ಮೃಣಾಲ್ ಠಾಕೂರ್‌ಗೆ ಮದುವೆ- ಹುಡುಗ ಯಾರು ಗೊತ್ತಾ?

Public TV
1 Min Read

ಸೌತ್ ನಟಿ ಮೃಣಾಲ್ ಠಾಕೂರ್ (Mrunal Thakur) ಅವರು ಅದೆಷ್ಟೋ ಹುಡುಗರ ಪಾಲಿಗೆ ಕ್ರಶ್ ಆಗಿದ್ದಾರೆ. ಸದಾ ಸಿನಿಮಾಗಳ ಮೂಲಕ ಸುದ್ದಿಯಾಗುವ ನಟಿ ಈಗ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕೆಲದಿನಗಳ ಹಿಂದೆ, ಚಿತ್ರವೊಂದರ ನಾನಿ (Nani) ಜೊತೆಗಿನ ಲಿಪ್ ಲಾಕ್ ದೃಶ್ಯ ವೈರಲ್ ಆಗಿ ಸಖತ್ ಸದ್ದು ಮಾಡಿತ್ತು. ಈಗ ಮೃಣಾಲ್ ಮದುವೆ (Wedding) ಮ್ಯಾಟರ್ ಗಾಸಿಪ್‌ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಬೆಸ್ಟ್ ನಟಿ ಎಂದು ಮೃಣಾಲ್‌ಗೆ ಅವಾರ್ಡ್ ಸಿಕ್ಕಿತ್ತು. ಈ ವೇಳೆ, ನಿರ್ಮಾಪಕ ಅಲ್ಲು ಅರವಿಂದ್ ಮಾತನಾಡಿ, ಶೀಘ್ರದಲ್ಲಿ ಮೃಣಾಲ್‌ಗೆ ಹೈದರಾಬಾದ್ ಹುಡುಗನ ಜೊತೆ ಮದುವೆಯಾಗಲಿ ಎಂದು ಶುಭಹಾರೈಸಿದ್ದರು. ಇದನ್ನೂ ಓದಿ:ಪಾರ್ಟ್‌ನರ್ ಎಂದು ಅದಿತಿ ಜೊತೆಗಿನ ಪ್ರೀತಿ ಒಪ್ಪಿಕೊಂಡ ಸಿದ್ಧಾರ್ಥ್

ಅಲ್ಲು ಅರವಿಂದ್ (Allu Aravind) ಅವರ ಮಾತು ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಈ ಹಿಂದೆ ಲಾವಣ್ಯ ತ್ರಿಪಾಠಿಗೆ(Lavanya Tripathi) ಹೀಗೆ ಶುಭಹಾರೈಸಿದ್ದರು. ಅದರಂತೆ ಈಗ ನ.1ರಂದು ವರುಣ್ ತೇಜ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈಗ ಮೃಣಾಲ್, ಮುಂದಿನ ದಿನಗಳಲ್ಲಿ ಯಾರ ಜೊತೆ ಮದುವೆಯಾಗುತ್ತಾರೆ ಕಾದುನೋಡಬೇಕಿದೆ.

‘ಸೀತಾರಾಮಂ’ ಚಿತ್ರ ಮೂಲಕ ಗಮನ ಸೆಳೆದ ನಟಿ ಮೃಣಾಲ್‌ಗೆ ಬೇಡಿಕೆಯಿದೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ನಟಿ ಬ್ಯುಸಿಯಾಗಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್