ಚರ್ಚೆಗೆ ಡೇಟ್‌, ಟೈಮ್ ಫಿಕ್ಸ್ ಮಾಡಿ: ಡಿ.ಕೆ ಶಿವಕುಮಾರ್

Public TV
1 Min Read

ಬೆಂಗಳೂರು: ನಾನು ಚರ್ಚೆಗೆ ಬರಲು ಸಿದ್ಧನಿದ್ದು, ದಿನ ಹಾಗೂ ಸಮಯ ನಿಗದಿ ಮಾಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.

ಬೆಂಗಳೂರಿನಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೆಚ್‍ಡಿಕೆ (HD Kumaraswamy) ಸುದಿಗೋಷ್ಠಿಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅವರು ಏನೋ ಹೇಳೋದು ನಾನು ಏನೋ ಹೇಳೋದು. ಗಾಳಿಯಲ್ಲಿ ಗುಂಡು ಹೊಡೆಯೋದೆಲ್ಲ ಬೇಡ. ಅವರು ಚರ್ಚೆಗೆ ಟೈಮ್ ಫಿಕ್ಸ್ ಮಾಡಲಿ. ನವೆಂಬರ್‌ 1ರ ನಂತರ ಯಾವಾಗ ಬೇಕಾದರು ಫಿಕ್ಸ್‌ ಮಾಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ, ಏನು ಉತ್ತರ ಕೊಡಬೇಕೋ ಅಲ್ಲೇ ಕೊಡ್ತೀನಿ ಎಂದು ಹೇಳಿ ಹೊರಟರು.

ಹೆಚ್‍ಡಿಕೆ ಹೇಳಿದ್ದೇನು..?: ರಾಮನಗರ-ಕನಕಪುರ ರೋಡು ಯಾರ್ ಮಾಡಿದ್ದು..?. ಅಭಿವೃದ್ಧಿ ಅಂದರೆ ಏನು ಅಂತ ತೋರಿಸಿದ್ದು 2006-2007 ಸಮ್ಮಿಶ್ರ ಸರ್ಕಾರದಿಂದ. ವಿಧಾನಸೌಧದಲ್ಲಿ ಚರ್ಚೆ ಮಾಡಲು ನಾನು ಸಿದ್ಧ. ಲಘುವಾಗಿ ಮಾತಾಡೋದು ನಿಲ್ಲಿಸಿ. ನಾನು ಕರೆಂಟ್ ಬಗ್ಗೆ ಕೇಳಿದ್ದ ಪ್ರಶ್ನೆಗೆ ಯಾರಾದ್ರು ಉತ್ತರ ಕೊಟ್ರಾ?, ಮೊದಲು ಉತ್ತರ ಕೊಡಿ. ವಿದ್ಯುತ್ ಉತ್ಪಾದನೆ ಯಾಕೆ ಮಾಡಿಲ್ಲ ನೀವು. ನಿಮ್ಮ ಯೋಗ್ಯತೆಗೆ ಕಲ್ಲಿದ್ದಲು ಖರೀದಿ ಮಾಡಿಲ್ಲ. ತಪ್ಪನ್ನ ತಪ್ಪು ಅಂತ ಹೇಳಿದ್ರೆ ವಿಲನ್ನಾ ಎಂದು ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

ಡಿಸಿಎಂ ಅವರು ಟಿಆರ್ ಪಿ ಜಾಸ್ತಿ ಇರೋ ಚಾನಲ್ ನಲ್ಲಿ ಚರ್ಚೆ ಮಾಡೋದಾಗಿ ಹೇಳಿದ್ದಾರೆ. ಅವರ ಆಹ್ವಾನ ಸ್ವೀಕಾರ ಮಾಡ್ತೀನಿ. ನಾನು ಪಲಾಯನ ಮಾಡೊಲ್ಲ. ನನ್ನ ಬಳಿ ಅಷ್ಟು ಸರಕು ಇದೆ ಎಂದು ಹೇಳುವ ಮೂಲಕ ಡಿಕೆಶಿ ಪಂಥಾಹ್ವಾನವನ್ನು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ.

ನಮ್ಮ ತಂದೆ ಹತ್ತಿರ ಜಾಲಿ ಪಂಚೆ, ಜುಬ್ಬ ಬಿಟ್ಟು ಏನೂ ಇಲ್ಲ. ನಾವೇನು ಬಿಕಾರಿಯಾಗಿ ಬದುಕಬೇಕು. ನಮ್ಮದು ಬದುಕು ಇಲ್ಲ. ನಾವು ತಲೆ ಹೊಡೆಯೋ ಕೆಲಸ ಮಾಡಿಲ್ಲ. ಬೇರೆ ಜಮೀನಿಗೆ ಫೆನ್ಸಿಂಗ್ ಹಾಕಿಲ್ಲ. ಅದೆಲ್ಲ ಹೇಗೆ ಅಂತ ನಮ್ ಅಣ್ಣನ್ನ ಕೇಳಿ ಎಂದು ಡಿಕೆ ಶಿವಕುಮಾರ್‍ಗೆ ಟಾಂಗ್ ನೀಡಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್