ನಾನು ಸಿದ್ದರಾಮಯ್ಯಗೆ ರಾಜಕೀಯ ವಿಲನ್ನೇ: ಹೆಚ್‍ಡಿಕೆ ವಾಗ್ದಾಳಿ

Public TV
2 Min Read

ಬೆಂಗಳೂರು: ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ರಾಜಕೀಯ ವಿಲನ್ನೇ ಆಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ರಾಜಕೀಯ ವಿಲನ್ ವಿಚಾರವನ್ನು ಪ್ರಸ್ತಾಪ ಮಾಡಿದರು. ನಾನು ಅವರಿಗೆ ವಿಲನ್ ಹೊರತು ಸ್ನೇಹಿತ ಅಮತ ಹೇಳಿಕೊಳ್ಳಲು ಆಗಲ್ಲ ಎಂದು ಹೇಳುವ ಮೂಲಕ ಕೌಂಟರ್ ಕೊಟ್ಟರು.

ಕೊನೆಯ ಹಂತದಲ್ಲಿ ನೀವು ಮುಖ್ಯಮಂತ್ರಿ ಆಗಿದ್ದೀರಿ. ಹೀಗಾಗಿ ಮುಖ್ಯಮಂತ್ರಿಯಾಗಿ ಒಳ್ಳೆಯ ಹೆರು ತೆಗೆದುಕೊಳ್ಳಿ. ಸರ್ಕಾರದ ಬಗ್ಗೆ ನಾನು ಚರ್ಚೆ ಮಾಡಲ್ಲ ಅಂತ ವಿಧಾನಸೌಧದಲ್ಲಿಯೇ ಹೇಳಿದ್ದೇನೆ. ಪದೇ ಪದೇ ತಾಜ್ ವೆಸ್ಟ್ ಎಂಡ್ ಹೋಟೆಲ್, ಅಲ್ಲೆಲ್ಲೋ ಅಮೆರಿಕಾದಲ್ಲಿ ಕೂತಿದ್ದ.. ಅಲ್ಲಿ ಹೋಗಿ ಕೂತಿದ್ಯಾಕೆ ಎಮದು ಪ್ರಶ್ನೆ ಮಾಡುತ್ತಾರೆ ಎಂದರು.

ಅಮೆರಿಕ ಹೋಗಿದ್ದು, ನಮ್ಮ ಸಮಾಜದ ಕಾಲಭೈರವೇಶ್ವರನ ಶಂಕುಸ್ಥಾಪನೆ ಮಾಡಬೇಕು ಎಂದು ನಮ್ಮ ಸ್ವಾಮೀಜಿಯವರು ಕರೆದಿದ್ದು.], ಹೀಗಾಗಿ ನಾನು ಅಮೆರಕಾಗೆ ಹೋಗಿದ್ದೆ. ನಾನು ಅಲ್ಲಿ ಹೋಗಿ ಇನ್ನೂ ಫ್ಲೈಟ್‌ನಿಂದ ಇಳಿದಿಲ್ಲ.. ಅದಾಗಲೇ ಇಲ್ಲಿ ಮೊದಲ ವಿಕೆಟ್ ಪತನವಾಯಿತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜಕೀಯದಲ್ಲಿ ವಿಲನ್ ಅಂದ್ರೆ ಅದು ಮಿಸ್ಟರ್ ಕುಮಾರಸ್ವಾಮಿ: ಸಿದ್ದರಾಮಯ್ಯ

ಐಎಂಎ (IMA) ಪ್ರಕರಣದ ತನಿಖೆ ನಡೆಯುತ್ತಿರುವಾಗ ಯಾವ ಅಧಿಕಾರಿಯನ್ನು ನಿಮ್ಮ ಮನೆಗೆ ಕರೆಸಿದ್ದೀರಿ ಸಿದ್ದರಾಮಯ್ಯನವರೇ..?, ಅಧಿಕಾರಿಯನ್ನು ಕರೆಸೋದಕ್ಕೆ ಹೇಳಿದ್ಯಾರು..? ಐಎಂಎ ಪ್ರಕೃನದಲ್ಲಿ ನಿಮ್ಮ ಆತ್ಮೀಯರನ್ನು ಸಿಲುಕಿಸಿ ಹಾಕೋಕೆ ನಾನು ಹೊರಟಿದ್ದೇನೆ ಅಂತ ಹೇಳಿ, ನನ್ನ ಸರ್ಕಾರ ಕಿತ್ತಾಕ್ಬೇಕು ಅಂತೇಳಿ, ಅದರಲ್ಲಿ ಯಾರೆಲ್ಲ ಪಾತ್ರ ವಹಿಸಿದ್ರಿ.. ಇವುಗಳನ್ನು ಹೇಳುತ್ತಾ ಹೋದ್ರೆ ವಿಧಾನಸೌಧದಲ್ಲಿ 2 ದಿನ ಚರ್ಚೆ ಮಾಡಬಲ್ಲೆ ಎಂದು ಹೆಚ್‍ಡಿಕೆ ಕಿಡಿಕಾರಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ರಾಜಕೀಯದಲ್ಲಿ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ. ಸರ್ಕಾರ ಬೀಳುವಾಗ ಅಮೆರಿಕಾದಲ್ಲಿ ಕೂತಿದ್ದರು. ಇದಕ್ಕೆ ಏನೂ ಕರೆಯಬೇಕು? ಇಡೀ ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟ್ ಎಂಡ್‍ನಲ್ಲಿ ಕಾಲ ಕಳೆದರು ಎಂದು ಕಿಡಿಕಾರಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್