BMTC ಸಾರಥಿಗಳ ಹಾರ್ಟ್ ಇನ್ ಡೇಂಜರ್- ಜಯದೇವ ವೈದ್ಯರ ವರದಿಯಲ್ಲಿ ಬಹಿರಂಗ

By
2 Min Read

ಬೆಂಗಳೂರು: ಆರೋಗ್ಯದ (Health) ಬಗ್ಗೆ ಕಾಳಜಿ ವಹಿಸದೇ ಸಂಸ್ಥೆಗಾಗಿ ದುಡಿಯುತ್ತಿರುವ ಬಹುತೇಕ ಬಿಎಂಟಿಸಿ ಡ್ರೈವರ್ ಗಳ ಹೃದಯ ಅಪಾಯದಲ್ಲಿಯಂತೆ. ಜಯದೇವ ಆಸ್ಪತ್ರೆ (Jayadeva Hospital) ವೈದ್ಯರ ವರದಿಯಲ್ಲಿ ಈ ಅಘಾತಕಾರಿ ಅಂಶ ಬಯಲಾಗಿದೆ.

ಹೌದು. ಬಸ್‍ಗಳ ಕೊರತೆ, ಓವರ್ ಟೈಂ ಡ್ಯೂಟಿ, ಹಬ್ಬದ ದಿನವೂ ಕೆಲಸ, ಸದಾ ಕಿರಿಕಿರಿ, ಒತ್ತಡ. ಇದು ಬಿಎಂಟಿಸಿ (BMTC) ಚಾಲಕರು ಹಾಗೂ ನಿರ್ವಹಕರ ನಿತ್ಯದ ಗೋಳು. ಶಕ್ತಿ ಯೋಜನೆ ಜಾರಿಯಾದ ನಂತರ ಈ ಸಮಸ್ಯೆ ದುಪ್ಪಟ್ಟಾಗಿದೆ. ಬಸ್‍ಗಳ ಶಾರ್ಟೇಜ್ ನಡುವೆ ಬಿಎಂಟಿಸಿ ಜನರಿಗಾಗಿ ಇರುವ ಬಸ್‍ನಲ್ಲಿಯೇ ಹೆಚ್ಚುವರಿ ಟ್ರಿಪ್ ಮಾಡಿಸ್ತಿದೆ.

ಇದು ಚಾಲಕರ ಜೀವಕ್ಕೆ ಆಪತ್ತು ಎದುರಾಗುವ ಆತಂಕ ಮೂಡಿಸಿದೆ. ಈ ಎಲ್ಲಾ ಒತ್ತಡಗಳಿಂದ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲಕರು ಹೃದ್ರೋಗದ ಅಪಾಯದಲ್ಲಿದ್ದಾರೆ. ಬಿಎಂಟಿಸಿ (BMTC) ಚಾಲಕರ ಪೈಕಿ 40-50% ರಷ್ಟು ಜನ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಜಯದೇವ ಆಸ್ಪತ್ರೆ ನಡೆಸಿದ ಆರೋಗ್ಯ ತಪಾಸಣೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೋವಿಡ್‌ನಿಂದ ಹೆಚ್ಚುತ್ತಿದ್ಯಾ ಹೃದಯಾಘಾತ?- ಹೃದ್ರೋಗ ತಜ್ಞರು ಹೇಳೋದು ಏನು?

ಜಯದೇವ ಆಸ್ಪತ್ರೆಯಲ್ಲಿ ಕಳೆದ 12 ತಿಂಗಳಿನಲ್ಲಿ 8200 ಬಿಎಂಟಿಸಿ ಚಾಲಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವೈದ್ಯರಿಂದ ಸಮಗ್ರ ಪರೀಕ್ಷೆ ನಡೆದಿದೆ. ಚಾಲಕರ ಪರೀಕ್ಷಿಸಲು 2022ರ ಆಗಸ್ಟ್‍ನಲ್ಲಿ ಬಿಎಂಟಿಸಿ ಜೊತೆ ಒಪ್ಪಂದಕ್ಕೆ ಜಯದೇವ ಸಂಸ್ಥೆ ಸಹಿ ಹಾಕಿತ್ತು. ಅದರಂತೆ ಚಾಲಕರ ಬ್ಲಡ್ ಟೆಸ್ಟ್, ಹೃದಯದ ಒತ್ತಡ ಪರೀಕ್ಷೆ, ಇಸಿಜಿ, ಇಕೋ ಟೆಸ್ಟ್ ಸೇರಿ ಸಂಪೂರ್ಣ ಆರೋಗ್ಯ ಪರೀಕ್ಷೆ ನಡೆಸಿತ್ತು. ತಪಾಸಣೆಗೆ ಒಳಗಾದ 40% ರಷ್ಟು ಚಾಲಕರಿಗೆ ಮಧುಹೇಹ ಇರೋದು ಪತ್ತೆಯಾಗಿದೆ.

ಚಾಲಕರು ಒವರ್ ಟೈಂ ಡ್ಯೂಟಿ ಮಾಡ್ತಾರೆ. ಸರಿಯಾದ ಸಮಯಕ್ಕೆ ಸಮರ್ಪಕ ಆಹಾರ ಸೇವಿಸುವುದಿಲ್ಲ. ವ್ಯಾಯಾಮದ ಕೊರತೆ ಮತ್ತು 10 ಗಂಟೆಗೂ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಹೆಚ್ಚು ಆಯಾಸಕ್ಕೆ ಒಳಗಾಗಿದ್ದಾರೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಅವರನ್ನು ಕಾಡುತ್ತಿವೆಯಂತೆ. ಅಲ್ಲದೇ 5% ರಷ್ಟು ಮಂದಿಗೆ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವುದು ಕಂಡು ಬಂದಿದೆಯಂತೆ. ಇನ್ನೂ ಇದೇ ರೀತಿಯ ಆರೋಗ್ಯ ತಪಾಸಣೆಗಳನ್ನು ಸದ್ಯದಲ್ಲೇ ಕರ್ನಾಟಕ ಕೆಎಸ್‍ಆರ್ ಟಿಸಿ ಮತ್ತು ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.

ಒಟ್ಟಾರೆ ಇತ್ತಿಚಿನ ದಿನದಲ್ಲಿ ಹಠಾತ್ ಹೃದಯಘಾತದಿಂದ ಸಾವನ್ನಪ್ಪಿತ್ತಿರುವವರ ಸಂಖ್ಯೆ ಅಧಿಕವಾಗಿದೆ. ಅಲ್ಲದೆ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಸಿಬ್ಬಂದಿ ಕೂಡ ಹಾರ್ಟ್ ಅಟ್ಯಾಕ್ ನಿಂದ ಸತ್ತಿದ್ದಾರೆ. ಹೀಗಾಗಿ ಸದಾ ಜನರ ಸೇವೆಗೆ ದುಡಿಯುತ್ತಿರುವ ಇವರು ಹೃದಯದ ಬಗ್ಗೆ ಕಾಳಜಿ ವಹಿಸೋದು ಅಗತ್ಯ ಎಂದು ತಜ್ಞರು ಹೇಳುತ್ತಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್