ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್‌ಗೆ ಹೋಗ್ತಾರಾ? ತಾಯಿ ಮಂಜುಳ ಸ್ಪಷ್ಟನೆ

Public TV
1 Min Read

ಹುಲಿ ಉಗುರು ಲಾಕೆಟ್ ಕೇಸ್ ವಿಚಾರವಾಗಿ ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ವರ್ತೂರು ಸಂತೋಷ್ (Varthur Santhosh) ಬಿಡುಗಡೆಯಾಗಿದ್ದಾರೆ. ಜೈಲಿನಿಂದ ರಿಲೀಸ್ ಆಗಿ ನೇರವಾಗಿ ಬಿಗ್ ಬಾಸ್‌ಗೆ ಹೋಗ್ತಿರೋದರ ಬಗ್ಗೆ ಸಂತೋಷ್ ತಾಯಿ ಮಂಜುಳ (Manjula) ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಜೈಲಿನಿಂದ ನೇರವಾಗಿ ಬಿಗ್‌ ಬಾಸ್‌ ಮನೆಗೆ ಸಂತೋಷ್?‌

ಮಗ ಆಚೆ ಬಂದಿದ್ದು ಸಂತೋಷ ಆಗಿದೆ. ರಾಜ್ಯದ ಜನತೆಯ ಆಶೀರ್ವಾದದಿಂದ ಎಲ್ಲಾ ಒಳ್ಳೆಯದಾಗಿದೆ. ಮಗ ಬಿಗ್ ಬಾಸ್‌ಗೆ ಹೋದ ಅಂತಾ ಮಾಹಿತಿ ಇದೆ ಎಂದು ಸಂತೋಷ್ ತಾಯಿ ಹೇಳಿದ್ದಾರೆ. ನಾನು ಇನ್ನೂ ಅವನ ಜೊತೆ ಮಾತಾನಾಡೋಕೆ ಆಗಿಲ್ಲ. ಸಂತೋಷ್ ಬಿಗ್ ಬಾಸ್‌ಗೆ ಮತ್ತೆ ಹೋಗಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ. ಅವನ ಭವಿಷ್ಯ ಮುಖ್ಯ. ಹಾಗಾಗಿ ಬಿಗ್ ಬಾಸ್‌ಗೆ (Bigg Boss Kannada 10) ಹೋಗಿರೋದು ಸಂತೋಷವಾಗಿದೆ. ರಾಜ್ಯದ ಜನತೆಗೆ ಧನ್ಯವಾದಗಳು ಎಂದು ಮಂಜುಳ ಅವರು ಮಾತನಾಡಿದ್ದಾರೆ.

ಹುಲಿ ಉಗುರು ಲಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರಾಗಿತ್ತು. 2ನೇ ಎಸಿಜೆಎಂ ನ್ಯಾಯಾಲಯ 4 ಸಾವಿರ ನಗದು ಶ್ಯೂರಿಟಿ ಅಥವಾ ಒಬ್ಬ ವ್ಯಕ್ತಿಯ ಶ್ಯೂರಿಟಿ, ತನಿಖಾಧಿಕಾರಿಗಳು ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಅದರಂತೆಯೇ ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ವರ್ತೂರು ಸಂತೋಷ್ ರಿಲೀಸ್ ಆಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ಬಿಗ್ ಬಾಸ್ ಮನೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಸಂತೋಷ್ ರಿಲೀಸ್ ಸಂದರ್ಭದಲ್ಲಿ ವಕೀಲರು, ಬಿಗ್ ಬಾಸ್ ಸಿಬ್ಬಂದಿಗಳು ಮಾತನಾಡದಂತೆ ಸೂಚನೆ ನೀಡಿದ್ದರು. ಅದರಂತೆಯೇ ಯಾವುದೇ ಪ್ರತಿಕ್ರಿಯೆ ನೀಡದೇ ಸಂತೋಷ್ ತೆರಳಿದ್ದರು.

ಕುತ್ತಿಗೆಯಲ್ಲಿ ಸಂತೋಷ್ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು ಬಂಧಿಸಿದ್ದರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್