ಹಮಾಸ್‌ನ್ನು ಭಾರತದ ಭಯೋತ್ಪಾದಕರ ಪಟ್ಟಿಗೆ ಸೇರಿಸೋ ಕಾಲ ಬಂದಿದೆ: ಇಸ್ರೇಲಿ ರಾಯಭಾರಿ

Public TV
2 Min Read

ನವದೆಹಲಿ: ಹಮಾಸ್‌ ಅನ್ನು ಭಾರತದ (India) ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಸಮಯ ಬಂದಿದೆ ಎಂದು ಭಾರತದ ಇಸ್ರೇಲ್‌ ರಾಯಭಾರಿ ನಾರ್‌ ಗಿಲೋನ್‌ (Naor Gilon) ಅಭಿಪ್ರಾಯಪಟ್ಟಿದ್ದಾರೆ.

ಕೇರಳದಲ್ಲಿ (Kerala) ಫೆಲೆಸ್ತೀನ್ ಪರ ರ‍್ಯಾಲಿಯಲ್ಲಿ ಮಾಜಿ ಹಮಾಸ್ (Hamas) ಮುಖ್ಯಸ್ಥ ಖಲೀದ್ ಮಶಾಲ್ ಭಾಗವಹಿಸಿದ್ದಕ್ಕೆ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ ಆಘಾತ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

ನಂಬಲಾಗುತ್ತಿಲ್ಲ! ಹಮಾಸ್‌ ಭಯೋತ್ಪಾದಕ ಖಲೀದ್‌ ಮಶಾಲ್‌ ಕತಾರ್‌ನಿಂದ ಕೇರಳದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ. ಹಿಂದುತ್ವ ಮತ್ತು ವರ್ಣಭೇದ ಪ್ರತಿಪಾದಿಸುವ ಜಿಯೋನಿಜಂ (ಯಹೂದಿಗಳ ರಾಷ್ಟ್ರೀಯವಾದಿ ನೀತಿ) ಅನ್ನು ಬೇರು ಸಮೇತ ಕಿತ್ತೊಗೆಯಿರಿ ಎಂದು ಕರೆ ಕೊಟ್ಟಿದ್ದಾನೆಂದು ಇಸ್ರೇಲಿ ರಾಯಭಾರಿ ಸೋಷಿಯಲ್‌ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಬೀದಿಗಿಳಿಯಿರಿ, ಇಸ್ರೇಲ್‌ ನಡೆಗೆ ಆಕ್ರೋಶ ವ್ಯಕ್ತಪಡಿಸಿ, ಹಮಾಸ್‌ಗೆ ಆರ್ಥಿಕ ಬೆಂಬಲ ನೀಡಿ ಎಂದು ರ‍್ಯಾಲಿಯಲ್ಲಿ ಪಾಲ್ಗೊಂಡಿರುವವರಿಗೆ ಮಶಾಲ್‌ ಕರೆ ನೀಡಿದ್ದಾನೆ. ಹಮಾಸ್‌ ಅನ್ನು ಭಾರತದ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಸಮಯ ಬಂದಿದೆ ಎಂದು ಗಿಲೋನ್‌ ಮತ್ತೊಂದು ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಕಾನೂನು ಉಲ್ಲಂಘನೆ – ಇರಾನ್‌ನಲ್ಲಿ 12 ನಟಿಯರಿಗೆ ನಿಷೇಧ

ಅಕ್ಟೋಬರ್‌ 7 ರಂದು ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ದಾಳಿ ನಡೆಸಿದರು. ಪರಿಣಾಮವಾಗಿ ಇಸ್ರೇಲ್‌ ಯುದ್ಧವನ್ನು ಘೋಷಿಸಿತು. ಪ್ಯಾಲಿಸ್ತೀನ್‌ನಲ್ಲಿ ಹಮಾಸ್‌ ಬಂಡುಕೋರರು ಹೆಚ್ಚಾಗಿ ಇದ್ದಾರೆಂದು ಆರೋಪಿಸಿ ಇಸ್ರೇಲ್‌ ಹೆಚ್ಚಿನ ದಾಳಿ ನಡೆಸಿತು. ಪ್ಯಾಲೆಸ್ತೀನ್‌ನಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಹಮಾಸ್‌ ಬಂಡುಕೋರರು ಅನೇಕ ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿರಿಸಿಕೊಂಡಿದೆ. ಪ್ಯಾಲೆಸ್ತೀನ್‌ ಮೇಲಿನ ಇಸ್ರೇಲ್‌ ಯುದ್ಧ ಮುಂದುವರಿದಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್