ನಾವೆಲ್ಲ ಗೆಲ್ಲುವುದು ಮೋದಿ ಹೆಸರಿಂದ, ಮೋದಿಯೇ ನಮ್ಮ ದೇವರು: ಪ್ರತಾಪ್ ಸಿಂಹ

By
1 Min Read

ಮೈಸೂರು: ನಾವೆಲ್ಲ ಗೆಲ್ಲುವುದೇ ಮೋದಿ ಹೆಸರಿಂದ ಆಗಿದ್ದು, ಹೀಗಾಗಿ ಮೋದಿಯೇ (Narendra Modi) ನಮ್ಮ ದೇವರು ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು ಯಾರು ಆಗಬೇಕು.?, ಯಾವಾಗ ಮಾಡಬೇಕು.? ಎಂಬುದನ್ನು ನಮ್ಮ ಹೈಕಮಾಂಡ್ ನಿರ್ಧರಿಸುತ್ತೆ. ಅದನ್ನು ಹೇಳಲು, ನಾನು ಬಹಳ ಜ್ಯೂನಿಯರ್. ನಾನು ಪಕ್ಷಕ್ಕೆ ಬಂದು ಈಗ 10 ವರ್ಷ ಆಗುತ್ತಿದೆ ಅಷ್ಟೇ ಎಂದರು.

ನಾನು ಪಕ್ಷದ ನೇಮಕದ ವಿಚಾರದಲ್ಲಿ ಹೇಳಲು ಆಗುವುದಿಲ್ಲ. ಪಕ್ಷದ ಕಾರ್ಯಕರ್ತರು ರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ಶೋಭಾ ಕರಂದ್ಲಾಜೆ (Shobha Karandlaje) ಅವರನ್ನು ಕರೆಯುತ್ತಿದ್ದರು. ಹೀಗಾಗಿ ನಾನು ಅದೇ ದಾಟಿಯಲ್ಲೇ ಶುಭಾಶಯ ಕೋರಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಉತ್ತರಕನ್ನಡದಲ್ಲಿ ಡೆಂಗ್ಯೂಗೆ ಇನ್ನೊಬ್ಬ ವ್ಯಕ್ತಿ ಬಲಿ- ಸಾವಿನ ಸಂಖ್ಯೆ 2ಕ್ಕೆ ಏರಿಕೆ

ನಾವೆಲ್ಲ ಗೆಲ್ಲುವುದು ಮೋದಿ ಅವರ ಹೆಸರಿನಿಂದ, ಮೋದಿ ನಮ್ಮ ದೇವರು. ಲೋಕಸಭಾ ಚುನಾವಣೆಗೂ ರಾಜ್ಯಾಧ್ಯಕ್ಷರ ನೇಮಕಕ್ಕೂ ಸಂಬಂಧ ಇರುವುದಿಲ್ಲ. ಬಿಜೆಪಿ ಸಂಘಟನೆ ದೃಷ್ಟಿಯಿಂದ ಅಷ್ಟೇ ರಾಜ್ಯಾಧ್ಯಕ್ಷರು ಆಗಬೇಕು. ಲೋಕಸಭಾ ಚುನಾವಣೆ ಮೋದಿ ಅವರ ಹೆಸರಿನಲ್ಲೇ ನಡೆಯುತ್ತದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್