ಚಾಲಕನಿಗೆ ಹೃದಯ ಸ್ತಂಭನ- ಸಾಯೋ ಮೊದ್ಲು 48 ಪ್ರಯಾಣಿಕರ ರಕ್ಷಿಸಿದ ಬಸ್ ಚಾಲಕ

Public TV
1 Min Read

ಭುವನೇಶ್ವರ: ಬಸ್ ಚಲಾಯಿಸುತ್ತಿದ್ದ ಸಂದರ್ಭ ಚಾಲಕ (Driver) ಹೃದಯ ಸ್ತಂಭನಕ್ಕೆ (Cardiac Arrest) ಒಳಗಾಗಿದ್ದು, ಕೊನೆಯುಸಿರೆಳೆಯುವ ಮೊದಲು ಬಸ್‌ನಲ್ಲಿದ್ದ 48 ಪ್ರಯಾಣಿಕರ (Passengers) ಪ್ರಾಣ ಉಳಿಸಿದ ಘಟನೆ ಒಡಿಶಾದ (Odisha) ಭುವನೇಶ್ವರದಲ್ಲಿ (Bhubaneswar) ನಡೆದಿದೆ.

ಕಂಧಮಾಲ್ ಜಿಲ್ಲೆಯ ಪಬುರಿಯಾ ಗ್ರಾಮದ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಚಾಲಕನನ್ನು ಸನಾ ಪ್ರಧಾನ್ ಎಂದು ಗುರುತಿಸಲಾಗಿದ್ದು, ಬಸ್ ಚಾಲನೆ ಮಾಡುವಾಗ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ಸ್ಟೇರಿಂಗ್‌ನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಈ ವೇಳೆ ಬಸ್ ಅನ್ನು ರಸ್ತೆ ಬದಿಯ ಗೋಡೆಯೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲಿಸುವ ಮೂಲಕ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಸಂಕಷ್ಟ – ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ

ಖಾಸಗಿ ಬಸ್ ‘ಮಾ ಲಕ್ಷ್ಮಿ’ ಸಾಮಾನ್ಯವಾಗಿ ಪ್ರತಿ ರಾತ್ರಿ ಕಂಧಮಾಲ್‌ನ ಸಾರಂಗರ್‌ನಿಂದ ಜಿ ಉದಯಗಿರಿ ಮೂಲಕ ರಾಜ್ಯದ ರಾಜಧಾನಿ ಭುವನೇಶ್ವರಕ್ಕೆ ಚಲಿಸುತ್ತದೆ. ಘಟನೆಯ ಬಳಿಕ ಚಾಲಕನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿನ ವೈದ್ಯರು ಹೃದಯ ಸ್ತಂಭನದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಇದನ್ನೂ ಓದಿ: ಕಳ್ಳತನಕ್ಕೆ ಯತ್ನ – ಮಹಿಳೆಗೆ ಗುಂಡು ಹಾರಿಸಿ ಹತ್ಯೆ

ಮರಣೋತ್ತರ ಪರೀಕ್ಷೆಯ ನಂತರ ಪ್ರಧಾನ್ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತು ತನಿಖೆಯನ್ನೂ ಆರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದರೋಡೆ, ಅತ್ಯಾಚಾರ, ಜೈಲಿಗೆ ಹೋಗೋದ್ರಲ್ಲಿ ಮುಸ್ಲಿಮರೇ ನಂ.1- ವಿವಾದಕ್ಕೀಡಾದ ಅಜ್ಮಲ್ ಹೇಳಿಕೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್