ಡ್ರೋನ್ ಪ್ರತಾಪ್ ಮತ್ತೆ ಟಾರ್ಗೆಟ್: ವಿನಯ್ ಮೇಲೆ ಪ್ರೀತಿ

Public TV
2 Min Read

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಡ್ರೋನ್ ಪ್ರತಾಪ್ ಮತ್ತೆ ಟಾರ್ಗೆಟ್ ಆಗಿದ್ದಾರೆ. ಮೊದಲ ವಾರದಲ್ಲಿ ಅವರಿಗೆ ವಿಪರೀತ ಎನ್ನುವಂತೆ ಮನೆಯ ಸದಸ್ಯರು ಕಾಟ ಕೊಟ್ಟಿದ್ದರು. ಅವುಗಳನ್ನು ತಾಳಲಾರದೇ ಆಗ ಪ್ರತಾಪ್ ಕಣ್ಣೀರಿಟ್ಟಿದ್ದರು. ಇದೀಗ ಮತ್ತೆ ಮನೆಮಂದಿ ಸೇರಿ ಪ್ರತಾಪ್ (Drone Pratap) ಅವರನ್ನು ಅಳಿಸಿದ್ದಾರೆ. ಒಂದರ ಮೇಲೊಂದು ಮಾತಿನ ಬಾಣ ಬಿಟ್ಟು ಕಣ್ಣೀರು ಹಾಕಿಸಿದ್ದಾರೆ. ಅವರ ಮಾತುಗಳನ್ನು ಅರಗಿಸಿಕೊಳ್ಳದ ಪ್ರತಾಪ್ ಅಕ್ಷರಶಃ ಅಕ್ಕಾಬಿಕ್ಕಿಯಾಗಿದ್ದಾರೆ.

ನಿನ್ನೆಯಿಂದಲೇ ಡ್ರೋನ್ ಪ್ರತಾಪ್ ಮೇಲೆ ಮನೆಯ ಅನೇಕ ಸದಸ್ಯರು ಗರಂ ಆಗಿದ್ದರು. ಟೀಮ್‍ ವಿಚಾರದಲ್ಲಿ ವಿನಯ್ ಸಖತ್ ಬೆಂಡ್ ಎತ್ತಿದ್ದರು. ‘ಈ ಮನೆಯಲ್ಲಿ ನಿಮ್ಮದೇ ಆದ ಟೀಮ್ ಇದೆಯಾ? ಗುಂಪುಗಾರಿಕೆ ಮಾಡ್ತಿದ್ದೀರಾ?’ ಎಂದು ಪ್ರತಾಪ್ ಮೇಲೆ ನೇರವಾಗಿಯೇ ಆರೋಪ ಮಾಡಿದ್ದರು. ‘ಸಡನ್ ಆಗಿ ಶೈನ್ ಆಗೋಕೆ ಹೋಗಬೇಡ. ಇನ್ನೂ ಟೈಮ್ ಇದೆ. ಈಗ ಕಳೆದಿರೋದು ಕೇವಲ 15 ದಿನ ಮಾತ್ರ, ಇನ್ನೂ 75 ದಿವಸ ಇದ್ದಾವೆ. ನೆನಪಿಟ್ಕೋ.. ಬಾಲ ಬಿಚ್ಚರೆ ಅಷ್ಟೇ’ ಎನ್ನುವಂತೆ ವಾರ್ನ್ ಮಾಡಿದ್ದರು ವಿನಯ್. ವಿನಯ್ (Vinay Gowda) ಮಾತು ಕೇಳಿಸಿಕೊಂಡ ಪ್ರತಾಪ್‍್ ಗಾಬರಿಯಲ್ಲೇ ಕ್ಷಣ ಹೊತ್ತು ಕೂತಿದ್ದರು.

ಪ್ರತಾಪ್ ವಿಷಯದಲ್ಲಿ ಕೇವಲ ವಿನಯ್ ಮಾತ್ರವಲ್ಲ, ನಮ್ರತಾ ಗೌಡ ಕೂಡ ತಾಳ್ಮೆ ಕಳೆದುಕೊಂಡು ಮಾತನಾಡಿದ್ದಾರೆ.  ಪ್ರತಾಪ್ ಅವರನ್ನೇ ಗುರಿಯಾಗಿಸಿಕೊಂಡು ‘ಆಚೆ ನೀವು ಪಾಪ.. ಅನ್ನೋ ಹಾಗೆ ಪೋಟ್ರೆ ಆಗ್ತಿದ್ದೀರಿ ಅಂತ ಅನಿಸ್ತಿದೆಯಾ?.. ನೋ.. ನೀವು ಮೂರ್ಖರಾಗ್ತಿದ್ದೀರಿ’ ಎಂದು ಖಾರವಾಗಿಯೇ ಹೇಳಿದರು. ನಮ್ರತಾ ಆಡಿದ ಅಷ್ಟೂ ಮಾತಿಗೂ ಪ್ರತಾಪ್ ಯಾವುದೇ ಉತ್ತರ ನೀಡಲಿಲ್ಲ. ಮನೆಯ ಕ್ಯಾಪ್ಟನ್ ರಕ್ಷಕ್ ಮತ್ತು ಡ್ರೋನ್ ಪ್ರತಾಪ್ ನಡುವೆಯೂ ಮಾತಿನ ಚಕಮಕಿ ನಡೆದಿದೆ.

ಮನೆಯ ಕ್ಯಾಪ್ಟನ್ ಆಗಿರುವ ರಕ್ಷಕ್ ಕೆಟ್ಟ ಪದಗಳನ್ನು ಬಳಸಿದರು ಎಂದು ಡ್ರೋನ್ ಪ್ರತಾಪ್ ಆರೋಪಿಸುತ್ತಾರೆ. ‘ಹೌದು ಏನೀಗ?.. ಗೂಬೆ ಅಂತ ಇನ್ನೊಂದ್ ಸಲ ಕರೀತೀನಿ.. ಏನ್ ಮಾಡ್ತಿಯಾ?’ ಎಂದು ಪ್ರತಾಪ್ ಮೇಲೆ ಮುಗಿ ಬೀಳುತ್ತಾರೆ. ಡ್ರೋನ್ ಪ್ರತಾಪ್ ಮತ್ತು ಮನೆಯ ಸದಸ್ಯರ ನಡುವಿನ ಜಟಾಪಟಿ ಇವತ್ತಿಗೂ ಮುಂದುವರೆದಿದೆ. ಇವತ್ತು ಪ್ರತಾಪ್ ಮತ್ತು ವಿನಯ್ ಅವರನ್ನು ವೇದಿಕೆಯ ಮೇಲೆ ಕೂರಿಸಿಕೊಂಡು ಮನೆಯ ಸದಸ್ಯರು ಬೆಂಡ್ ಎತ್ತಿದ್ದಾರೆ. ಅದರಲ್ಲೂ ಪ್ರತಾಪ್ ಮೇಲೆಯೇ ಜಾಸ್ತಿ ಕಿಡಿಕಾರಿದ್ದಾರೆ. ಎಲ್ಲರ ಮಾತುಗಳನ್ನು ಕೇಳಿಸಿಕೊಂಡ ಪ್ರತಾಪ್ ಕಣ್ಣೀರು ಹಾಕಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್