಾನ ಆಗಬೇಕಿದ್ದರು ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯಲಿ ಎಂಬುದು ಹಿರಿಯರ ಅಭಿಪ್ರಾಯ ಎನ್ನಲಾಗಿದೆ. ಈಗ ರಾಜ್ಯ ಕಾಂಗ್ರೆಸ್ ನ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಎಂಬ ಎರೆಡು ಪವರ್ ಸೆಂಟರ್ ಗಳ ನಡುವೆ ಕೋರ್ ಕಮಿಟಿ ಮೂಲಕ ಮೂರನೇ ಪವರ್ ಸೆಂಟರ್ ಸೃಷ್ಟಿ ಆಗುತ್ತಾ ಅನ್ನೋದೆ ಸದ್ಯದ ಕುತೂಹಲವಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್