ಅಮ್ಮನನ್ನು ನಿಂದಿಸ್ತಿದ್ದ ಮಾವನನ್ನೇ ಕೊಂದ ಅಳಿಯ!

Public TV
1 Min Read

ಹಾಸನ: ಸ್ವಂತ ಮಾವನನ್ನೇ ಅಳಿಯನೊಬ್ಬ ಚಾಕುವಿನಿಂದ ಇರಿದು ಕೊಂದ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.

ಪ್ರಭುಸ್ವಾಮಿ (50) ಕೊಲೆಯಾದ ಮಾವ. ಈತನನ್ನು ಅಳಿಯ ಅಜಯ್ (22) ಕೊಲೆ ಮಾಡಿದ್ದಾನೆ.

ಕೊಲೆಯಾದ ಪ್ರಭುಸ್ವಾಮಿ ತಂಗಿ ಸಾವಿತ್ರಮ್ಮ ಏಳೆಂಟು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ನೆಲೆಸಿದ್ದಳು. ಗಂಜಿಗೆರೆ ಗ್ರಾಮದಲ್ಲಿ ಅಕ್ಕಪಕ್ಕದ ಮನೆಯಲ್ಲಿ ಅಣ್ಣ-ತಂಗಿ ವಾಸವಾಗಿದ್ದರು. ಹೀಗಾಗಿ ಆಸ್ತಿ ವಿಚಾರವಾಗಿ ಪ್ರಭುಸ್ವಾಮಿಯು ತನ್ನ ಸಾವಿತ್ರಮ್ಮ ಜೊತೆ ಆಗಾಗ ಜಗಳವಾಡುತ್ತಿದ್ದನು. ಇದನ್ನೂ ಓದಿ: ಸರ್ಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರ ದುರ್ಮರಣ, 7 ಮಂದಿ ನಾಪತ್ತೆ

ಕಂಠಪೂರ್ತಿ ಮದ್ಯಸೇವಿಸಿ ಬಂದ ಪ್ರಭುಸ್ವಾಮಿ, ಒಡಹುಟ್ಟಿದ ತಂಗಿ ಹಾಗೂ ಆಕೆಯ ಮಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದರಿಂದ ಸಾವಿತ್ರಮ್ಮ ಬೇಸತ್ತು ಹೋಗಿದ್ದಳು. ತನ್ನ ಮಗನಿಗೆ ಮಾವ ಜಗಳವಾಡುವ ವಿಷಯ ತಿಳಿಸಿದ್ದಳು. ಇಂದು ಕೂಡ ತಂಗಿಯೊಂದಿಗೆ ಜಗಳವಾಡಿ ಕೆಟ್ಟ ಪದಗಳಿಂದ ಪ್ರಭುಸ್ವಾಮಿ ನಿಂದಿಸಿದ್ದನು.

ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ ಅಜಯ್, ಮನೆಯಲ್ಲಿಯಿದ್ದ ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್